
ಮಾನ್ವಿ,ಏ.೦೫ – ಭಾರತದ ರೈತರ ಮೂಲ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಹಾಗೂ ರೈತ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಹ ನಿಷ್ಠೆಯಿಂದ ಕೆಲಸ ಮಾಡುವ ಜನಪರ ಮತ್ತು ರೈತ ಪರ ಕಾಳಜಿಯುಳ್ಳ ನಾಯಕ ನಮ್ಮ ನರೇಂದ್ರ ಮೋದಿಯವರು ಎಂದು ಬಿಜೆಪಿ ರೈತಮೋರ್ಚ್ ರಾಜ್ಯ ಪ್ರದಾನ ಕಾರ್ಯದರ್ಶಿ ಶಿವಪ್ರಸಾದ್ ಹೇಳಿದರು..
ಪಟ್ಟಣದ ಚೌಡೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಬಿಜೆಪಿ ರೈತ ಮೋರ್ಚ್ ಸಮಾರಂಭದಲ್ಲಿ ಡಾ ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತಾನಾಡಿದ ಅವರು ದೇಶಗಳಲ್ಲಿ ಕಳೆದ ೭೫ ವರ್ಷಗಳಿಂದ ಸುಳ್ಳು ಭರವಸೆಯನ್ನು ನೀಡುತ್ತಾ ಬಂದಿರುವ ಕಾಂಗ್ರೆಸ್ ಪಕ್ಷವನ್ನು ಜನರು ದಿಕ್ಕರಿಸಿ ಈಗ ಬಿಜೆಪಿಯತ್ತಾ ಮುಖ ಮಾಡಿದ್ದಾರೆ ಕಳೆದ ಎರಡು ಅವಧಿಯಲ್ಲಿ ಸರ್ಕಾರ ನಡೆಸುತ್ತಿರುವ ನಮ್ಮ ಬಿಜೆಪಿ ಸರ್ಕಾರ ಭಾರತ ವಿಶ್ವವೇ ನಮ್ಮನ್ನು ನೋಡುವಂತೆ ಮಾಡಿದ ಕೀರ್ತಿ ಪ್ರಧಾನಿಗಳಿಗೆ ಸಲ್ಲುತ್ತದೆ ಹಾಗೂ ರೈತರು ಇತ್ತೀಚಿನ ದಿನಗಳಲ್ಲಿ ಬಹಳ ಸಂತೋಷವಾಗಿ ಇಳುವರಿ ಮಾಡುವುದಕ್ಕೆ ಸಹಕಾರ ಮಾಡುತ್ತಿರುವುದು ಬಿಜೆಪಿ ಸರ್ಕಾರದ ಉತ್ತಮ ಕೆಲಸವಾಗಿದೆ ಎಂದರು.
ನಂತರ ಮಾಜಿ ಶಾಸಕ ಗಂಗಾಧರ ನಾಯಕ ಮಾತಾನಾಡಿ ಕಾಂಗ್ರೆಸಿನ ಇಂದಿರಾಗಾಂಧಿ, ಸೋನಿಯಾ ಗಾಂಧಿ, ಗ್ಯಾಸ್ ನೀಡುತ್ತೇವೆ ಎಂದು ಸುಳ್ಳು ಹೇಳಿ ಅಧಿಕಾರಿ ಪಡೆಯುತ್ತಿದ್ದರು ಆದರೆ ಮೋದಿ ಆಗಮಿಸಿ ಮಹಿಳೆಯರಿಗೆ ತೊಂದರೆಯಾಗುತ್ತದೆ ಎನ್ನುವ ಉದ್ದೇಶದಿಂದ ಉಚಿತ ಗ್ಯಾಸ್ ನೀಡಿದ್ದಾರೆ, ಆಯುಷ್ಮಾನ್ ಭಾರತ್ ನೀಡಿ ಬಡವರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಅದರಂತೆಯೇ ಮಾಜಿ ಸಿಎಂ ಯಡಿಯೂರಪ್ಪ ಅವರು ರಾಜ್ಯದ ಬಡ ಜನರಿಗೆ ಅನೇಕ ಯೋಜನೆಗಳನ್ನು ಮಾಡಿದ್ದಾರೆ ಹಾಗೆ ಸಿ ಎಂ ಬಸವರಾಜ ಬೊಮ್ಮಾಯಿ ಕೂಡ ಉತ್ತಮವಾದ ಯೋಜನೆ ನೀಡಿದ್ದಾರೆ ನಾನು ರಾಷ್ಟ್ರೀಯ ಪರಿಶಿಷ್ಟ ಪಂಗಡ ಜನಾಂಗದ ಉಪಾಧ್ಯಕ್ಷನಾಗಿ ಅನೇಕ ರಾಜ್ಯಕ್ಕೆ ತೆರಳಿದ್ದೇನೆ ಅಲ್ಲಿ ಮೋದಿಯವರನ್ನು ದೇವರಂತೆ ಪೂಜಿಸಲಾಗುತ್ತದೆ ಎಂದರು.
ನಂತರ ವೇದಿಕೆಯ ಮೇಲಿನ ಅನೇಕ ಗಣ್ಯರು ಮಾತಾನಾಡಿದರು ಇದೇ ವೇಳೆಯಲ್ಲಿ ಚುನಾವಣೆ ಅಧಿಕಾರಿ ಸುರೇಶ, ಆಲಂಬಾಷ ಇವರು ಆಗಮಿಸಿ ಚುನಾವಣೆ ನೀತಿ ಸಂಹಿತೆಯಂತೆ ಕಾರ್ಯಕ್ರಮ ನಡೆಯುತ್ತಿದೆಯೇ ಎನ್ನುವುದನ್ನು ವೀಕ್ಷಣೆ ಮಾಡಿ ವಿಡಿಯೋ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಿದ್ದನಗೌಡ ನೆಲಹಾಳ, ರಮಾನಂದ ಯಾದವ್, ಜಾಡಲದಿನ್ನಿ ಶರಣಪ್ಪಗೌಡ, ಎನ್ ಶಂಕ್ರಪ್ಪ, ವೀರಭದ್ರಪ್ಪ ಗೌಡ ಗವಿಗಟ್ಟ, ಶರಣಪ್ಪಗೌಡ ನಕ್ಕುಂದಿ, ಶಿವ ಪ್ರಸಾದ್, ಮಲ್ಲಿಕಾರ್ಜುನ ಜಕ್ಕಲದಿನ್ನಿ, ತಿಮ್ಮರಡ್ಡಿ ಬೋಗವತಿ, ಬಂಡೇಶ ವಲ್ಕಂದಿನ್ನಿ, ಮಲ್ಲನಗೌಡ ವಕೀಲರು, ಜಯರಾಜ, ನಾಗನಗೌಡ, ಸುಲೋಚನಮ್ಮ, ವಿರೇಶ ನಾಯಕ, ಗುರುಗೌಡ ಕಣ್ಣೂರು, ಮಲ್ಲಿಕಾರ್ಜುನ ಸಂಗಾಪೂರ, ಭೀಮೇಶ ಸೇರಿದಂತೆ ಅನೇಕರು ಇದ್ದರು.