ನರೇಂದ್ರ ಮೋದಿ ಜಾಗತಿಕ ನಾಯಕ

ನವದೆಹಲಿ,ಏ.೪- ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಜಗತ್ತಿನ ಪ್ರಭಾವಿ ನಾಯಕರನ್ನು ಹಿಂದಕ್ಕಿ ಪ್ರಧಾನಿ ನರೇಂದ್ರ ಮೋದಿ, ಅತ್ಯಂತ ಜನಪ್ರಿಯ ಜಾಗತಿಕ ನಾಯಕರಾಗಿ ಹೊರಹೊಮ್ಮಿದ್ದಾರೆ.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಪ್ರೀತಿಪಾತ್ರ, ಮೆಚ್ಚುಗೆ ಮತ್ತು ವಿಶ್ವಾಸಾರ್ಹ ಜಾಗತಿಕ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದ್ದಾರೆ.
ಮಾರ್ನಿಂಗ್ ಕನ್ಸಲ್ಟ್ ನಡೆಸಿದ ಸಮೀಕ್ಷೆಯ ಇತ್ತೀಚಿನ ಡೇಟಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾಗಿತಿಕ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮೆಕ್ಸಿಕನ್ ಅಧ್ಯಕ್ಷ ಲೋಪೆಜ್ ಒಬ್ರಡಾರ್ ಮತ್ತು ಆಸ್ಟ್ರೇಲಿಯಾದ ಕೌಂಟರ್ಪಾರ್ಟ್ ಆಂಥೋನಿ ಅಲ್ಬನೀಸ್ ನಂತರದ ಸ್ಥಾನದಲ್ಲಿದ್ದಾರೆ.
೭೬ ರಷ್ಟು ರೇಟಿಂಗ್‌ನೊಂದಿಗೆ ಪ್ರಧಾನಿ ಮೋದಿ ಅಗ್ರಸ್ಥಾನದಲ್ಲಿದ್ದಾರೆ. ಪಟ್ಟಿಯಲ್ಲಿನ ಇತರ ಜಾಗತಿಕ ನಾಯಕರು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ೪೧ ಶೇ.ಅಂಕದೊಂದಿಗೆ ೬ ನೇ ಸ್ಥಾನಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ೩೪ ಶೇಕಡಾ ಅಂಕದೊಂದಿಗೆ ೧೦ ನೇ ಸ್ಥಾನದಲ್ಲಿದ್ದಾರೆ.

ಯಾರಾರಿಗೆ ಯಾವ ಸ್ಥಾನ

ದೇಶ, ಪ್ರಧಾನಿ, ಶೇಕಡವಾರು ಅಂಕ
*ಭಾರತ- ನರೇಂದ್ರ ಮೋದಿ -ಶೇ,೭೬
*ಮೆಕ್ಸಿಕೋ (ಅಧ್ಯಕ್ಷ)- ಲೋಪೆಜ್ ಒಬ್ರಡಾರ್- ಶೇ.೬೧
*ಆಸ್ಟ್ರೇಲಿಯಾ- ಆಂಥೋನಿ ಅಲ್ಬನೀಸ್ -ಶೇ. ೫೫
*ಇಟಲಿ-ಜಾರ್ಜಿಯಾ ಮೆಲೋನಿ- ಶೇ.೪೯
*ಬ್ರೆಜಿಲ್ (ಅಧ್ಯಕ್ಷ)- ಲುಲಾ ಡ ಸಿಲ್ವಾ- ಶೇ.೪೯
*ಅಮೇರಿಕಾ (ಅಧ್ಯಕ್ಷ) ಜೋ ಬಿಡೆನ್- ಶೇ. ೪೧
*ಕೆನಡಾ- ಜಸ್ಟಿನ್ ಟ್ರುಡೊ-ಶೇ. ೩೯
*ಸ್ಪೇನ್- ಪೆಡ್ರೊ ಸ್ಯಾಂಚೆಜ್- ಶೇ.೩೮
*ಜರ್ಮನಿ ( ಚಾನ್ಸೆಲರ್) ಓಲಾಫ್ ಸ್ಕೋಲ್ಜ್- ಶೇ. ೩೫
*ಇಂಗ್ಲೆಂಡ್- ರಿಷಿ ಸುನಕ್- ಶೇ. ೩೪
*ಪ್ರಾನ್ಸ್ (ಅಧ್ಯಕ್ಷ) ಎಮ್ಯಾನುಯೆಲ್ ಮ್ಯಾಕ್ರನ್- ಶೇ. ೨೨ ರಷ್ಟು ಅಂಕ