ನರೇಂದ್ರ ಮೋದಿಯವರು ಪ್ರಧಾನಿಯಾಗಿ ಏಳನೇ ವರ್ಷ: ಪೌರ ಕಾರ್ಮಿಕರ ಮಕ್ಕಳಿಗೆ ಆಟ ಸಾಮಗ್ರಿ ವಿತರಣೆ

ಮೈಸೂರು: ಮೇ.30: ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಏಳನೇ ವರ್ಷ ಮತ್ತು 30ನೇ ಮೇ ಇಂದಿಗೆ 2.2 ವರ್ಷದ ಆಚರಣೆ ಅಂಗವಾಗಿ ಸೇವಾ ಸಪ್ತಾಹ ಕಾರ್ಯಕ್ರಮವನ್ನು ಪೌರ ಕಾರ್ಮಿಕರ ಮಕ್ಕಳಿಗೆ ಮನೆಯಲ್ಲೇ ಆಡುವಂತಹ ಆಟ ಸಾಮಗ್ರಿಗಳನ್ನು ಮತ್ತು ಮಾಸ್ಕ್‍ಗಳನ್ನು ಉಚಿತವಾಗಿ ವಿತರಿಸುವ ಮೂಲಕ ಆಚರಿಸಲಾಯಿತು.
ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ವತಿಯಿಂದ ಗಾಯತ್ರಿ ಪುರಂನ ಪೌರಕಾರ್ಮಿಕರ ಕಾಲೊನಿಯಲ್ಲಿ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ರವರು ಅಧಿಕಾರ ಸ್ವೀಕರಿಸಿ ಇಂದಿಗೆ 7ನೇ ವರ್ಷದ ಅಂಗವಾಗಿ ಸೇವಾ ಸಪ್ತಾಹ ಸೇವೆಯೇ ಸಂಘಟನೆ ಎಂದು ಮೈಸೂರು ಬಿಜೆಪಿ ನಗರ ಘಟಕದ ಆದೇಶದ ಮೇರೆಗೆ ಪೌರ ಕಾರ್ಮಿಕರ ಮಕ್ಕಳಿಗೆ ಸೇವೆ ಮಾಡುವ ಮುಖಾಂತರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಇದೆ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರಾದ ಜಯಶಂಕರ್ ರವರು ನಮ್ಮ ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿರವರು ಕೊರೋನಾ ನಿಯಂತ್ರಣದಲ್ಲಿ ಯಶಸ್ವಿಯಾಗಿ ಮತ್ತು ಇಡೀ ವಿಶ್ವಕ್ಕೆ ವ್ಯಾಕ್ಸಿನೇಷನ್ ಕೊಡುವ ಸಂಜೀವಿನಿ ಭಾರತ ದೇಶ ಎಂಬುದನ್ನು ವಿಶ್ವಕ್ಕೆ ತನ್ನ ಶಕ್ತಿಯನ್ನು ತೋರಿಸಿಕೊಟ್ಟ ಏಕೈಕ ನಾಯಕ ಎಂದರೆ ಅದು ನರೇಂದ್ರ ಮೋದಿರವರು.
ಅವರಿಗೆ ಭಗವಂತ ಇನ್ನಷ್ಟು ಶಕ್ತಿ ನೀಡಲಿ ಮತ್ತು ತಜ್ಞರ ಮೇರೆಗೆ ಮುಂಬರುವ ಮೂರನೇ ಅಲೆಯ ಕರೋನದಿಂದ ಎಚ್ಚರಿಕೆಯಿಂದ ಇರಲು ಮಕ್ಕಳಿಗೆ ಮನೆಯಲ್ಲಿ ಆಟದ ಸಾಮಗ್ರಿಯನ್ನು ಆಟಾಡಿಕೊಂಡು ಮನೆಯಲ್ಲೇ ಇದ್ದರೆ ಅನಾಹುತ ತಪ್ಪಿಸಬಹುದು ಮತ್ತು ಕೊರೋನ ಮುಕ್ತ ಭಾರತ ದೇಶ ಆಗಲಿ ಎಂದರು.
ನಂತರ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ರಾಜ್ಯ ನಿರ್ದೇಶಕ ರಾದ ಶ್ರೀಮತಿ ರೇಣುಕಾ ರಾಜು ರವರು ಕೊರೊನದ ಸಂದರ್ಭದಲ್ಲಿ ಪೌರಕಾರ್ಮಿಕರು ಶ್ರಮಿಸುತ್ತಿರುವುದು ನಿಜಕ್ಕೂ ಅವರಿಗೆ ಕೈಯೆತ್ತಿ ಮುಗಿಯಬೇಕು ಅವರ ಕೆಲಸಕ್ಕೆ ಹೋದರೆ ಮಕ್ಕಳು ಮನೆಯಲ್ಲೇ ಇರುತ್ತಾರೆ ಈಗಾಗಲೇ ಎರಡನೇ ಅಲೆಯ ಕೊರೋನಾ ವ್ಯಾಪಿಸಿದ್ದು ಮುಂಬರುವ ದಿನಗಳಲ್ಲಿ ಮೂರನೇ ಅಲೆ ಕೊರೋನಾ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ ಆದ್ದರಿಂದ ಮಕ್ಕಳು ಮನೆಯಲ್ಲೇ ಆಟ ಆಡಿ ಎಂದು ಮಾಸ್ಕ್ ಗಳನ್ನು ಧರಿಸಿ ಸ್ಯಾನಿಟೈಸರ್ ಉಪಯೋಗಿಸಿ ಎಂದು ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಬಿಜೆಪಿ ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷರಾದ ಡಿ ಲೋಹಿತ್ ರವರ ನೇತೃತ್ವದ ತಂಡ ವಿಭಿನ್ನವಾಗಿ ಕಾರ್ಯಕ್ರಮವನ್ನು ರೂಪಿಸಿ ಬಡ ಮಕ್ಕಳಿಗೆ ಸಹಾಯ ಆಗುವಂತೆ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ನರಸಿಂಹರಾಜ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷರಾದ ಡಿ.ಲೋಹಿತ್ ಮೈಸೂರು ನಗರ ಉಪಾಧ್ಯಕ್ಷರಾದ ಟಿ ರಮೇಶ್ ರವರು ಮೈಸೂರು ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಭರತ್, ಮುಖಂಡರಾದ ಸುಬ್ರಮಣ್ಯ, ಆರ್ ಎಕ್ಸ್ ಮೋಹನ್, ಚರಣ್, ಸಫಾಯಿ ಕರ್ಮಚಾರಿ ಸದಸ್ಯರಾದ ರಾಚಯ್ಯ, ಕ್ಷೇತ್ರದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ನವೀನ್ ಶೆಟ್ಟಿ, ಹಾಗೂ ಧನರಾಜ್, ರವರು ಉಪಾಧ್ಯಕ್ಷರಾದ ವೇಗ ಮತ್ತು ರಾಜು ಮುಂತಾದವರು ಉಪಸ್ಥಿತರಿದ್ದರು.