ನರೇಂದ್ರ ಕಾಲೇಜು: ಜಗಜೀವನರಾಂ ಜಯಂತಿ ಆಚರಣೆ

ಬೀದರ್: ಎ.6:ಶಾಂತಿಕಿರಣ ಚಾರಿಟಬಲ್ ಟ್ರಸ್ಟ್ ಸಂಚಾಲಿತ ಇಲ್ಲಿಯ ಸ್ವಾಮಿ ನರೇಂದ್ರ ಪದವಿಪೂರ್ವ ಕಾಲೇಜಿನಲ್ಲಿ ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂ ಜಯಂತಿ ಆಚರಿಸಲಾಯಿತು.

ಕಾಲೇಜು ಆಡಳಿತಾಧಿಕಾರಿ ಕಲ್ಪನಾ ಮಠಪತಿ ಅವರು ಬಾಬು ಜಗಜೀವನರಾಂ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವಿಸಿದರು. ಬಾಬೂಜಿ ಆದರ್ಶ ತತ್ವಗಳನ್ನು ಎಲ್ಲರೂ ಪಾಲಿಸಬೇಕು ಎಂದರು.

ಪ್ರಾಚಾರ್ಯೆ ಮಂಗಲಾ ಎನ್.ಎಂ, ಉಪನ್ಯಾಸಕರು ಇದ್ದರು.