ನರೇಂದ್ರಮೋದಿಯವರ ಯೋಜನೆಗಳು ಪ್ರತಿ ಹಳ್ಳಿಗೂ ತಲುಪುವಲ್ಲಿ ಬಿಜೆಪಿ ಡಬಲ್ ಎಂಜಿನ್ ಸರ್ಕಾರ ದಿಂದ ಮಾತ್ರ ಸಾಧ್ಯವಾಗಿದೆ: ತೇಜಶ್ವಿಸೂರ್ಯ

ಸಂಜೆವಾಣಿ ವಾರ್ತೆ
ಕುರುಗೋಡು:ಮಾ.22

ನರೇಂದ್ರಮೋದಿಯವರ ಪ್ರತಿಯೊಂದು ಯೋಜನೆಗಳು ಪ್ರತಿ ಹಳ್ಳಿಗೂ ತಲುಪುವಲ್ಲಿ ಕೇಂದ್ರದಲ್ಲೂ ಬಿಜೆಪಿ ರಾಜ್ಯದಲ್ಲೂ ಬಿಜೆಪಿ ಇರುವ ಡಬಲ್ ಎಂಜಿನ್ ಸರ್ಕಾರ ದಿಂದ ಮಾತ್ರ ಸಾಧ್ಯವಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಶ್ವಿಸೂರ್ಯ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಬಿಜೆಪಿ ಯುವಚೈತನ್ಯ ಸಮಾವೇಶದಲ್ಲಿ ಅವರು ಮಾತನಾಡಿದರು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಕೇಂದ್ರ ಸರ್ಕಾರದಿಂದ 6000 ಸಾವಿರ ಮತ್ತು ರಾಜ್ಯ ಸರ್ಕಾರದಿಂದ 4000 ಸಾವಿರ ಕೇಂದ್ರದಲ್ಲಿ ಬಿಜೆಪಿ ಕರ್ನಾಟಕ ರಾಜ್ಯದಲ್ಲೂ ಬಿಜೆಪಿ ಇರುವ ಕಾರಣ ನೇರವಾಗಿ ರೈತರ ಖಾತೆಗೆ 10000 ಸಾವಿರ ರೂಗಳು ತಲುಪುತ್ತಿದೆ.

ಪಕ್ಕದ ನೆರೆಯ ಆಂಧ್ರ ಪ್ರದೇಶದ ರೈತರಿಗೆ ಕೇಂದ್ರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 6000 ಸಾವಿರಗಳು ಮಾತ್ರ ರೈತರ ಖಾತೆಗೆ ಜಮೆಯಾಗುತ್ತಿದೆ ಆಂಧ್ರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಇಲ್ಲದ ಕಾರಣ ಇನ್ನುಳಿದ ಮೊತ್ತ ರೈತರ ಖಾತೆಗೆ ಜಮೆಯಾಗದಿರುವ ಕಾರಣ ಅಲ್ಲಿ ಡಬಲ್ ಎಂಜಿನ್ ಸರ್ಕಾರ ಇಲ್ಲ ಅದಕ್ಕಾಗಿ ಮುಂಬರುವ 2024 ಚುನಾವಣೆಯಲ್ಲೂ ಕೇಂದ್ರದಲ್ಲಿ ಮೋದಿಜಿ ನೇತೃತ್ವದ ಬಿಜೆಪಿ ಸರ್ಕಾರ ಇರಲಿದೆ ಅದಕ್ಕಾಗಿ ಕರ್ನಾಟಕ ರಾಜ್ಯದಲ್ಲಿ ಕೂಡ ಬಿಜೆಪಿ ಪಕ್ಷ ಗೆಲ್ಲಿಸಿದರೆ ಕೇಂದ್ರ ಮತ್ತು ರಾಜ್ಯ ಯೋಜನೆಗಳು ರೈತರಿಗೆ ನೇರವಾಗಿ ತಲುಪುತ್ತವೆ ಎಂದರು.

ಗಂಗಾವತಿಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಿಂದ 24500 ಜನಕ್ಕೆ 10 ಕೋಟಿಯಷ್ಟು ಉಪಯೋಗವಾಗಿದೆ. ಕಂಪ್ಲಿ ಕ್ಷೇತ್ರದಲ್ಲಿ ಶಾಸಕರು ಇದ್ದರೂ ಏಕೆ ಆಗಿಲ್ಲಾ ಎಂಬ ಪ್ರಶ್ನೆಯನ್ನು ಸ್ಥಳೀಯ ಶಾಸಕರಿಗೆ ಹಾಕಿದರು.

ಜಲಜೀವನ್ ಯೋಜನೆಯಿಂದ 33 ಸಾವಿರದ ಮನೆಗೆ ಪೈಪ್ನಲ್ಲಿ ನೀರು ಬರುತ್ತಿದೆ. ಕಂಪ್ಲಿ ಕ್ಷೇತ್ರದಲ್ಲಿ ಯಾಕೆ ಈ ಯೋಜನೆ ಬರುತ್ತಿಲ್ಲ. ಕಂಪ್ಲಿಯ ಶಾಸಕರಿಗೆ ಕೇಳಬೇಕಾಗಿದೆ ಎಂದರು.

ದೇಶದಲ್ಲಿ 70ವರ್ಷ ಆಡಳಿತ ನಡೆಸಿದರೂ ಹೈವೆ, ರೈಲ್ವೆ ಲೈನ್ ಅಲ್ಲ ಶೈಚಾಲಯಗಳನ್ನು ನಿರ್ಮಾಣ ಮಾಡದ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡ್ ಕಾರ್ಡ್ ನೀಡಲು ಮುಂದಾಗಿದೆ ಎಂದು ಆರೋಪಿಸಿದರು.

ಬೆಳಗಾವಿಯಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಪದವಿಧರರಿಗೆ 3,000 ಮತ್ತು ಡಿಪ್ಲೊಮಾ ಆದವರಿಗೆ 1,500 ಕೊಡುವುದಾಗಿ ಹೇಳಿದ್ದಾರೆ. ಅವರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಸ್ವಾಭಿಮಾನಿ ಯುವಕರು ಭಿಕ್ಷೆ ಬೇಡುವುದಿಲ್ಲ ಎಂದರು.

ದೇಶದಲ್ಲಿ ವಿದ್ಯಾವಂತ ಯುವಕರು ಕಂಪನಿ ಪ್ರಾರಂಭಿಸಿದರೆ ಮತ್ತು ವಿದ್ಯಾವಂತ ನಿರುದ್ಯೋಗಿ ಯುವತಿಯರು ಸ್ವಯಂ ಉದ್ಯೋಗ ಪ್ರಾರಂಭಿಸಿದರೆ ಮುದ್ರಾ ಯೋಜನೆಯಲ್ಲಿ ಭದ್ರತೆ ರಹಿತ 10 ಲಕ್ಷ ಸಾಲ ನೀಡಲು ಪ್ರಧಾನಿ ನರೇಂದ್ರ ಮೋದಿ ಯೋಜನೆ ರೂಪಿಸಿರುವುದು ದೇಶದ ಯುವಕರು ಸ್ವಾಭಿಮಾನದಿಂದ ಬದುಕಲು ಸಹಕಾರಿಯಾಗಿದೆ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಇವತ್ತು ಗ್ಯಾರಂಟಿ ಇಲ್ಲ. ರಾಜ್ಯದಲ್ಲಿ ಬಿಜೆಪಿ ಪರವಾಗಿ ಅಲೆ ಇದೆ. ಪರಿಶಿಷ್ಟಜಾತಿ ಮತ್ತು ಪಂಗಡದ ವರ್ಗಕ್ಕೆ ಮೀಸಲಾತಿ ಹೆಚ್ಚಿಸಿದ್ದು ನಮ್ಮ ಪಕ್ಷ. ಬಿಜೆಪಿ ಸರ್ಕಾರ ಅಧಿಕಾರಕ್ಕರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಹಸಿದು ಒದ್ದಾಡುವ ಸ್ಥಿತಿ ಕಾಂಗ್ರೆಸ್ಗೆ ಬಂದಿದ್ದು, ಇಂತಹ ಕಾಂಗ್ರೆಸ್ಗೆ ಅಧಿಕಾರ ಕೊಟ್ಟರೆ ರಾಜ್ಯವನ್ನೇ ತಿಂದು ತೇಗಲಿದ್ದಾರೆ ಎಂದು ಗುಡುಗಿದರು.

ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು ಮಾತನಾಡಿ, ನನಗೆ ಮೀಸೆ ಚಿಗುರುವ ವಯಸ್ಸಿನಲ್ಲಿ ಬಿಜೆಪಿ ಟಿಕೇಟ್ ನೀಡಿತ್ತು. ಹಿರಿಯ ನಾಯಕರ ಬದಲು ಯುವಕರಿಗೆ ಹೆಚ್ಚು ಅವಕಾಶ ನೀಡುವುದು ಬಿಜೆಪಿ ಎಂದರು.

ಕಂಪ್ಲಿ ಕ್ಷೇತ್ರದದಲ್ಲಿ ಕಾಂಗ್ರೆಸ್ ಶಾಸಕರು ಜಯಗಳಿಸಿದ ನಂತರ ದೌರ್ಜನ್ಯ ನಿರಂತರವಾಗಿದೆ. ನಾನು ಶಾಸಕನಾಗಿದ್ದ 10 ವರ್ಷದ ಅವಧಿಯಲ್ಲಿ ಸಾಕಷ್ಟು ಅನುದಾನಗಳನನ್ನು ತಂದಿದ್ದೇನೆ. ಅವುಗಳನ್ನು ಬಳಸಿ ಈಗಿನ ಶಾಸಕರು ನನ್ನದೇ ಸಾಧನೆ ಎಂದು ಬಿಂಬಿಸುತ್ತಿದ್ದಾರೆ. ಈ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದರು.

ಕಂಪ್ಲಿ ಮತ್ತು ಕುರುಗೋಡಿನಲ್ಲಿ 100 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೂಮಿ ಪೂಜೆ ನೆರವೇರಿಸಿದರು. ಶಾಸಕರು ಕಮಿಷನ್ ಆಸೆಗಾಗಿ ಮತ್ತೊಮ್ಮೆ ಭೂಮಿ ಪೂಜೆ ನೆರವೇರಿಸಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ರಾಜ್ಯ ಯುವಮೋರ್ಚಾ ಅಧ್ಯಕ್ಷ ಸಂದೀಪ್, ಜಿಲ್ಲಾ ಘಟಕದ ಅಧ್ಯಕ್ಷ ಸೋಮನ ಗೌಡ, ಜಿಲ್ಲಾ ಬಿಜೆಪಿ ಮುರಾರಿಗೌಡ, ಜವಳಿ ನಿಗಮದ ಅಧ್ಯಕ್ಷ ಗುತ್ತಿಗನೂರು ವಿರೂಪಕ್ಷಿ ಗೌಡ, ಮುರುಳಿದರ, ಡಾ.ಸಂದೀಪ್ ಕುಮಾರ್, ಅಳ್ಳಳ್ಳಿ ವೀರೇಶ್, ಅಶೋಕ್ ಕುಮಾರ್, ಅಂಬರೀಷ್, ಕೆ.ರಾಮಲಿಂಗಪ್ಪ, ತಿಮ್ಮರೆಡ್ಡಿ, ಬಸವಲಿಂಗಪ್ಪ, ಕೆ ಸುನೀಲ್ ಕುಮಾರ್, ಸುಧಾಕರ್, ರಾಜಣ್ಣ, ಜಯದೇವ ಗೌಡ, ಜೆ.ಸೋಮಶೇಖರ್ ಗೌಡ, ಪ್ರೇಮ್ ಕುಮಾರ್, ನಟರಾಜ ಗೌಡ, ಮದಿರೆ ಕುಮಾರಸ್ವಾಮಿ ಇತರರು ಇದ್ದರು.