ನರಸಿಂಗಾಪುರ ಚುನಾವಣೆ ಶಿಲ್ಪಾ ರೋಚಕ ಜಯ

ಸಂಡೂರು ಮಾ.31:- ಸಂಡೂರು ತಾಲೂಕಿನ ನರಸಿಂಗಾಪುರ ಗ್ರಾಮ ಪಂಚಾಯಿತಿಯ 11ನೇ ಕ್ಷೇತ್ರಕ್ಕೆ ತೆರವಾದ ಸವಿತಾ ನಾಗರಾಜ ರವರ ಉಪಚುನಾವಣೆ 29-03-2021ರಂದು ನಡೆದಿದ್ದು ತಾಲೂಕು ಕಛೇರಿಯಲ್ಲಿ ಮೇಲ್ವಿಚಾರಕ ಮಲಿಯಪ್ಪ ಹಾಗೂ ಸಹಾಯಕ ವಿಚಾರಕ ಮಹಾಂತೇಶ್ ಇವರ ನೇತೃತ್ವದಲ್ಲಿ ಚುನಾವಣೆ ಎಣಿಕೆ ಕಾರ್ಯ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಿ 9:30ಕ್ಕೆ ಮತಗಳ ಎಣಿಕೆ ಮುಗಿದಿದ್ದು ಶಿಲ್ಪಾ ಹಾಗೂ ಹಸೀನಾ ಎಸ್ ನಡುವೆ ಹಣಾಹಣಿ ಸ್ಪರ್ಧೆ ಏರ್ಪಟ್ಟಿದ್ದು ಶಿಲ್ಪಾ ರವರಿಗೆ 163 ಮತಗಳು ಹಸೀನಾ ಎಸ್ ರವರಿಗೆ 97 ಮತಗಳು ಲಭ್ಯವಾಗಿ ಶಿಲ್ಪಾ ರವರು 66 ಮತಗಳಿಂದ ರೋಚಕ ಜಯ ಗಳಿಸಿದರು ದುರ್ಗಾ(23), ಕೆ.ನಾಗಮ್ಮ(52), ಹೇಮಾವತಿ(26), ಮತಗಳನ್ನು ಪಡೆದರೆ ಎಂ.ನಿರ್ಮಲ, ಶಕುಂತಲ, ಶ್ರೀದೇವಿರವರಿಗೆ ಯಾವ ಮತಗಳು ಲಭ್ಯವಾಗಿಲ್ಲ. ದುರ್ಗಾ, ಎಂ.ನಿರ್ಮಲ, ಶಕುಂತಲಾ, ಶ್ರೀದೇವಿ ಇವರಿಗೆ ಠೇವಣಿ ಲಭ್ಯವಾಗಿಲ್ಲ. 1103 ಮತದಾರರಿರುವ ಈ ಕ್ಷೇತ್ರದಲ್ಲಿ 365 ಮತಗಳು ಚಲಾವಣೆಯಾಗಿದ್ದು 4 ಮತಗಳು ತಿರಸ್ಕøತಗೊಂಡಿವೆ ಎಂದು ಚುನಾವಣಾ ಅಧಿಕಾರಿ ಎಂ.ಟಿ.ರಾಥೋಡ್ ಸಹಾಯಕ ಚುನಾವಣಾ ಅಧಿಕಾರಿ ಗುಂಡ್ಮಿ ಕೊಟ್ರೇಶ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.