ನರಸಾಪುರ ಗ್ರಾಮ ಸೀಲ್‌ಡೌನ್

ಕೋಲಾರ,ಮೇ.೧೫: ಇಡೀ ಭಾರತದಲ್ಲಿ ಕರೋನಾ ಹೆಚ್ಚಾಗಿರುವ ಹಿನ್ನಲೆಯಲ್ಲಿ ಇಡೀ ಭಾರತವನ್ನು ಲಾಕ್ ಡೌನ್ ಮಾಡಲಾಗಿದೆ. ತಾಲೂಕಿನ ನರಸಾಪುರ ಗ್ರಾಮದಲ್ಲಿ ಹೆಚ್ಚುವರಿ ಜನರಿಗೆ ಕರೋನಾ ಆವರಿಸಿದ್ದು ಇಡೀ ನರಸಾಪುರ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ.
ಈ ನಿಟ್ಟಿನಲ್ಲಿ ನರಸಾಪುರ ಗ್ರಾಮ ಪಂಚಾಯ್ತಿ ವತಿಯಿಂದ ನೇಮಕ ಮಾಡಿರುವ ಕರೋನಾ ವಾರಿಯರ್ಸ್ ಗಳನ್ನು ಮತ್ತು ನಾಗರಿಕರಿಗೆ ಪಿ ಎಸ್ ಐ ಅಂಜಿನಪ್ಪ ರವರು ತುಂಬಾ ತೊಂದರೆ ನೀಡುತ್ತಿದಾರೆ ಎಂದು ನರಸಾಪುರ ಪೊಲೀಸ್ ಹೊರ ಠಾಣೆ ಆವರಣದಲ್ಲಿ ಪ್ರತಿಭಟನೆ ಮಾಡಿದರು.
ಈ ವೇಳೆ ಮಾತನಾಡಿದ ಗ್ರಾಮಪಂಚಾಯ್ತಿ ಉಪಾದ್ಯಕ್ಷ ಸುಮನ್ ಚಂದ್ರು,ಮಹಾಮಾರಿ ಕರೋನಾ ತಡೆಗಟ್ಟುವ ನಿಟ್ಟಿನಲ್ಲಿ ನರಸಾಪುರ ಗ್ರಾಮ ಪಂಚಾಯ್ತಿ ವತಿಯಿಂದ ಕರೋನಾ ವಾರಿಯರ್ಸ್ ಟಾಸ್ಕ್ ಪೋರ್ಸ್ ರಚನೆ ಮಾಡಿಕೊಳ್ಳಲಾಗಿದೆ. ನರಸಾಪುರ ಗ್ರಾಮದಲ್ಲಿ ಕೋವಿಡ್-೧೯ ತಡೆಗಟ್ಟುವ ಸಲುವಾಗಿ ತಮ್ಮ ಪ್ರಾಣಗಳ ಹಂಗನ್ನು ತೊರೆದು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದು ಸ್ಥಳೀಯ ಪೊಲೀಸರು ಅಸಹಕಾರ ನೀಡುತ್ತಿರುತ್ತಾರೆ ಎಂದರು.
ನರಸಾಪುರ ಗ್ರಾಮದಲ್ಲಿ ಸೀಲ್ ಡೌನ್ ಆಗಿರುವ ಕಾರಣ ದಿಂದ ಪೊಲೀಸ್ ಹೊರ ಠಾಣೆಯಲ್ಲಿ ಇಬ್ಬರು ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಲ್ಲದೆ ಮುಖ್ಯವಾಗಿ ನರಸಾಪುರ ಗ್ರಾಮದಲ್ಲಿ ಪೊಲೀಸ್ ಹೊರ ಠಾಣೆ ಇದ್ದು ಇಲ್ಲದಂತಾಗಿದೆ ಪ್ರತಿದಿನವೂ ಪೊಲೀಸ್ ಠಾಣೆಯ ಬಾಗಿಲು ಮುಚ್ಚಿರುತ್ತಾರೆ ಯಾವಾಗಲು ಜನರಿಗೆ ಏನಾದ್ರು ಸಮಸ್ಯೆ ಆಗಿ ಮಾಹಿತಿ ನೀಡಲು ಪೊಲೀಸ್ ಠಾಣೆಗೆ ಬಂದರೆ ಬಾಗಿಲು ತೆರೆಯುವುದಿಲ್ಲ ಮತ್ತು ಒಬ್ಬ ಅಧಿಕಾರಿ ಅಥವಾ ಒಬ್ಬ ಸಿಬ್ಬಂದಿಯೊ ಇರುವುದಿಲ್ಲ ಇಲ್ಲ ಎಂದು ಜನರು ಆರೋಪಿಸಿದರು.
ನೂತನವಾಗಿ ವರ್ಗಾವಣೆಯಾಗಿ ವೇಮಗಲ್ ಪೊಲೀಸ್ ಠಾಣೆಗೆ ಸಬ್ ಇನ್ಸ್ಪೆಕ್ಟರ್ ಆಗಿ ಬಂದಿರುವ ಶ್ರೀ ಅಂಜಿನಪ್ಪ ರವರು ಇದುವರೆಗೂ ಗ್ರಾಮಸ್ಥರನ್ನಾಗಲಿ ಅಥವಾ ಕರೋನಾ ವಾರಿಯರ್ಸ್ನ್ನಾಗಲಿ ಸಭೆಗೆ ಸೇರಿಸಿ ಯಾವ ರೀತಿಯಲ್ಲಿ ಕೋವಿಡ್-೧೯ನ್ನು ತಡೆಗಟ್ಟಲು ಮಾರ್ಗಸೂಚಿಗಳನ್ನು ಅನುಸರಿಸಬೇಕೆಂಬುವುದರ ಬಗ್ಗೆ ಯಾವುದೇ ತಿಳುವಳಿಕೆ ನೀಡದೆ, ಏಕಾಏಕಿ ಗ್ರಾಮಕ್ಕೆ ಭೇಟಿ ಕೊಟ್ಟು ಕರೋನಾ ವಾರಿಯರ್ಸ್ ಹಾಗೂ ರೈತರ ತರಕಾರಿ ಟೆಂಪೋಗಳು, ನೀರಿಗೆ ಬರುವ ವಾಹನಗಳನ್ನು ಅಡ್ಡಗಟ್ಟಿ ಸೀಜ್ ಮಾಡುತ್ತಿದ್ದಾರೆ. ಇದರಿಂದ ನೊಂದ ಕರೋನಾ ವಾರಿಯರ್ಸ್ ಮತ್ತು ತರಕಾರಿ ಟೆಂಪೋದವರು ಹಾಗೂ ನೊಂದ ನಾಗರಿಕರು ಪರಿತಪಿಸುವಂತಾಗಿದೆ ಎಂದರು.
ಆದ್ದರಿಂದ ತಾವು ಪರಿಗಣಿಸಿ ಸೂಕ್ತ ನಿರ್ದೇಶನವನ್ನು ವೇಮಗಲ್ ಠಾಣೆಯ ಪಿ ಎಸ್ ಐ ರವರಿಗೆ ನೀಡಲು ಕಳಕಳಿಯಾಗಿ ಮನವಿ ಮಾಡಿದರು.ಮತ್ತು ಮನವಿ ಪತ್ರವನ್ನು ಮಾನ್ಯ ಆರಕ್ಷಕ ಅಧಿಕ್ಷಕರಿಗೆ ಅಂಚೆಯ ಮೂಲಕ ರವಾನಿಸಲಾಗುವುದು ಎಂದು
ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಸುಮಿತ್ರಮ್ಮ ರಾಜಣ್ಣ, ಉಪಾಧ್ಯಕ್ಷರಾದ ಸುಮನ್ ಚಂದ್ರು, ಮುನಿರಾಜು, ಗೋಪಿನಾಥ್, ಗಾಯಿತ್ರಿ, ಕುಮಾರ್, ಮುರಳಿ ತಾಲೂಕು ಪಂಚಾಯ್ತಿಯ ಮಾಜಿ ಸದಸ್ಯ ಎನ್ ಕೆ ನಾಗರಾಜ್, ಎನ್.ಬಿ.ಶ್ರೀನಿವಾಸ್, ಚಿನ್ನಯ್ಯ, ರಾಜೇಂದ್ರ, ಎನ್ ಎಂ ಮಂಜುನಾಥ್, ಅವಿನಾಶ್ ಹಾಗೂ ಗ್ರಾಮ ಪಂಚಾಯ್ತಿಯ ಎಲ್ಲಾ ಸದಸ್ಯರು ಭಾಗಿಯಾಗಿದ್ದರು.