ನರಸಾಪುರ ಕೆರೆಯಲ್ಲಿ ಜಲಕ್ರೀಡೆ-ಮುನಿಸ್ವಾಮಿ

ಕೋಲಾರ,ಮಾ.೨೩: ಕೋಲಾರ ತಾಲೂಕಿನ ನರಸಾಪುರ ಗ್ರಾಮದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ೧೯ ಲಸಿಕಾ ಕೇಂದ್ರವನ್ನ ಸಂಸದ ಮುನಿಸ್ವಾಮಿ ಪರಿಶೀಲನೆ ನಡೆಸಿದರು. ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಲಸಿಕಾ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಸಂಸದರು, ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಸದಸ್ಯರು ಪ್ರತಿಯೊಬ್ಬರು ಲಸಿಕೆ ಹಾಕಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ, ಪ್ರಧಾನಿ ನರೇಂದ್ರ ಮೋದಿಯವರ ಕರೆಯಂತೆ, ಬಿಜೆಪಿ ಮುಖಂಡರು ಅಗತ್ಯ ಸೌಲಭ್ಯಗಳನ್ನ ಕೈಲಾದಷ್ಟು ಕಲ್ಪಿಸಬೇಕು, ವಾಹನ ಸಂಚಾರಕ್ಕೆ ಎಲ್ಲಾ ವ್ಯವಸ್ಥೆಯನ್ನ ಬಿಜೆಪಿ ಮುಖಂಡರು ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.
ಇನ್ನು ನರಸಾಪುರ ಗ್ರಾಮದಲ್ಲಿನ ಕೆರೆಯಲ್ಲಿ ಜಲಕ್ರೀಡೆಗಳನ್ನ ನಡೆಸಲು ನೀಡಿರುವ ಮನವಿಯನ್ನ ಕ್ರೀಡಾ ಇಲಾಖೆ ಪುರಸ್ಕರಿಸಿದೆ. ಮೊದಲು ಕೆರೆಯ ಸುತ್ತಲೂ ಬೇಲಿಯನ್ನ ನಿರ್ಮಾಣ ಮಾಡಿ ಅಕ್ರಮ ಚಟುವಟಿಕೆ ತಡೆಯಬೇಕಿದೆ, ಆಧುನಿಕ ತಂತ್ರಜ್ಞಾನದ ಬೋಟ್ ವ್ಯವಸ್ತೆ ಮಾಡುವುದಿಲ್ಲ, ಕೇರಳ ಮಾದರಿಯಲ್ಲಿ ಮಾನವ ಚಾಲಿಕ ಬೋಟ್ ವ್ಯವಸ್ಥೆಯನ್ನ ಮಾಡಿ ಇಲ್ಲಿ ಜಲಕ್ರೀಡೆಗಳನ್ನ ನಡೆಸಲಾಗುವುದು. ಅದರಿಂದ ಸುತ್ತ ಮುತ್ರ ಪ್ರದೇಶವೂ ಪ್ರವಾಸಿ ತಾಣವಾಗಲಿದೆ ಎಂದು ಭರವಸೆ ನೀಡಿದರು.
ಈ ವೇಳೆ ವೇಮಗಲ್ ಸಬ್ ಇನ್ಸ್ಪೆಕ್ಟರ್ ಆಂಜನಪ್ಪ ಅವರು ೨ ನೇ ಹಂತದ ವ್ಯಾಕ್ಸಿನ್ ಹಾಕಿಕೊಂಡರು, ಇದೇ ವೇಳೆ ಕೆಲ ಬಿಜೆಪಿ ಮುಖಂಡರು, ಹಾಗು ಸಾರ್ವಜನಿಕರು ಮೊದಲನೇ ಹಂತದ ವ್ಯಾಕ್ಸಿನ್ ಪಡೆದುಕೊಂಡರು. ಆಸ್ಪತ್ರೆ ಆವಣರದಲ್ಲಿ ಹಮ್ಮಿಕೊಂಡಿದ್ದ ಜಾನಜಾಗೃತಿ ಕಾರ್ಯಕ್ರಮದಲ್ಲಿ, ತಾಲೂಕು ವೈದ್ಯಾಧಿಕಾರಿ ರಮ್ಯದೀಪಿಕಾ, ನರಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರಾ, ಉಪಾಧ್ಯಕ್ಷ ಸುಮನ್ ಚಂದ್ರು, ಪಿಡಿಒ ಹಾಗು ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾದ ನವೀನ್‌ಚಂದ್ರು ಸೇರಿದಂತೆ ಜಿಲ್ಲಾ ಬಿಜೆಪಿ ನಾಯಕರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು,