೧. ಬೆಟ್ಟದ ನೆಲ್ಲಿಕಾಯಿ, ಕ್ಯಾರೆಟ್ ಎರಡನ್ನೂ ರುಬ್ಬಿ ರಸ ತೆಗೆದು ಶೋಧಿಸಿ ಆ ರಸಕ್ಕೆ ೧ ಚಮಚ ಜೇನುತುಪ್ಪ ಬೆರಸಿ ಸೇವಿಸಿದರೆ ನರಗಳಿಗೆ ಹೊಸಚೈತನ್ಯ ಬಂದು ಬಲಯುತವಾಗುತ್ತವೆ, ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.
೨. ನುಗ್ಗೆಸೊಪ್ಪನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ಶೋಧಿಸಿ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಕುಡಿಯುವುದರಿಂದ ನರಗಳಿಗೆ ಶಕ್ತಿ ಬರುತ್ತದೆ.
೩. ಒಂದೆಲಗ ೧ ಹಿಡಿಸೊಪ್ಪು, ೮ ಕಾಳುಮೆಣಸು, ಕಲ್ಲುಸಕ್ಕರೆ ೫ ಗ್ರಾಂ, ೫ – ೬ ಬಾದಾಮಿ ಎಲ್ಲವನ್ನೂ ಒಟ್ಟಿಗೆ ಸೇರಿಸಿ ನುಣ್ಣಗೆ ಅರೆಯಿರಿ. ಅದನ್ನು ಶೋಧಿಸಿಕೊಂಡು ಹಾಲಿಗೆ ಹಾಕಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿ.
೪. ಖರ್ಜೂರ ಹಾಗೂ ಅಂಜೂರವನ್ನು ನುಣ್ಣಗೆ ರುಬ್ಬಿ ಒಲೆಯ ಮೇಲೆ ತುಪ್ಪ ಹಾಕಿ ಚೆನ್ನಾಗಿ ಕೆದಕಿ ನೀರಿನ ಅಂಶ ಹೋಗಿ ಬಾಣಲೆ ತಳ ಬಿಡುವಾಗ ಒಂದು ಗಾಜಿನ ಸೀಸೆಗೆ ಹಾಕಿ ಇಟ್ಟುಕೊಳ್ಳಿ. ಪ್ರತಿದಿನ ೧ ಚಮಚ ಹಾಲಿನ ಜೊತೆ ಸೇವಿಸುವುದರಿಂದ ನರಗಳು ಗಟ್ಟಿಗೊಳ್ಳುತ್ತವೆ.
೫. ಸೀಬೆಹಣ್ಣನ್ನು ಆಗಿಂದ್ದಾಗ್ಗೆ ತಿನ್ನುತ್ತಿದ್ದರೆ ನರದೌರ್ಬಲ್ಯ ಕಡಿಮೆಯಾಗುತ್ತದೆ.
೬. ಬಾಳೆದಿಂಡನ್ನು ಯಥೇಚ್ಛವಾಗಿ ಉಪಯೋಗಿಸುವುದರಿಂದ ನರಗಳು ದೃಢವಾಗುತ್ತವೆ.
೭. ಮಾವಿನಹಣ್ಣನ್ನು ಜೇನುತುಪ್ಪದ ಜೊತೆ ಸೇವಿಸಿದರೆ ನರಗಳಿಗೆ ಶಕ್ತಿ ಬರುತ್ತದೆ.
೮. ಪ್ರತಿನಿತ್ಯ ೮ – ೧೦ ತುಳಸಿ ಎಲೆಗಳನ್ನು ಸೇವಿಸುತ್ತಿದ್ದರೆ ಮೆದುಳು ಚುರುಕಾಗುತ್ತದೆ.
೯. ಅಮೃತಬಳ್ಳಿಯ ರಸ ಅಥವಾ ಸತ್ವವನ್ನು ಸೇವಿಸುತ್ತಿದ್ದರೆ, ನರಗಳಿಗೆ ಸಾಕಷ್ಟು ಅನುಕೂಲವಾಗುತ್ತದೆ.
೧೦. ತುಪ್ಪ ಮತ್ತು ಜೇನುತುಪ್ಪವನ್ನು ವಿಷಮ ಪ್ರಮಾಣದಲ್ಲಿ ಸೇರಿಸಿ ಸೇವಿಸುವುದರಿಂದ ಅನುಕೂಲವಾಗುತ್ತದೆ.
೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧