ನರಗುಂದ ವಿಜಯ ಸಂಕಲ್ಪ ಯಾತ್ರೆಗೆ ಭರದ ಸಿದ್ಧತೆ

ನರಗುಂದ,ಮಾ10 : ಇಂದು ಭಾರತೀಯ ಜನತಾ ಪಕ್ಷದ ವಿಜಯ ಸಂಕಲ್ಪ ಯಾತ್ರೆ ನರಗುಂದ ಪಟ್ಟಣಕ್ಕೆ ಆಗಮಿಸಲಿರುವುದರಿಂದ ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮ ಮೈದಾನದಲ್ಲಿ ಸುಸಜ್ಜಿತ ಬ್ರಹತ್ ವೇದಿಕೆ ಸಿದ್ಧಗೊಳಿಸಲಾಗಿದ್ದು ಅಂದಾಜು 25000 ಜನರು ಪ್ರಸ್ತುತ ಕಾರ್ಯಕ್ರಮಕ್ಕೆ ಮತಕ್ಷೇತ್ರದ ವಿವಿಧ ಗ್ರಾಮಗಳಿಂದ ಆಗಮಿಸಲಿದ್ದು, ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಉಮೇಶಗೌಡ ಪಾಟೀಲ ತಿಳಿಸಿದರು.

ಇದಕ್ಕೂ ಮೊದಲು ಪಕ್ಷದ 500 ಕ್ಕೂ ಹೆಚ್ಚು ಕಾರ್ಯಕರ್ತರು ಶಿವಾಜಿ ಸರ್ಕಾಲ್ ನಿಂದ ಗಾಂಧಿ ಚೌಕ್ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೋಟಾರ್ ಬೈಕ್ ರ್ಯಾಲಿ ನಡೆಸಲಿದ್ದಾರೆ ಎಂದು ಹೇಳಿದರು.
ವಿಜಯ ಸಂಕಲ್ಪ ಯಾತ್ರೆ ಪೂರ್ವದಲ್ಲಿ ಪಟ್ಟಣದಲ್ಲಿ ನಡೆಯುವ ಬೃಹತ್ ಮೆರವಣಿಗೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ, ರಾಜ್ಯಧ್ಯಕ್ಷ ನಳಿನಕುಮಾರ ಕಟೀಲ್, ಗೋವಿಂದ ಕಾರಜೋಳ, ಪ್ರಲ್ಹಾದ ಜೋಶಿ, ಭೈರತಿ ಬಸವರಾಜ, ಲಕ್ಷ್ಮಣ್ ಸವದಿ, ಮಹೇಶ ತೆಂಗಿನಕಾಯಿ, ಎಸ್. ವ್ಹಿ. ಸಂಕನೂರ್, ಪಿ.ಸಿ. ಗದ್ದಿಗೌಡ್ರ, ರಾಮಣ್ಣ ಲಮಾಣಿ ಪಾಲ್ಗೊಳ್ಳುವರು.
ತಾಲ್ಲೂಕಿನ ಪಕ್ಷದ ಪ್ರಮುಖರಾದ ಎ. ಎಮ್. ಹುಡೇದ್, ಚಂದ್ರು ದಂಡಿನ, ಅಜ್ಜುಗೌಡ ಪಾಟೀಲ, ಎಮ್. ಎಸ್. ಪಾಟೀಲ, ಹನಮಂತ ಹವಾಲ್ದಾರ್, ಮಲ್ಲಪ್ಪ ಮೇಟಿ, ಗುರಪ್ಪ ಆದೆಪ್ಪನವರ ಮುಂತಾದವರು ಉಪಸ್ಥಿತರಿರುವರು ಎಂದು ತಿಳಿಸಿದರು.