ನರಗುಂದ: ದಿ. 21 ರಂದು ಬೃಹತ್ ರೈತ ಸಮಾವೇಶ

ಹುಬ್ಬಳ್ಳಿ,ಜು19 : ರೈತ ಹುತಾತ್ಮ ದಿನಾಚರಣೆ ಅಂಗವಾಗಿ 42 ನೇ ರೈತ ಹುತಾತ್ಮ ದಿನಾಚರಣೆ ಮತ್ತು ಬೃಹತ್ ರೈತ ಸಮಾವೇಶವನ್ನು ಇದೇ ದಿ. 21 ರಂದು ಗುರುವಾರ ಗದಗ ಜಿಲ್ಲೆಯ ನರಗುಂದ ಪಟ್ಟಣದ ಮಹಾದಾಯಿ ಹೋರಾಟ ವೇದಿಕೆಯಲ್ಲಿ ಬೆ. 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜಿಕ ಹೋರಾಟಗಾರ ವೆಂಕನಗೌಡ ಪಾಟೀಲ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಿನ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕ ಪೆÇ್ರೀ. ಯೋಗೆಂದ್ರ ಯಾದವ್ ನೆರವೇರಿಸಲಿದ್ದಾರೆಂದರು.
ಇನ್ನು ಅಂದಿನ ಕಾರ್ಯಕ್ರಮದಲ್ಲಿ ಮಹಾದಾಯಿ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯುವುದು, ರೈತ ವಿರೋಧಿ ಮಸೂದೆಗಳನ್ನು ವಾಪಸ್ ಪಡೆಯಲು, ಕನಿಷ್ಠ ಬೆಂಬಲ ಬೆಲೆ ಖಾತ್ರಿಗಾಗಿ, ಕೃಷ್ಣಾ-ಕಾವೇರಿ ಕೊಳ್ಳದ ಯೋಜನೆಗಳ ಚುರುಕಿಗಾಗಿ, ಪ್ಯಾಕೇಜ್ ಆಹಾರ ಪದಾರ್ಥಗಳ ಮೇಲಿನ ಜಿ.ಎಸ್.ಟಿ ಕೈಬಿಡಲು ಆಗ್ರಹ, ಪ್ರವಾಹ ಪೀಡಿತ ಪ್ರದೇಶದ ನಷ್ಟಕ್ಕೆ ವೈಜ್ಞಾನಿಕ ಪರಿಹಾರದ ನಿಗಧಿಗಾಗಿ ಈ ರೈತ ಸಮಾವೇಶದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಈ ಬೃಹತ್ ರೈತ ಸಮಾವೇಶದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರೈತ ಸೇನಾ ಕರ್ನಾಟಕದ ರಾಜ್ಯ ಮುಖಂಡರುಗಳು, ಎಲ್ಲಾ ಜಿಲ್ಲಾ, ತಾಲೂಕು ಮುಖಂಡರುಗಳು ಹಾಗೂ ಜನಪರ ಹೋರಾಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮಲ್ಲಣ್ಣ ಅಲೇಕರ, ಗುರು ರಾಯನಗೌಡ್ರ, ಬಿ.ಎಸ್.ಸೊಪ್ಪಿನ ಸೇರಿದಂತೆ ಉಪಸ್ಥಿತರಿದ್ದರು.