ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ

ಕಲಬುರಗಿ,ಸೆ.07:ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಮುಕ್ತ ಜೀವನ ನಡೆಸಬೇಕೆಂದು ಕಲಬುರಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಆದಮ್ ಪಟೇಲ್ ಅವರು ಕಿವಿಮಾತು ಹೇಳಿದರು.
ಅವರು ಕಲಬುರಗಿ ಮಹಾನಗರ ಪಾಲಿಕೆ ಹಾಗೂ ಸರ್ಕಾರಿ ಐಟಿಐ (ಪುರುಷ) ಕಾಲೇಜು ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇವುಗಳ ಸಹಯೋಗದೊಂದಿಗೆ ಕಲಬುರಗಿ (ಪುರುಷ) ಸರ್ಕಾರಿ ಐಟಿಐ ಕಾಲೇಜು, ಆವರಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ “International Day of Clean Air For Blue Skies” ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿ, ಪ್ರತಿ ವರ್ಷ ಸೆಪ್ಟೆಂಬರ್ 7 ರಂದು ಅಂತರರಾಷ್ಟ್ರೀಯ ಶುದ್ಧ ಗಾಳಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಮುಂಬರುವ ಗಣೇಶ ಹಬ್ಬದಲ್ಲಿ ಆದಷ್ಟು ಎಲ್ಲಾ ಸಾರ್ವಜನಿಕರು ಮಣ್ಣಿನಿಂದ ಮಾಡಿದ ಗಣಪತಿಯನ್ನು ಮನೆಯಲ್ಲಿಯೇ ಸ್ಥಾಪಿಸಬೇಕು ಕಲಬುರಗಿ ನಗರವು ಕಳೆದ ವರ್ಷಕ್ಕಿಂತ ಈ ವರ್ಷ ವಾಯು ಮಾಲಿನ್ಯದಲ್ಲಿ ಪ್ರತಿಶತ 14ರಷ್ಟು ಸುಧಾರಣೆ ಕಂಡುಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಅಭಿಯಂತರ ಕೆ.ಎಸ್.ಪಾಟೀಲ ಮಾತನಾಡಿ, ಕಲಬುರಗಿ ಮಹಾನಗರವನ್ನು ಮುಂಬರುವ ವರ್ಷದಲ್ಲಿ ಮಾಲಿನ್ಯ ಮುಕ್ತ ನಗರವನ್ನಾಗಿ ಮಾಡಲು ಪಾಲಿಕೆ ಸಾಕಷ್ಟು ಅಭಿವೃದ್ದಿ ಕೆಲಸಗಳು, ಸಸಿ ನೆಡುವುದು, ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಮಹಾನಗರ ಪಾಲಿಕೆ ಉಪ ಆಯುಕ್ತ ಜಾಧವ ಅವರು ಮಾತನಾಡಿ ನಗರ ಸ್ವಚ್ಛತೆಗೆ ಪಾಲಿಕೆಯಿಂದ ಸಾಕಷ್ಟು ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸೈಕಲ್ ಟ್ರ್ಯಾಕ್ ನಿರ್ಮಾಣ, ಪ್ಲಾಸ್ಟಿಕ್ ಬದಲಾಗಿ ಬಟ್ಟೆಯ ಚೀಲಗಳು ಬಳಸುವುದು, ಗಿಡಮರಗಳನ್ನು ನೆಡಲಾಗುತ್ತಿದ್ದು, ಸಾರ್ವಜನಿಕರು ನಗರ ಸ್ವಚ್ಛತೆಯಲ್ಲಿ ಪಾಲಿಕೆಯ ಜೊತೆಗೆ ಕೈ ಜೋಡಿಸಬೇಕೆಂದರು.
ಐಟಿಐ ವಿಭಾಗದ ಜಂಟಿ ನಿರ್ದೇಶಕ ರವಿಂದ್ರನಾಥ ಬೆಳ್ಳಿ ಮಾತನಾಡಿ ಐಟಿಐ ಕೋರ್ಸ್ ಮುಗಿದ ನಂತರ ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪರಿಸರ ಮಾಲಿನ್ಯದ ಕುರಿತು ಇಂದು ನಡೆದ ಕಾರ್ಯಕ್ರಮದಲ್ಲಿ ಅರಿವು ಮೂಡಿಸಲಾಗಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಮುರಳೀಧರ ರತ್ನಗಿರಿ ಅವರು ಮಾತನಾಡಿ, ಮುಖ್ಯವಾಗಿ ಜೀವನ ನಡೆಸಬೇಕೆಂದು ನಮಗೆ ಗಾಳಿ, ಬೆಳಕು, ನೀರಿನ ಅವಶ್ಯಕತೆ ಇದೆ. ಇವೆಲ್ಲ ಸ್ವಚ್ಛವಾಗಿಡಬೇಕು, ಕಾರ್ಬನ್ ಡೈ ಆಕ್ಸ್ಯೆಡ್ ಗಾಳಿಯಲ್ಲಿ ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿಕೊಳಬೇಕು. ಸಂಸ್ಥೆಯೂ ಯಾವತ್ತೂ ನಗರದ ಸ್ವಚ್ಛತೆಯ ಕಾರ್ಯಗಳಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪಾಲಿಕೆ ಜೊತೆಗೂಡಿ ಕೆಲಸ ನಿರ್ವಹಿಸುತ್ತಿವೆ ಹೇಳಿದರು.
ಈ ಕಾರ್ಯಕ್ರಮದ ಅಂಗವಾಗಿ “International Day of Clean Air For Blue Skies” ವಾಹನಗಳ ಹೊಗೆ ತಪಾಸಣೆ ಕಾರ್ಯ ಸಹ ಕೈಗೊಳ್ಳಲಾಗಿದೆ ಎಂದರು.
ಅದೇ ಕಲಬುರಗಿ (ಪುರುಷ) ಸರ್ಕಾರಿ ಐಟಿಐ ಕಾಲೇಜು, ರೀತಿ ಸೆಪ್ಟೆಂಬರ್ 7 ರಂದು ಅಂತರರಾಷ್ಟ್ರೀಯ ಶುದ್ಧ ಗಾಳಿ ದಿನವನ್ನಾಗಿ ಆಚರಿಸಲಾಯಿತು. ಈ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.