ನಮ್ಮ ಸಂವಿಧಾನ ಸರ್ವರಿಗೂ ಸಮಾನ ಹಕ್ಕುಗಳನ್ನು ನೀಡಿದೆ:ಸಚಿವ ಈಶ್ವರ ಬಿ. ಖಂಡ್ರೆ

ಬೀದರ. ಜ.27: ಅಸಂಖ್ಯಾತ ದೇಶಪ್ರೇಮಿಗಳ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಫಲವಾಗಿ 2 ಶತಮಾನಗಳಿಗೂ ಹೆಚ್ಚು ಕಾಲ ಪರಕೀಯರ ದಾಸ್ಯದಲ್ಲಿದ್ದ ಭಾರತ ಸ್ವಾತಂತ್ರ್ಯ ಪಡೆಯಿತು. 1947ರ ಆಗಸ್ಟ್ 15ರಂದು ಭಾರತ ಸ್ವತಂತ್ರ ದೇಶವಾಯಿತಾದರೂ, ಸಂವಿಧಾನವನ್ನು ಅಂಗೀಕರಿಸಿ ಸ್ವತಂತ್ರ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿದ್ದು ಜನವರಿ 26, 1950 ರಂದು. ನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀಡಿದೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ 75 ವರ್ಷವಾದರೂ ಗಟ್ಟಿಯಾಗಿ ನಿಲ್ಲಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶಕ್ಕೆ ಕೊಟ್ಟ ಬೃಹತ್ ಲಿಖಿತ ಸಂವಿಧಾನವೇ ಕಾರಣವಾಗಿದೆ ಎಂದು ಅರಣ್ಯ, ಜೈವಿಕ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಬಿ. ಖಂಡ್ರೆ ಹೇಳಿದರು.
ಅವರು ಶುಕ್ರವಾರ ಜಿಲ್ಲಾಡಳಿತ ಬೀದರ ವತಿಯಿಂದ ಬೀದರ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 75ನೇ ಗಣರಾಜ್ಯೊತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಸೇರಿದಂತೆ ಸಂವಿಧಾನ ರಚನಾ ಸಮಿತಿ 2 ವರ್ಷ 11 ತಿಂಗಳು, 17 ದಿನಗಳ ಅವಧಿಯಲ್ಲಿ ಸುದೀರ್ಘ ಚರ್ಚೆ ನಡೆಸಿ ರಚಿಸಿದ ಲಿಖಿತ ಸಂವಿಧಾನ ನಮ್ಮದಾಗಿದೆ ಹಾಗೂ ನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀಡಿದೆ ಎಂದು ಹೇಳಿದರು.
ನಾನು ಈ ಹಿಂದೆಯೂ, ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದಾಗ ಜಿಲ್ಲೆಯ ಸವಾರ್ಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ್ದೆ. ಜಿಲ್ಲೆಯನ್ನು ಅಭಿವೃದ್ಧಿಯ ಪಥದಲ್ಲಿ ತೆಗೆದುಕೊಂಡು ಹೋಗುವುದು ನನ್ನ ಗುರಿಯಾಗಿದೆ. ಬೀದರ್ ಜಿಲ್ಲೆಯ ವಿವಿಧ ಇಲಾಖೆಗಳ ಸಾಧನೆಯ ಸಿಂಹಾವಲೋಕನ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಪಕ್ಷಿನೋಟ ಬೀರಲು ನಾನು ಇಚ್ಚಿಸುತ್ತೇನೆ. ಮೊದಲನೆಯದಾಗಿ ನಾನು ನಿರ್ವಹಿಸುತ್ತಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಬಗ್ಗೆ ಹೇಳುವುದಾದರೆ, ನಭೂತೋ, ನಭವಿಷ್ಯತಿ ಎಂಬಂತೆ ಬೀದರ್ ಜಿಲ್ಲೆ ಅμÉ್ಟೀ ಅಲ್ಲ ಕಲ್ಯಾಣ ಕರ್ನಾಟಕದಲ್ಲಿಯೇ ಒಂದು ಕ್ರಾಂತಿಯನ್ನು ಅರಣ್ಯ ಪರಿಸರ ಇಲಾಖೆ ಮಾಡುತ್ತಿದೆ ಎಂದು ಹೇಳಿದರು.
ಸಾಮಾಜಿಕ ಅರಣ್ಯ ವಿಭಾಗದಲ್ಲಿ 2023ರ ಮಳೆಗಾಲದಲ್ಲಿ ಒಟ್ಟು 555.24 ಹೆಕ್ಟರ್ ಹಾಗೂ ಕೃಷಿ ಅರಣ್ಯ ನೆಡುತೋಪು ಮತ್ತು ಸಾರ್ವಜನಿಕರಿಗೆ ವಿತರಣೆ ಸೇರಿ ಪ್ರದೇಶದಲ್ಲಿ 7.913 ಲಕ್ಷ ಸಸಿ ನೆಡುವ ಮೂಲಕ ಹಸಿರು ಹೊದಿಕೆ ಹೆಚ್ಚಿಸಲು ಪ್ರಯತ್ನಿಸಲಾಗಿದೆ. ಜುಲೈ-2023 ಮಾಹೆಯಲ್ಲಿ ಪ್ರತಿ ಗ್ರಾಮ ಪಂಚಾಯತ ಹಾಗೂ ತಾಲ್ಲೂಕ ಪಂಚಾಯತಗಳಲ್ಲಿ ಆಯೋಜಿಸಿದ ವನ ಮಹೋತ್ಸವ ಕಾರ್ಯಕ್ರಮಕ್ಕೆ 0.412 ಲಕ್ಷ ಸಸಿಗಳನ್ನು ಹಾಗೂ ಕೃಷಿ ಅರಣ್ಯ ಪೆÇ್ರೀತ್ಸಾಹ ಯೋಜನೆಯಡಿಯಲ್ಲಿ 0.50 ಲಕ್ಷ ಸಸಿಗಳನ್ನು ಸಾರ್ವಜನಿಕರಿಗೆ ರೈತರಿಗೆ ವಿತರಿಸಿದೆ. 5.90 ಲಕ್ಷ ಸಸಿಗಳನ್ನು ಉಪಯೋಗಿಸಿ ಕೃಷಿ ಅರಣ್ಯ ನೆಡುತೋಪು ಮಾಡಲಾಗಿರುತ್ತದೆ. ಬೀದರ ಜಿಲ್ಲೆಯ ಹಸೀರುಕರಣ ಮಾಡುವ ಸಲುವಾಗಿ ಪ್ರಸ್ತುತ ಸಾಲಿನಲ್ಲಿ ಹೊಸ ಕಾಮಗಾರಿಗಳಿಗೆ 201 ಹೇಕ್ಟರ್ ನೆಡುತೋಪಿನ ನಿರ್ಮಾಣಕ್ಕೆ ರೂ. 384.1 ಲಕ್ಷಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಹಾಗೂ ಈ ವರ್ಷ 20ಲಕ್ಷ ಸಸಿಗಳನ್ನು ಜಿಲ್ಲೆಯಲ್ಲಿ ನೆಡಲಾಗುತ್ತದೆ ಎಂದರು.
ಸರ್ಕಾರದ ಮಹತ್ವಕಾಂಕ್ಷಿ 5 ಗ್ಯಾರಂಟಿ ಯೋಜನೆಗಳಾದ ಶಕ್ತಿ ಯೋಜನೆಯು 2023ನೇ ಜೂನ್ 11 ರಿಂದ ಈ ವರೆಗೆ ಬೀದರ ಜಿಲ್ಲೆಯ ಒಟ್ಟು 2 ಕೋಟಿ 39 ಲಕ್ಷ 84 ಸಾವಿರದ 9 ಮಹಿಳೆಯರು ಶಕ್ತಿ ಯೋಜನೆಯ ಸೌಲಭ್ಯ ಪಡೆದುಕೊಂಡಿರುತ್ತಾರೆ. ಪ್ರತಿ ದಿನ ಸರಸಾರಿ 1.07 ಲಕ್ಷ ಮಹಿಳೆಯರು ಉಚಿತವಾಗಿ ಬೀದರ ಜಿಲ್ಲೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಸದರಿ ಮಹಿಳಾ ಪ್ರಯಾಣಿಕರಿಂದ ಸರಾಸರಿ ರೂ. 29.01 ಲಕ್ಷ ಸಾರಿಗೆ ಆದಾಯ ಸಂದಾಯವಾಗುತ್ತಿದೆ ಹಾಗೂ ಪದವಿ ಹಾಗೂ ಡಿಪೆÇ್ಲಮಾ ವಿದ್ಯಾಭ್ಯಾಸ ಪೂರ್ಣಗೊಳಿಸಿ ಉದ್ಯೋಗದ ಹುಡುಕಾಟದಲ್ಲಿ ತೊಡಗುವ ಯುವ ಜನರಿಗೆ ಗರಿಷ್ಠ ಎರಡು ವರ್ಷಗಳವರೆಗೆ ನಿರುದ್ಯೋಗ ಭತ್ಯೆಯನ್ನು ಪದವೀಧರ ನಿರುದ್ಯೋಗಿಗಳಿಗೆ 3 ಸಾವಿರ ರೂ.ಗಳು ಹಾಗೂ ಡಿಪೆÇ್ಲಮಾ ಪಾಸಾದ ನಿರೊದ್ಯೋಗಿಗಳಿಗೆ 1,500 ರೂ.ಗಳ ನಿರೊದ್ಯೋಗ ಭದ್ರತೆ ಒದಗಿಸುವ ಯುವನಿಧಿ ಯೋಜನೆಯು 2024ರ ಜನವರಿ 12 ರಂದು ಜಾರಿಗೆ ಬಂದಿದ್ದು, ಬೀದರ ಜಿಲ್ಲೆಯಲ್ಲಿ ಇಲ್ಲಿಯವರೆಗೆ 3 ಸಾವಿರಕ್ಕೂ ಹೆಚ್ಚಿನ ವಿಧ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದಾರೆ. ಈ ಯೋಜನೆಯು ಚಾಲ್ತಿಯಲಿದ್ದು, ಯುವನಿಧಿ ಯೋಜನೆ ನಿರುದ್ಯೋಗಿ ಯುವಜನರಿಗೆ ಆರ್ಥಿಕ ಬೆಂಬಲ ನೀಡುತ್ತದೆ. ಆದರೆ ಅವರ ಬದುಕು ಹಸನಾಗಬೇಕು. ದುಡಿಯುವ ಕೈಗೆ ಉದ್ಯೋಗ ಸಿಗಬೇಕು ಎಂಬುದು ನಮ್ಮ ಗುರಿಯಾಗಿದೆ.
ಗೃಹಜ್ಯೋತಿ ಯೋಜನೆಯಡಿ ಪ್ರತಿ ಗೃಹ ಬಳಕೆದಾರರು ಗರಿಷ್ಠ 200 ಯುನಿಟ್‍ವರೆಗೆ ವಿದ್ಯುತ್ ಉಚಿತವಾಗಿ ಪಡೆಯಬಹುದಾಗಿದ್ದು, ಬೀದರ ಜಿಲ್ಲೆಯಲ್ಲಿ ಒಟ್ಟು 3,73,884 ವಿದ್ಯುತ್ ಗ್ರಾಹಕರ ಪೈಕಿ 3,41,677 ವಿದ್ಯುತ್ ಗ್ರಾಹಕರು ಇದರ ಲಾಭ ಪಡೆಯುತ್ತಿದ್ದಾರೆ. ಈ ಯೋಜನೆಯು ಇಲ್ಲಿಯ ವರಗೆ ಶೇ.92 ಆಗಿದ್ದು, ಇನ್ನೂ ನೋಂದಣಿ ಪ್ರಕ್ರೀಯೆ ಚಾಲ್ತಿಯಲಿರುತ್ತದೆ. ಈ ಯೋಜನೆಯು ಜನ-ಸಾಮಾನ್ಯರ ಆಶಾಕಿರಣವಾಗಿದೆ.
ಗೃಹಲಕ್ಷ್ಮೀ ಯೋಜನೆಯು ಸರಕಾರ ಪ್ರಕಟಿಸಿರುವ ಗ್ಯಾರಂಟಿಗಳ ಪೈಕಿ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ರಾಜ್ಯದ ಮಹಿಳೆಯರನ್ನು ಆರ್ಥಿಕವಾಗಿ ಸಬಲಿಕರಿಣಗೊಳಿಸುತ್ತಿದ್ದು, ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದ್ದು, ಬೀದರ ಜಿಲ್ಲೆಯಲ್ಲಿ 2024ರ ಜನವರಿ 17ರ ಅಂತ್ಯಕ್ಕೆ 3 ಲಕ್ಷ 54 ಸಾವಿರದ 647 ಅರ್ಹ ಫಲಾನುಭವಿಗಳು ನೋಂದಣಿಯಾಗಿದೆ.
ಕೃಷಿ ಇಲ್ಲದೆ ಬದುಕಿಲ್ಲ, ರೈತ ದೇಶದ ಬೆನ್ನೆಲುಬು ಇದ್ದು, ರೈತರ ಕಲ್ಯಾಣಕ್ಕಾಗಿ ಸರ್ಕಾರ ಶ್ರಮಿಸುತ್ತಿದೆ. ಬೀದರ ಜಿಲ್ಲೆಯಲ್ಲಿ 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ನೆಟೆರೋಗದಿಂದ ಹಾನಿಯಾದ ತೋಗರಿ ಬೆಳೆಗೆ ರೂ. 12.53 ಕೋಟಿ ಪರಿಹಾರ 42,080 ರೈತರ ಖಾತೆಗೆ ಜಮೆ ಮಾಡಲಾಗಿದೆ. 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 2.60 ಲಕ್ಷಕ್ಕಿಂತಲೂ ಅಧಿಕ ರೈತರ ಪ್ರಸ್ತಾವನೆಗಳು ಈ ಯೋಜನೆಯಡಿ ಬಂದಿದ್ದು, ರಾಜ್ಯದಲ್ಲಿಯೇ ಬೀದರ ಜಿಲ್ಲೆಯು ದ್ವೀತಿಯ ಸ್ಥಾನದಲ್ಲಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿಧಾನ ಜಾಗೃತಿ ಜಾಥಾ ಅಭಿಯಾನವನ್ನು ಬೀದರ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಸಮಾಜದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಮನಸುಗಳು ಇದರ ಭಾಗವಾಗಲಿದ್ದಾರೆ. ಜಾಗೃತಿ ಜಾಥಾವನ್ನು ಸ್ತಬ್ಧಚಿತ್ರಗಳ ಮೂಲಕ ಪ್ರಜಾಪ್ರಭುತ್ವದ ಸಿದ್ಧಾಂತ, ಸಮಾನತೆಯ ತತ್ವ, ಸಮಾಜೋದ್ಧಾರದ ಆಕಾಂಕ್ಷೆಗಳನ್ನು ಜನರಿಗೆ ಅರಿವು ಮೂಡಿಸಲಾಗುತ್ತಿದ್ದು, ಈ ಜಾಥವು ಬೀದರ ಜಿಲ್ಲೆಯ 185 ಗ್ರಾಮ ಪಂಚಾಯಿತಿಗಳಲ್ಲಿ ಫೆಬ್ರುವರಿ 23ರವರೆಗೆ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸಂಚರಿಸಿ ನಂತರ ದಿನಾಂಕ 25-02-2024 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲ್ಲಿರುವ ಬೃಹತ ಸಮಾವೇಶದಲ್ಲಿ ಭಾಗವಹಿಸಲಿದೆ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಶಾಲಾ ಶಿಕ್ಷಣ ಇಲಾಖೆಗೆ 25% ಅನುದಾನ ಕಾಯ್ದಿರಿಸಲಾಗಿದೆ. ಅಕ್ಷರ ಅವಿμÁ್ಕರ ಕ್ರೀಯಾ ಯೋಜನೆಯಂತೆ ಭೌತಿಕ ಹಾಗೂ ಶೈಕ್ಷಣಿಕ ಅಭಿವೃದ್ದಿಗಾಗಿ ಒಟ್ಟು 6,780 ಲಕ್ಷ ರೂ.ಗಳ ಅನುದಾನದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 50 ಶಾಲೆಯಂತೆ ಬೀದರ ಜಿಲ್ಲೆಯ ಒಟ್ಟು 300 ಶಾಲೆಗಳ ಅಭಿವೃದ್ಧಿಗಾಗಿ ಕ್ರೀಯಾ ಯೋಜನೆಯನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಅನುಮೋದನೆಗೊಂಡಿದ್ದು, ವಿವಿಧ ಕಾಮಗಾರಿಗಳ ಟೆಂಡರ್ ಕಾರ್ಯ ಜಾರಿಯಲ್ಲಿರುತ್ತದೆ. ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮ ಪಡಿಸಲು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಕಲಿಕಾ ಆಸರೆ ಅಭ್ಯಾಸದ ಪುಸ್ತಕಗಳನ್ನು ಶಾಲಾ ಮಕ್ಕಳಿಗೆ ನೀಡಲಾಗಿದೆ. ಆದರಂತೆ ತಾಲೂಕು ಹಂತದಲ್ಲಿ 1,000 ದಂತೆ 5,000 ಮಕ್ಕಳಿಗೆ ಪರೀಕ್ಷೆಯ ಭಯ ಹೋಗಲಾಡಿಸಲು ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸನ್ಮಾನಿತರ ವಿವರ:- ಸಾಹಿತ್ಯ ಸೇವೆಯಲ್ಲಿ ಶ್ರೀಮತಿ ಜೈದೇವಿ ಗಂಡ ರವಿಂದ್ರ ಕುಮಾರ, ಕ್ರೀಡಾ ಕ್ಷೇತ್ರದಲ್ಲಿ ಕು. ಎಸ್ತರ ರಾಣಿ ತಂದೆ ತಿಮೋತಿ ಮತ್ತು ಪುಪ್ಷಕ್ ನೆಲವಾಡೆ ತಂದೆ ಸಂತೋಷ ನೆಲವಾಡೆ, ಕೈಗಾರಿಕ ಕ್ಷೇತ್ರದಲ್ಲಿ ಶ್ರೀಮತಿ ಸಾವಿತ್ರಿ ಗಂಡ ಪ್ರಕಾಶ ಭೋಸಲೇ, ಎಲೆಕ್ಟ್ರಾನಿಕ್ ಮೀಡಿಯಾ ಕ್ಷೇತ್ರದಿಂದ ಮಹಮ್ಮದ ಆಸೀಫ ತಂದೆ ಜಮ್ಮೀರೊದ್ದಿನ, ಪತ್ರಿಕಾ ಮಾಧ್ಯಮ ಕ್ಷೇತ್ರದಿಂದ ಶ್ರೀಮತಿ ಸುಧಾರಾಣಿ ಗಂಡ ಜೈಕುಮಾರ, ಸಂಗೀತ ಕ್ಷೇತ್ರದಿಂದ ಶಿವರಾಜ ಕಾಳಶೆಟ್ಟಿ ತಂದೆ ಮೊಗಲಪ್ಪ, ಆರೋಗ್ಯ ಸೇವೆ ಕ್ಷೇತ್ರದಿಂದ ಸುಭಾಷ ಕರಪೂರ ತಂದೆ ನಾಗಶೆಟ್ಟಿ ಕರಪೂರ, ಕೃಷಿ ಕ್ಷೇತ್ರದಿಂದ ಕಾಶೀಲಿಂಗ ಅಗ್ರಹಾರ ತಂದೆ ವೀರಯ್ಯ, ವಿಕಲಚೇತನರ ಸೇವೆ ಕ್ಷೇತ್ರದಿಂದ ಲೋಕನಾಥ ತಂದೆ ಶಿವಶರಣಪ್ಪಾ ಕುಂಬಾರ, ಶಿಕ್ಷಣ ಕ್ಷೇತ್ರದಿಂದ ಶ್ರೀಮತಿ ಸೌಭಾಗ್ಯವತಿ ಗಂಡ ರೇವಣಸಿದಪ್ಪಾ, ಸಮಾಜ ಸೇವೆ ಕ್ಷೇತ್ರದಿಂದ ಮಾರುತಿ ತಂದೆ ಶೀವರಾಜ ಮಾಸ್ಟರ, ಜಾನಪದ ಕ್ಷೇತ್ರದಿಂದ ಶ್ರೀಮತಿ ಇಂದ್ರಮಾ ಗಂಡ ಶ್ಯಾಮರಾವ ಹಾಗೂ ಜಾನಪದ ಡೊಳ್ಳು ಕುಣಿತ ಕ್ಷೇತ್ರದಿಂದ ವೈಜಿನಾಥ ತಂದೆ ಹಣುಮಂತ ವಗ್ಗೆ ಇವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಜಾಪ್ರಭುತ್ವದ ಸಿದ್ಧಾಂತ, ಸಮಾನತೆಯ ತತ್ವ, ಸಮಾಜೋದ್ಧಾರದ ಆಕಾಂಕ್ಷೆಗಳನ್ನು ಜನರಿಗೆ ಅರಿವು ಮೂಡಿಸುವ ಸಲುವಾಗಿ ಸ್ತಬ್ಧಚಿತ್ರಗಳ ಸಂವಿಧಾನ ಜಾಗೃತಿ ಜಾಥಾ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿದರು. ಶಾಲಾ ಕಾಲೇಜಿನ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಮ್ ಖಾನ್, ಬೀದರ ದಕ್ಷಿಣ ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ವಿಧಾನ ಪರಿಷತ್ ಶಾಸಕರಾದ ರಘುನಾಥರಾವ ಮಲ್ಕಾಪೂರೆ, ಅರವಿಂದಕುಮಾರ ಅರಳಿ, ಬೀದರ ನಗರಸಭೆ ಅಧ್ಯಕ್ಷ ಮಹಮ್ಮದ ಗೌಸ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ|| ಗಿರೀಶ್ ದೀಲಿಪ್ ಬದೋಲೆ, ಪೊಲೀಸ್ ಅಧೀಕ್ಷಕ ಚನ್ನಬಸವಣ್ಣ ಲಂಗೋಟಿ, ಸಹಾಯಕ ಆಯುಕ್ತ ಲವೀಶ್ ಓರ್ಡಿಯಾ, ಅಪರ ಜಿಲ್ಲಾಧಿಕಾರಿ ಶಿವುಕುಮಾರ ಶೀಲವಂತ, ಪೊಲೀಸ್ ಉಪಾಧೀಕ್ಷಕ ಮಹೇಶ ಮೇಘಣ್ಣನವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲಾ-ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.