ನಮ್ಮ ವೃತ್ತಿಯನ್ನು ನ್ಯಾಯಯುತವಾಗಿ ಮಾಡಿದಾಗ ಮಾತ್ರ ನಾವು ಪ್ರಬುದ್ದರು : ಶರಣಗೌಡ ಪಾಟೀಲ್ ಬೈರಾಮಡಗಿ

ಜೇವರ್ಗಿ:ಆ.11: ನಮ್ಮ ಜೀವನದಲ್ಲಿ ನಾವು ಯಾವುದೆ ಕಾಯಕವನ್ನು ಮಾಡಿದರು ಕುಡ ಅದರಲ್ಲಿ ನಾವು ಶ್ರದ್ದೆ, ಭಕ್ತಿಯಿಂದ ನ್ಯಾಯಯುತವಾಗಿ ಮಾಡಿದಾಗ ಮಾತ್ರ ನಾವು ಪ್ರಭುಧರಾಗುತ್ತೆವೆ ಎಂದು ಪ್ರಗತಿಪರ ಚಿಂತಕ ಶರಣಗೌಡ ಪಾಟೀಲ್ ಬೈರಾಮಡಗಿ ಅಭಿಮತಪಟ್ಟರು.

ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಡಾ. ಬಿ. ಆರ್. ಅಂಬೇಡ್ಕರ್ ಸ್ಮರಣಾರ್ಥ ಸ್ಪರ್ಧಾಕುಟದ ಸಪ್ತಾಹ ಸಮಾರೋಪ ಸಮಾರಂಬ ನಡೆಯಿತು.

ಕಾರ್ಯಕ್ರಮವನ್ನುದ್ದೆಶಿಸಿ ಶರಣಗೌಡ ಪಾಟೀಲ್ ಬೈರಾಮಡಗಿ ಮಾತನಾಡಿ ಮೌಡ್ಯತೆಯಿಂದ ಹೊರ ಬಂದಾಗ ಮಾತ್ರವೆ ಬುದ್ಧ, ಬಸವ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ವಿಚಾರಗಳು ತಿಳಿದುಕೊಳಬಹುದು. ಈ ಮುವರು ಮಾಹಾ ಪುರುಷರು ಜೀವನಲ್ಲಿ ಸಾರಿದ ವಿಚಾರಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಳಬೇಕು. ವಿದ್ಯಾರ್ಥಿಯು ತಮ್ಮ ಜೀವನದ ಅಮುಲ್ಯವಾದ ಸಮಯವನ್ನ ವ್ಯರ್ಥ ಮಾಡದೆ ಉತ್ತಮ ಜೀವನಕ್ಕೆ ಹಾಗೂ ತಂದೆ ತಾಯಿ ಗುರುಗಳ ಕೀರ್ತಿ ತರುವುದಕ್ಕದರು ಒದಬೇಕು. ನಮ್ಮ ತಲೆಯಲ್ಲಿರು ಜಾತಿಯನ್ನು ತೆಗೆದು ಯತ್ತಮಮರಾಗಿ ಬದಿಕಬೇಕು. ಜಾತಿ ನಮ್ಮ ಜೀವನವನ್ನೆ ನಾಶ ಮಾಡುತ್ತದೆ. ನಮ್ಮನ ಅನರ್ಹರನ್ನಾಗಿ ಮಾಡುತ್ತದೆ. ಜಾತಿಯಿಂದ ಆಚೆ ಬಂದು ಬದುಕಬೇಕು. ನಮ್ಮ ಜೀವನದಲ್ಲಿ ಯಾಔಉದೆ ಕಾಯಕವನ್ನು ಮಾಡಿದರು ಕೂಡ ಅದರಲ್ಲಿ ತಲ್ಲಿನರಾಗಿರಬೇಕು. ಆ ಕಾಯಕಕ್ಕೆ ನ್ಯಾಯವನ್ನು ನೀಡಿದಾಗ ಮಾತ್ರ ನಾವು ಪ್ರಭುದ್ದರಾಗಿ ಬದುಕಬಹುದು ಎಂದರು.

ನಂತರ ಡಾ. ವಿಜಯಕುಮಾರ ಸಾಲಿಮನಿ ಮಾತನಾಡಿ ವಿದ್ಯಾರ್ಥಿ ಜೀವನವೆ ಒದಿಗಾಗಿ ಮುಡಿಪಿಡಬೇಕು. ಯಾರು ಪುಸ್ತಕವನ್ನು ಅಪ್ಪಿಕೊಳುತ್ತಾರೊ ಅವರನ್ನ ಈ ಜಗತ್ತೆ ಅಪ್ಪಿಕೊಂಡರು ಕೂಡ ಅನುಮಾನವಿಲ್ಲ. ಪುಸ್ತಕ ನಮ್ಮ ಜೀವನವನ್ನೆ ಬದಲಿದವುದು. ವಿದ್ಯಾರ್ಥಿಗಳು ಪುಸ್ತಕದ ಬೆನ್ನು ಉತ್ತಿದರೆ ಸಾಕು ಅವರನ್ನ ಯಶಸು ಬೆನ್ನತಿ ಬರುತ್ತದೆ. ಸಾಧನೆ ಎಂಬುವುದು ಸೋಮಾರಿಯ ಸ್ವತ್ತಲ್ಲ ಎಂಬುವುದನ್ನ ಅರಿತರೆ ಮಾತ್ರ ಸಾಧನೆ ಮಾಡಬಹುದು. ಒದಿನಿಂದ ಪಡೆದ ಜ್ಞಾನ ಯಾವತ್ತಿಗು ಕೂಡ ಹಾಳಾಗುವುದಿಲ್ಲ. ತಮ್ಮ ಅಮುಲ್ಯವಾದ ಸಮಯವನ್ನು ವ್ಯರ್ಥ ಮಾಡದೆ ಒದಿನಕಡೆ ಗಮನ ನೀಡಿ ಎಂದರು.

ಈ ಸಂದರ್ಭಧಲ್ಲಿ ಪ್ರಾಂಶುಪಾಲರಾದ ಡಾ. ಕರಿಗೋಳೇಶ್ವರ ಫರತಬಾದ, ಪಿ.ಎಸ್.ಐ. ಸುರೇಶ ಕುಮಾರ, ಡಾ. ಗುರುಪ್ರಕಾಶ ಹೂಗಾರ, ಡಾ. ವಿಷ್ಣುವರ್ಧನ ಡಾ. ಬಿ. ಆರ್. ಅಂಬೆಡ್ಕರ್ ಸ್ಮರಣಾರ್ಥ ಸ್ಪರ್ಧಾಕುಟದ ಸಂಚಾಲಕರು ಸ. ಪ್ರ. ದ. ಕಾಳೇಜು ಜೇವರ್ಗಿ, ಡಾ. ಲಕ್ಷ್ಮಣ ಬೋಸ್ಲೆ, ಡಾ. ವಿನೋಧಕುಮಾರ ಹತ್ತಿಗೂಡುರ, ಡಾ. ಅಮೀತ್, ಡಾ. ಗೀರಿಶ ರಾಠೋಡ, ಡಾ. ನಾಗರೇಡ್ಡಿ, ನಾಗಣ್ಣ ಪಾಟೀಲ್, ಡಾ. ನಿಜಗುಣ ಚಕ್ರವರ್ತಿ, ಭೀಮಣ್ಣ ಬೇಡಕಪಳ್ಳಿ, ಖಾಜಾವಲಿ ಚನಾಳ, ಡಾ. ಶೈಲಜಾ, ತುಕರಾಮ ಸಾಗರ, ದೇವಿಂದ್ರ ಜಟ್ನಾಕರ್, ಭೀಮು ಬಡಿಗೇರ, ಸಿದ್ದು ಮಾಗಣಗೇರಿ ಉಪಸ್ಥಿತರಿದ್ದರು