ನಮ್ಮ ವಂತಿಗೆ, ನಮ್ಮ ಪಿಂಚಣಿ, ಭಿಕ್ಷೆ ಕೇಳುತ್ತಿಲ್ಲ, ಇದು ನಮ್ಮ ಹಕ್ಕು

ವಿಜಯಪುರ :ನ.3: ನಮ್ಮ ಸೇವಾವಧಿ ಪೂರ್ತಿ ಇಪಿಎಸ್ 95 ಪಿಂಚಣೀ ಯೋಜನೆಯಲ್ಲಿ ಪ್ರತಿ ತಿಂಗಳೂ ವಂತಿಗೆಯಾಗಿ 417ರೂ, 541ರೂ ಹಾಗೂ 1250ರೂ ಹೀಗೆ 30-40 ವರ್ಷ ಸಂಬಳದಲ್ಲಿ ಹಣ ಕಟ್ಟಿದ್ದೇವೆ. ಈಗ ನಮಗೆ ನೀಡುತ್ತಿರುವ ಪಿಂಚಣೀ ಕೇವಲ 250 ರೂ ದಿಂದ 2500ರೂ ಅಷ್ಟೇ, 2014-15 ರಲ್ಲಿ ಕನಿಷ್ಠ ಪಿಂಚಣೀ 1000 ರೂ ಮಾಡಿದ್ದರೂ ದೇಶದ 70 ಲಕ್ಷ ಪಿಂಚಣೀದಾರರಲ್ಲಿ 27 ಲಕ್ಷ ಜನರಿಗೆ ಇದುವರೆಗೆ ನೀಡಿರುವದಿಲ್ಲ. ಇದು ಹಗಲು ದರೋಡೆ ಎಂದು ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯಕ್ಷ ಕಮಾಂಡರ್ ಅಶೋಕ್ ರಾವುತ್‍ರವರು ನಗರದ ದರಬಾರ ಹಿಂದುಗಡೆ ಇರುವ ಪ್ರಗತಿ ಮಂಗಲ ಕಾರ್ಯಾಲಯದಲ್ಲಿ ಶನಿವಾರ ಜರುಗಿದ ಇಪಿಎಸ್ 95 ಪಿಂಚಣಿದಾರರ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.

ಮುಂದುವರೆದು ಮಾತನಾಡುತ್ತಾ ಇಪಿಎಸ್ 95 ಪಿಂಚಣೀದಾರರ ಬೃಹತ್ ಸಮಾವೇಶದಲ್ಲಿ ಇಪಿಎಫ್‍ಓದ ಮೋಸದಾಟದ ವಿವರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ನಮ್ಮದೇ ವಂತಿಗೆ ಹಣ ಇಡುಗಂಟಾಗಿ ಇಟ್ಟು ಕೊಂಡು ಅದರ ಹಣದಿಂದಲೇ ಪಿಂಚಣೀ ನೀಡುವ ಈ ಇಪಿಎಫ್‍ಓ ಪಿಂಚಣೀದಾರರು ಸತ್ತ ಮೇಲೆ ಹೆಂಡತಿಗೆ ಅರ್ಧ ಪಿಂಚಣೀ, ನಂತರ ಇಟ್ಟುಕೊಂಡಿರುವ ಇಡುಗಂಟನ್ನು ವಾರಸುದಾರರಿಗೆ ವಾಪಸ ನೀಡುವ ನಿಯಮಾವಳಿ ಇದ್ದರೂ ತಿದ್ದುಪಡಿ ಮಾಡಿಕೊಂಡು ಆ ಹಣವನ್ನೂ ನುಂಗಿ ಹಾಕಿ ಖಖಿI ಕಾಯ್ದೆಯಲ್ಲಿ ವಿವರ ಕೇಳಿದಾಗ 7 ಲಕ್ಷ ಕೋಟಿಗೂ ಮಿಕ್ಕಿ ಹಣ ಇದೆ ಎಂದು ಲೆಕ್ಕ ಹೇಳುವ ಈ ಭ್ರಷ್ಟ ಇಪಿಎಫ್‍ಓ ಪಿಂಚಣೀದಾರರು ಭವಿಷ್ಯಕ್ಕಾಗಿ ಬೆವರು ಸುರಿಸಿ ವಂತಿಗೆಯಾಗಿ ಕೂಡಿಟ್ಟ ಹಣವನ್ನು ಸರಕಾರ ದ ಇತರೇ ಯೋಜನೆಗೆ ಬಳಸಲು ಇತ್ತೀಚಿಗೆ 58 ಸಾವಿರ ಕೋಟಿ ಹಣ ನೀಡಿದೆ. ಹಿಂದಿನ ಸರ್ಕಾರಗಳಿಗೂ ನೀಡಿದೆ. ಇದೆಂಥಹ ಸಂವಿಧಾನಾತ್ಮಕ ಪಿಂಚಣೀ ಕಾಯ್ದೆ ಇದನ್ನು ಕೇಳಲು ಇಳಿ ವಯಸ್ಸಿನ ಪಿಂಚಣೀದಾರರು ಬೀದಿಗಿಳಿಯಬೇಕೆ. ಹೋರಾಟ ನಡೆಸಬೇಕೆ. ಒಬ್ಬ ರಿಗೊಂದು ಕಾನೂನು ಇನ್ನೊಬ್ಬರಿಗೊಂದು ಕಾನೂನು ಇದೆಯಾ. ದೇಶದ ಅತ್ಯುನ್ನತ ನ್ಯಾಯ ತೀರ್ಪು ಸುಪ್ರೀಂಕೋರ್ಟ್ ನಿಂದ 2016 ರಲ್ಲೇ ಆಗಿದ್ದರೂ ಸರಕಾರದ ಸಹಾಯ ದೊಡನೆ ಅಪೀಲ್ ಮೇಲೆ ಅಪೀಲ್ ಮಾಡುತ್ತಾ ಪಿಂಚಣೀ ಹೆಚ್ಚಳ ನಿರೀಕ್ಷೆಯಲ್ಲೇ ದೇಶದ ತುಂಬಾ ದಿನಕ್ಕೆ ಸರಾಸರಿ 200 ಪಿಂಚಣೀದಾರರು ಮರಣ ಹೊಂದುತ್ತಿದ್ದರೂ ದಿನ ದೂಡುತ್ತಾ ಸುಪ್ರೀಂಕೋರ್ಟ್‍ಗೆ ಸುಳ್ಳು ಮಾಹಿತಿ ನೀಡಿ ನ್ಯಾಯಾಲಕ್ಕೇ ಮಾಡುತ್ತಿರುವ ಅವಮಾನ ಅಲ್ಲವೇ. ಈಗ ಅಧಿಕಾರ ಇದೆ ಎಂದು ಸಂವಿಧಾನಾತ್ಮಕ ಭಾರತದಲ್ಲಿ ಏನೆಲ್ಲಾ ಮಾಡುತ್ತಿರುವ ಈ ಇಪಿಎಫ್‍ಓದ ಕಾರ್ಯ ವೈಖರಿಯನ್ನು ಸರಕಾರ ಸಂಪೂರ್ಣ ತನಿಖೆಗೆ ಒಳಪಡಿಸಬೇಕು ಸರ್ಕಾರ ಗಮನಿಸಬೇಕು.

ಇಂದಿನ ಬೆಲೆ ಏರಿಕೆ ದಿನದಲ್ಲಿ 1000 ರೂ 2000ರೂ ನಲ್ಲಿ ಹೇಗೆ ಜೀವನ ನಡೆಸಬೇಕು ವೃದ್ಧರು ಪತ್ನಿ ಯೊಂದಿಗೆ. ಇದರ ಕನಿಷ್ಠ ಚಿಂತನೆಯೂ ಸರಕಾರಕ್ಕಿಲ್ಲವೆ.ಸರಕಾರವು , ತನ್ನ ಯೋಜನೆಗಳಲ್ಲಿ ಒಂದು ಪೈಸೆನೂ ತೊಡಗಿಸದೇ ಇರುವವರಿಗೆ, ವೋಟ್ ಬ್ಯಾಂಕ್‍ಗಾಗಿ ಯಾರ್ಯಾರಿಗೋ, ಯಾವುದಾವುದೋ ಪಿಂಚಣೀ ನೀಡುತ್ತಿವೆ, ಜೈಲಲ್ಲಿ ಇರುವ ಕಳ್ಳ ,ಲಫಂಗ ಕೊಲೆಗಡುಕರಿಗೆ ದಿನಕ್ಕೆ 180 ರೂಗಳವರೆಗೆ ಖರ್ಚು ಮಾಡುತ್ತದೆ. ಪೆÇೀಲಿಸ್ ನಾಯಿಗಳಿಗೆ 3000ರೂ ಪಿಂಚಣೀ ಅಂತಾ ಖರ್ಚು ಮಾಡುತ್ತದೆ. ಶಾಸಕರು ಸಂಸದರಿಗೆ, ಒಂದು ಪೈಸೆನೂ ತೊಡಗಿಸದೇ ಎರಡೆರಡು ಪಿಂಚಣೀ ಸರ್ಕಾರ ನೀಡುತ್ತಿದೆ. ಆದರೆ ವಂತಿಗೆ ನೀಡಿದ ನಮಗೆ ಸರಾಸರಿ ದಿನಕ್ಕೆ 37 ರೂ ನೀಡುತ್ತದೆ. ಗಂಡ ಹೆಂಡತಿಗೆ ಒಂದು ಸಲ ಚಹ ಬನ್ನ ತಿನ್ನಲೂ ಸಾಲುವುದಿಲ್ಲ.

ಇದೆಂಥಹ ಪಿಂಚಣೀ ಕಾನೂನು. ಸ್ವತಂತ್ರ ಭಾರತದಾದ್ಯಂತ ದೊಡ್ಡ ಜನಾಂದೋಲನವನ್ನೇ ಮಾಡುತ್ತೇವೆ. ಜೀವ ಬಿಟ್ಟೇವು ಯೋಗ್ಯ ಪಿಂಚಣೀ ಹೆಚ್ಚಳ ಆಗುವವರೆಗೆ ಹೋರಾಟ ಬಿಡುವುದಿಲ್ಲ ಎಂದು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪಿಂಚಣೀದಾರರಿಗೆ ಭರವಸೆಯಿಂದಿರಲು ಕಮಾಂಡರ್ ಅಶೋಕ್ ರಾವುತ್ ಹೇಳಿದರು. ಸಮಾವೇಶದಲ್ಲಿ ರಾಷ್ಟ್ರೀಯ ಮಹಾ ಕಾರ್ಯದರ್ಶಿ ವಿಜಯೇಂದ್ರ ಸಿಂಗ್, ಓಂಅ ದಕ್ಷಿಣ ಭಾರತದ ಸಂಚಾಲಕ ರಮಾಕಾಂತ ನರಗುಂದ, ಕರ್ನಾಟಕದ ಅದ್ಯಕ್ಷ ಸ್ವಾಮಿ, ಮಂಜುನಾಥ್, ಕೆ.ಎಸ್.ಆರ್ ಟಿ.ಸಿಯ ನಮಾಜಿಯವರು, ನಂಜುಂಡೆಗೌಡರು, ಶಾಂತಿನಾಥ ಪಾಟೀಲ್, ವೀರಕುಮಾರ ಗಡಾದ ಹಾಗೂ ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ ಮುಖಂಡರು ಮಾತನಾಡಿದರು. ಆಲಗೊಂಡ ವಂದನಾರ್ಪನೆ ಮಾಡಿದರು.