ನಮ್ಮ ಯಾತ್ರಿ ಕ್ಯಾಬ್ ಸೇವೆಗೆ ಅದ್ಧೂರಿ ಚಾಲನೆ

ಬೆಂಗಳೂರು.ಏ.೧೯- ಇಂದಿನಿಂದ ನಗರದಲ್ಲಿ ನಮ್ಮ ಯಾತ್ರಿ ಕ್ಯಾಬ್‌ಗಳ ಸೇವೆ ಆರಂಭಗೊಂಡಿದೆ.
ಈ ಸೇವೆಗೆ ಹೆಚ್ಚುವರಿ ಹಣ ನೀಡಬೇಕಿಲ್ಲ. ನಮ್ಮ ಯಾತ್ರಿ ಅಪ್ಲಿಕೇಶನ್ ಆಗಿದ್ದು ಆಟೋಗಳಂತೆ ಸೇವೆಗಳನ್ನು ನೀಡುತ್ತದೆ. ೨೫೦೦೦ ಚಾಲಕರನ್ನು ಹೊಂದಿದ್ದು
೬ ತಿಂಗಳಲ್ಲಿ ೧ ಲಕ್ಷ ಚಾಲಕರನ್ನು ಆನ್‌ಬೋರ್ಡ್ ಮಾಡುವ ಗುರಿಯನ್ನು ಅಪ್ಲೀಕೇಶನ್ ಹೊಂದಿದೆ.
ನಮ್ಮ ಯಾತ್ರಿ ನಾನ್ ಎಸಿ ಮಿನಿ ಕ್ಯಾಬ್ ವೈಶಿಷ್ಯವನ್ನು ಪರಿಚಯಿಸುತ್ತದೆ. ಎಸಿ ಬಳಕೆಯೆ ಬಜೆಟ್ ಸ್ನೇಹಿ ಕ್ಯಾಬ್‌ಗಳು ಚಂದಾದಾರಿಕೆ ಯೋಜನೆಗಳಲ್ಲೂ ಲಭ್ಯವಿದೆ. ಎಸಿಮಿನಿ, ಸೆಡನ್
ಮತ್ತು ಎಕ್ಸ್‌ಎಲ್ ಕ್ಯಾಬ್, ವೈವಿಧ್ಯಮಯ ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತದೆ.
ನಮ್ಮ ಯಾತ್ರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅದ್ಧೂರಿ ಚಾಲನೆ ನೀಡಿದರು. ಈ ಕಾರ್ಯಕ್ರಮವನ್ನು ಉದ್ಘಾಟಿಸಲು ಹೆಮ್ಮೆಯಾಗುತ್ತದೆ. ಯಾತ್ರಿ, ಕರ್ನಾಟಕದ ಸ್ವಂತ ಅಪ್ಲಿಕೇಶನ್ ಆಗಿದೆ. ನಾವೀನ್ಯತರ, ಪಾರದರ್ಶಕತೆ ಮತ್ತು ಒಳಗೊಳ್ಳುವಿಕೆ ಮತ್ತು ಕ್ಯಾಬ್ ಸೇವೆಯ ಪ್ರಾರಂಭದೊಂದಿಗೆ ಯಶಸ್ಸನನು ಬಯಸುತ್ತೇವೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ದಿ ಇಂಡಿಯನ್ ಫೆಡರೇಶನ್ ಆಫ್ ಬೇಸ್ಡ್ ಟ್ರಾನ್ಸ್‌ಪೋರ್ಟ್ ವರ್ಕರ್ಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶೇಕ್ ಸಲಾವುದ್ದೀನ್, ನಾನು ನಮ್ಮ ಯಾತ್ರಿಯನ್ನು ಅಭಿನಂದಿಸುತ್ತೇನೆ.
ಚಾಲಕರ ಕಲ್ಯಾಣ ಯೋಜನೆಯನ್ನು ವರ್ಧಿಸುತ್ತದೆ ಎಂದರು.
ನಮ್ಮ ಯಾತ್ರಿಯ ಕಾರ್ಯನಿರ್ವಹಣಾಧಿಕಾರಿ ಮಗಿಜನ್ ಸೆಲ್ವನ್, ನಮ್ಮ ಯಾತ್ರಿ ಕೇವಲ ಅಪ್ಲಿಕೇಸನ್ ಅಲ್ಲ. ಅತ್ಯುತ್ತಮ ವೆಚ್ಚದಲ್ಲಿ ತಂತ್ರಜ್ಞಾನ, ಚಾಲಕರು ಮತ್ತು ಪ್ರಯಾಣಿಕರಿಗೆ ಒಳ್ಳೆಯ ತೃಪ್ತಿಯನ್ನು ನೀಡುತ್ತದೆ ಎಂದರು.