ನಮ್ಮ ಭಾಷೆ, ನಮ್ಮ ಹೆಮ್ಮೆ-ನಲ್ಲಮುತ್ತಿ ದುರುಗೇಶ.

ಕೂಡ್ಲಿಗಿ.ನ.1:- ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡಿಗನಾಗಿರು ಎಂಬಂತೆ ನಮ್ಮ ಭಾಷೆ ನಮ್ಮ ಹೆಮ್ಮೆ ಅದನ್ನು ನಮ್ಮ ಹೃದಯಾಂತರಾಳದಿಂದ ಉಳಿಸಿ ಬೆಳೆಸೋಣ ಎಂದು ಕೂಡ್ಲಿಗಿ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ (ಮೇನ್ ಬಾಯ್ಸ್ ಸ್ಕೂಲ್ ) ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಲ್ಲಮುತ್ತಿ ದುರುಗೇಶ ತಿಳಿಸಿದರು.
ಅವರು ಇಂದು ಬೆಳಿಗ್ಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಾಲಾ ಆವರಣದಲ್ಲಿ ದ್ವಜಾರೋಹಣ ನೆರವೇರಿಸಿ ಮಾತನಾಡುತ್ತ ನಾವೆಲ್ಲರೂ ಕನ್ನಡ ಭಾಷೆ ನೆಲ ಜಲ ಕಾಪಾಡಬೇಕು ಅನೇಕ ಐತಿಹಾಸಿಕ ಪರಂಪರೆ ಹೊಂದಿರುವ ಕರ್ನಾಟಕದ ತಾಯಿ ಭುವನೇಶ್ವರಿ ನೆಲದಲ್ಲಿ ಹುಟ್ಟಿದ ನಾವೇ ಧನ್ಯರು ಎಂದು ದುರುಗೇಶ ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಜರಿದ್ದರು.