
ಅನಂತ ಜೋಶಿ(ಸಂಜೆವಾಣಿ ಪತ್ರಿನಿಧಿಯಿಂದ)ಹೊಸಪೇಟೆ, ಆ.14: ನಾವು ಪರಿಸರವನ್ನು ಎಷ್ಟು ಹಾಳು ಮಾಡುತ್ತಿದ್ದೇವೆ ಎನ್ನವುದನ್ನು ಸಾಕ್ಷಿಕರಿಸಲು ತುಂಗಭದ್ರೆಯ ಒಡಲು ಹಚ್ಚಹಸಿರಾಗಿರುವುದನ್ನು ನೋಡಿದರೆ ಸಾಕು ಅರ್ಥವಾಗುತ್ತದೆ.ಕಲ್ಯಾಣ ಕರ್ನಾಟಕದ ರೈತರ ಜೀವನಾಡಿ, ತುಂಗಭದ್ರಾ ನಮ್ಮೆಲ್ಲಾ ತಾಜ್ಯವನ್ನು ತುಂಬಿಕೊಂಡು ಹಸಿರು ಬಣ್ನಕ್ಕೆ ತಿರುಗಿ ಮೈತುಂಬಿಕೊಂಡಿದ್ದಾಳೆ. ನದಿಪಾತ್ರದ ಗ್ರಾಮಸ್ಥರು ಸೇರಿದಂತೆ ಜೀವ ಸಂಕುಲಕನದಲ್ಲಿ ಆಂತಕ ಮನೆ ಮಾಡಿದೆ.ಒಳಹರಿವು ಹೆಚ್ಚಾಗುತ್ತಿಂದತೇ ಇತ್ತ ಜಲಾಶಯದ ನೀರು ಹಸಿರು ಬಣ್ಣಕ್ಕೆ ಬದಲಾಗಿರುವುದು, ನದಿಪಾತ್ರದ ಜನರ ಆತಂಕಕ್ಕೆ ಕಾರಣವಾಗಿದೆ. ಪ್ರತಿವರ್ಷವೂ ಬದಲಾಗುವ ಈ ಕ್ರಿಯೆ ಈ ಭಾಗದ ಜನರಿಗೆ ತಲೆನೋವಾಗಿ ಪರಿಣಿಸಿದೆ. ಬಹುತೇಕ ವರದಿಗಳ ಪ್ರಕಾರ ಜಲಾನಯನ ಪ್ರದೇಶ ಸೇರಿದಂತೆ ನದಿಯೂದ್ದಕ್ಕೂ ಭೂಮಿಯಲ್ಲಿ ರಾಸಾಯನಿಕಗಳ ಅತಿಯಾದ ಬಳಕೆ, ಪರಿಸರದ ಹಾಳು ಮಾಡುತ್ತಿರುವ ಸಂಕೇತವನ್ನು ತುಂಗಭದ್ರೆ ನೀಡುತ್ತಿದ್ದಾಳೆ ಎನ್ನವುದಾದರು ಕಡಿಮೆ ಮಾಡದಿರುವುದು ವರ್ಷದಿಂದ ವರ್ಷಕ್ಕೆ ನೀರು ಹಸಿರಾಗಲು ಕಾರಣವಾಗಿದೆ.ತ್ಯಾಜ್ಯ ಸೇರುವ ಶಂಕೆ:ನಗರ, ಪಟ್ಟಣಗಳು ಸೇರಿದಂತೆ ಕಾರ್ಖಾನೆಗಳ ತಾಜ್ಯ ಹರಿದು ಜಲಾಶಯ ಸೇರುವ ಸಾಧ್ಯತೆ ಇರುವುದರಿಂದ ಈ ನೀರು ಹಸಿರು ಬಣ್ಣಕ್ಕೆ ತಿರುಗುವ ಸಂಭವಿದೆ. ಅದರಲ್ಲಿಯೂ ಕೃಷಿಭೂಮಿಗಳಲ್ಲಿ ಬಳಕೆ ಮಾಡುವ ಅತಿಯಾದ ಕ್ರಿಮಿನಾಶಕ, ರಸಾಯನಿಕ ಬಳಕೆಯ ಪರಿಣಾಮ ನೀರು ಹಸಿರಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.ಜೀವ ಸಂಕುಲಕ್ಕೆ ಕುತ್ತು:ಜಲಾಶಯದ ನೀರನ್ನು ಕೃಷಿ, ಕೈಗಾರಿಕೆ ಜತೆಗೆ ಜನ- ಜಾನುವಾರು ಕುಡಿಯಲೂ ಬಳಸಲಾಗುತ್ತಿದೆ. ನೀರು ನಾಯಿ, ಮೀನು, ಏಡಿ, ಆಮೆ ಸೇರಿ ಹಲವು ಜಲಚರ ಪ್ರಾಣಿ, ಪಕ್ಷಿಗಳಿಗೂ ಜಲಾಶಯದ ನೀರೇ ಆಧಾರವಾಗಿದೆ. ಕಳೆದ 2008, 2009ರಲ್ಲಿ ಜಲಾಶಯದ ನೀರು ಹಸಿರು ಬಣ್ಣಕ್ಕೆ ತಿರಿಗಿದಾಗ ಹಿನ್ನೀರು ಪ್ರದೇಶದಲ್ಲಿ ಅಪಾರ ಮೀನುಗಳು ಸತ್ತು ಬಿದ್ದಿದ್ದನ್ನು ಸ್ಮರಿಸಬಹುದು.ತಜ್ಷರ ಭೇಟಿ:ಹಿಂದೆ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ತಜ್ಞರ ತಂಡವೊಂದು ಜಲಾಶಯಕ್ಕೆ ಭೇಟಿ ನೀಡಿ, ನೀರನ್ನು ಪರಿಶೀಲಿಸಿತ್ತು. ನೀರು ಹಸಿರಾಗಲು ಬ್ಲೂ ಗ್ರೀನ್ ಅಲ್ಗೆ ಕಾರಣ ಎಂಬ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಿತ್ತು.ತ್ಯಾಜ್ಯಯುಕ್ತ ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾರಜನಕ, ರಂಜಕ, ಪೋಟ್ಯಾಷ್, ನೈಟ್ರೇಟ್, ಪಾಸ್ಟೇಟ್ ಮತ್ತು ಸಿಟ್ ಅಂಶಗಳಿರುತ್ತವೆ. ಸತತ ಮೋಡ ಕವಿದ ವಾತವರಣದಲ್ಲಿ ಏಕಾಏಕಿ ಸೂರ್ಯನ ಕಿರಣಗಳು ನೀರಿನ ಮೇಲೆ ಬೀಳುವುದರಿಂದ ಸೈನೋ ಬ್ಯಾಕ್ಟಿರಿಯಾ (ಬ್ಲೂ ಗ್ರೀನ್ ಅಲ್ಗೆ) ಹುಟ್ಟಿಕೊಳ್ಳುತ್ತವೆ. ಇದರಿಂದ ನೀರು ಹಸಿರು ಬಣ್ಣಕ್ಕೆ ತಿರುಗುವ ಸಾಧ್ಯತೆ ಇದೆ ಎಂಬುದು ತಜ್ಞರ ಅಭಿಪ್ರಾಯ.ಒತ್ತಾಯ:ಪ್ರತಿವರ್ಷ ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ ಜಲಾಶಯದ ನೀರಿನ ಮಾದರಿ ಪರೀಕ್ಷೆ ಮಾಡುತ್ತದೆ. ಅಷ್ಟರೊಳಗೆ ನೀರು ಸಹಜ ಸ್ಥಿತಿಗೆ ಮರಳುತ್ತದೆ. ಅಲ್ಲಿಗೆ ಈ ವಿಷಯ ಗೌಣವಾಗುವುದು, ಮತ್ತೆ ಮಳೆಗಾಲದಲ್ಲಿ ಈ ವಿಷಯಕ್ಕೆ ಮುನ್ನೆಲೆಗೆ ಬರುತ್ತದೆ. ಜಲಾಶಯದ ವಾರ್ಷಿಕ ಬದಲಾವಣೆಯನ್ನು ಟಿ.ಬಿ.ಬೋರ್ಡ್ ಮಂಡಳಿ ಗಂಭೀರವಾಗಿ ಪರಿಗಣಿಸಿ, ಆತಂಕ ನಿವಾರಣೆ ಮಾಡಬೇಕು ಎಂಬುದು ಜಲಾಶಯವನ್ನು ಅವಲಂಭಿಸಿರುವ ಜನರ ಒತ್ತಾಸೆ.ಮಾಲೀನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಗಳೊಂದಿಗೆ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿ, ನೀರಿನ ಮಾದರಿ ಸಂಗ್ರಹಿಸಿ, ಪರೀಕ್ಷೆ ನಡೆಸಲಾಗುವುದು. ವರದಿ ಆಧಾರಿಸಿ, ನೀರಿನ ಬದಲಾವಣೆಗೆ ನಿಖರ ಕಾರಣ ತಿಳಿದು ಬರಲಿದೆ.ಎಸ್.ಸಿ.ಸುರಶ್ ಪರಿಸರ ಅಧಿಕಾರಿ, ಕರ್ನಾಟಕ ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ, ವಿಜಯನಗರ.ಕ್ರಿಮಿನಾಶಕ, ರಸಗೊಬ್ಬರ ಬಳಕೆ, ಕೈಗಾರಿಕೆ, ನಗರ, ಪಟ್ಟಣಗಳಿಂದ ಹರಿದು ಬರುವ ತ್ಯಾಜ್ಯ ನದಿಗೆ ಸೇರುವುದರಿಂದ ಜಲಾಶಯದ ನೀರು ಹಸಿರಾಗುವ ಸಾಧ್ಯತೆ ಇದೆ.ಸಮದ್ ಕೊಟ್ಟೂರು,ವನ್ಯಜೀವಿ ತಜ್ಷರು, ಹೊಸಪೇಟೆ.