ನಮ್ಮ ಪಕ್ಷದವರೇ ಬೆನ್ನಿಗೆ ಚೂರಿ ಹಾಕಿದರು- ಸೋಮಪ್ಪ ಆರೋಪ


 ಸಂಜೆವಾಣಿ ವಾರ್ತೆ
ಸಂಡೂರು:ಮೇ: 16; ಜೆ.ಡಿ.ಎಸ್. ಅಭ್ಯರ್ಥಿ ಕುರೇಕುಪ್ಪ ಎನ್. ಸೋಮಪ್ಪನವರು ಕೋಟಿಗಟ್ಟಲೆ ಹಣ ಪಡೆದು ಕಾಂಗ್ರೇಸ್ ಪಕ್ಷಕ್ಕೆ ಬುಕ್ ಆಗಿದ್ದಾನೆ ಎನ್ನುವ ಅಪ ಪ್ರಚಾರ ಮಾಡಿ ನನಗೆ ಬೀಳುವ ಮತಕ್ಕೆ ಕಲ್ಲು ಹಆಕಿದರು, ನನ್ನ ಸೋಲಿಗೆ ನಮ್ಮ ಪಕ್ಷದವರೇ ಕಾರಣವಾಗಿದ್ದು ನಮ್ಮ ಪಕ್ಷದವರೇ ನಮ್ಮ ಬಎನ್ನಿಗೆ ಚೂರಿಹಾಕಿದರು, ನಮ್ಮ ಪಕ್ಷದ ಸಂಘಟನೆಯಲ್ಲಿ ತೊಡಗಿಸಿದವರಂತೆ ನಟಿಸಿ ಬೇರೊಂದು ಪಕ್ಷವನ್ನು ಸೇರಿ ನನಗೆ ಮೋಸ ಮಾಡಿದರು, ನಮ್ಮ ಪಕ್ಷದವರೇ ಆದ ಕಮತೂರು ಮಲ್ಲೇಶಪ್ಪ, ಕೆ.ಕೆ. ಮೆಹಬೂಬ್ ಭಾಷಾ, ಎಂ.ಡಿ. ಯೂಸೂಫ್, ಕೆ.ಕುಮಾರಸ್ವಾಮಿ, ಅಂಜಿನಪ್ಪ, ಕಾಸಿಂ ಪೀರಾ ಯಶವಂತನಗರ ಷಫಿ, ಹೊನ್ನೂರಸಾಬ್,. ಕೆ.ಕೆ. ಷರೀಫ್, ಲಾಲಸ್ವಾಮಿಯವರು ಪಕ್ಷದಲ್ಲಿ ವಿರೋಧಿ ಚಟುವಟಿಕೆ ನಡೆಸಿದುದರ ಪ್ರಯುಕ್ತ 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲು ಜಿಲ್ಲಾಧ್ಯಕ್ಷರಿಗೆ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಣ್ಣನವರಿಗೆ ಪತ್ರ ಬರೆದಿದ್ದೇನೆ ಎಂದು ಜೆ.ಡಿ.ಎಸ್. ಅಭ್ಯರ್ಥಿಯಾಗಿ ಸೋತ ಎನ್. ಸೋಮಪ್ಪ ನೋವಿನಿಂದ ಬಿನ್ನಿಗೆ ಚೂರಿಹಾಕಿದವರ ಬಗ್ಗೆ ತಿಳಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಖಾದರ್ ಭಾಷಾ ಎನ್ನುವವರಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವವೇ ಇಲ್ಲ ಅವರಿಗೆ ಅಧಿಕಾರ ಕೊಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. ಖಾದರ್ ಭಾಷಾ ಹಾಗೂ ಬಾಲಸುಬ್ರಮಣ್ಯರವರು ಬಾಹ್ಯ ಬೆಂಬಲ ನೀಡುವುದಾಗಿ ಪಕ್ಷದಲ್ಲಿ ಉಳಿದರು, ದುಡ್ಡಿನ ಮುಂದೆ ಸ್ವಾಭಿಮಾನ ಕೆಲಸ ಮಾಡಲಿಲ್ಲ, ನಾನು ಸ್ವಾಭಿಮಾನದ ಚುನಾವಣೆ ಎದುರಿಸಿದ್ದೇನೆ, ಮಾಜಿ ಮುಖ್ಯಮಂತ್ರಿಗಳಾದ ಕುಮಾರಣ್ಣನವರು ಸರಿಯಾದ ಸಮಯಕ್ಕೆ ನಿಗದಿತ ಫಂಡನ್ನು ಕಳಿಸಲಾಗಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ನನಬಗ್ಗೆ ಇಲ್ಲಸಲ್ಲದ ಆರೋಪ ಹೋರಿಸಿ ಕಪ್ಪು ಕಳಂಕ ತಂದರು ಅ ವಿಚಾರವಾಗಿ ನನಗೆ ಬೇಸರವಾಯಿತು, ಇನ್ನೋಬ್ಬರ ಹಂಗಿನಲ್ಲಿ ಬದುಕುವುದು ನನ್ನ ಜಾಯಮಾನವಲ್ಲ ನಾನು ಮತದಾರರ ಮನೆಯ ಮಗನಾಗಿ ಕೆಲಸ ಮಾಡುತ್ತೇನೆ. ಪ್ರತಿಯೋರ್ವ ಕಾರ್ಯಕರ್ತ ಎದೆಗುಂದದೆ ಧೈರ್ಯವಾಗಿ ಇರಬೇಕು, ಲೋಕಸಭಾ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿಯ ಮುಂಬರುವ ಎಲ್ಲಾ ಚುನಾವಣೆಗಳನ್ನು ಧೈರ್ಯವಾಘಿ ಎದುರಿಸಲು ಅಭ್ಯರ್ಥಿಗಳನ್ನು ಹಾಕುತ್ತೇನೆ, ಪ್ರತಿಯೊಂದು ಕ್ಷೇಥ್ರದಿಂದಲೂ ಕಟಿಬದ್ಧವಾಗಿ ನಿಂತು ಪರಚಾರ ಮಾಡುತ್ತೇನೆ. ಪಾದಯಾತ್ರೆ, ಮನೆ ಮನೆಗೂ ಭೇಟಿ ನೀಡಿದೆ ಪಂಚರತ್ನ ಯೋಜನೆಗಳ ವಿಚಾರವಾಗಿಯೂ ಜನರಿಗೆ ತಲುಪಿಸಿದ್ದೇನೆ, ಆದರೂ ಚುನಾವಣೆಯಲ್ಲಿ ಪರಾಜಿತನಾದೇ ನನಗೆ 2617 ಮತದಾರರ ಮತದಾನ ಮಾಡಿದ್ದಾರೆ, ಅವರೆಲ್ಲರಿಗೂ ನಾನು ಅಭಿನಂದನೆ ಸಲ್ಲಿಸುವುದು ನನ್ನ ಅದ್ಯ ಕರ್ತವ್ಯವಾಗಿದೆ.
ಈ ಸಂದರ್ಭದಲ್ಲಿ ಎ.ಮಂಜುನಾಥ, ತಿಪ್ಪೇಸ್ವಾಮಿ, ಮೋತ್ಲಕುಂಟೆ ಬಂಡ್ರಿ ಮೂಕಪ್ಪ, ಚಿನ್ನಾಪುರ, ಬಾಲಸುಬ್ರಮಣಿ, ಅಂಬಣ್ಣ, ಪಕ್ಕೀರಪ್ಪ, ಕಾಳಿಂಗೇರಿ ಮಂಜುನಾಥ, ಈರಪ್ಪ, ರಾಜೂ, ಉಪಸ್ಥಿತರಿದ್ದರು. 1 ಕೋಟಿ 75 ಲಕ್ಷ ರೂಪಾಯಿ ಪಕ್ಷದ ಪಂಡ್ ಕುಮಾರಣ್ಣನವರು ನಿಮಗೆ ನೀಡಿದ್ದಾಋಎ ನೀವು ಬಳಕೆ ಮಾಡಿಕೊಳ್ಳಲಿಲ್ಲ, ಕಾರಣವೇನು ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಎನ್. ಸೋಮಪ್ಪನವರು ನೀವೇ ಕುಮಾರಣ್ಣನವರನ್ನು ಕೇಳಿ ನಾನು ಅವರ ಪೋನ್ ಮಾಡಿಕೊಡುತ್ತೇನೆ ಎಂದು ಉತ್ತರಿಸಿದರು , ಯಾರೇ ಕಿಡಿಗೇಡಿಗಳ ಅಪಪ್ರಚಾರಕ್ಕೆ ನಾನು ಬಲಿಪಶುವಾಗಿದ್ದೇನೆ ಎಂದು ನೋವಿನಿಮದ ನುಡಿದರು.