ನಮ್ಮ ನೆಲವೇ ನಮಗೆ ಪ್ರೇರಣೆ ಕುರಿತು ವಿಶೇಷ ಉಪನ್ಯಾಸ

ಕಲಬುರಗಿ,ಮಾ.15:ಕಮಲಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಮಹಾಗಾಂವ್ ಕ್ರಾಸ್‍ನ ಸರ್ಕಾರಿ ಪ್ರಥಮ ದರ್ಜೆ ಮತ್ತು ಸ್ನಾತಕೋತ್ತರ ಕೇಂದ್ರದ ವತಿಯಿಂದ ಮಾರ್ಚ್ 17ರಂದು ಬೆಳಿಗ್ಗೆ 11 ಗಂಟೆಗೆ ನಮ್ಮ ನೆಲವೇ ನಮಗೆ ಪ್ರೇರಣೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ್ ಲೆಂಗಟಿ ಅವರು ತಿಳಿಸಿದ್ದಾರೆ.
ಅಧ್ಯಕ್ಷತೆಯನ್ನು ಪ್ರಿನ್ಸಿಪಾಲ್ ಪ್ರೊ. ಶರಣಪ್ಪ ಮಾಳಗಿ ಅವರು ವಹಿಸುವರು. ಸುರೇಶ್ ಲೆಂಗಟಿ ಅವರು ಆಶಯ ನುಡಿಗಳನ್ನಾಡುವರು. ಸಾಹಿತಿ ಮುಡುಬಿ ಗುಂಡೇರಾವ್ ಅವರು ವಿಶೇಷ ಉಪನ್ಯಾಸ ನೀಡುವರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಜಗದೇವಪ್ಪ ಟಿ. ಧರಣಿ ಹಾಗೂ ಕಾಲೇಜು ಅಭಿವೃಧ್ಧಿ ಸಮಿತಿಯ ಸದಸ್ಯ ಸಿದ್ದಲಿಂಗಪ್ಪ ಹತ್ತಿ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸುವರು. ಮಹಾಗಾಂವ್ ಕ್ರಾಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥೆ ರೇಣುಕಾಬಾಯಿ ಜಿತ್ರಿ ಅವರು ಗೌರವ ಉಪಸ್ಥಿತಿ ಇರುವರು ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಪರಿಷತ್ ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿಗಳಾದ ರವೀಂದ್ರ ಬಿ.ಕೆ., ಪ್ರಶಾಂತ್ ಮಾನಕರ್, ಸಂಘಟನಾ ಕಾರ್ಯದರ್ಶಿಗಳಾದ ಆನಂದ್ ವಾರಿಕ್, ಚೇತನ್ ಮಹಾಜನ್, ಮಹಿಳಾ ಪ್ರತಿನಿಧಿಗಳಾದ ಕಸ್ತೂರಿಬಾಯಿ ರಾಜೇಶ್ವರ್, ನೇತ್ರಾವತಿ ರಾಂಪೂರೆ, ಪರಿಶಿಷ್ಟ ಜಾತಿ ಪ್ರತಿನಿಧಿಗಳಾದ ಮಲ್ಲಿನಾಥ್ ಅಂಬಲಗಿ, ತುಳಸಿಬಾಯಿ ರಾಠೋಡ್, ಹಿಂದುಳಿದ ವರ್ಗ ಪ್ರತಿನಿಧಿ ಸಂಜುಕುಮಾರ್ ನಾಟೀಕಾರ್, ಅಲ್ಪಸಂಖ್ಯಾತರ ಪ್ರತಿನಿಧಿ ಫಯಾಜ್ ಕಮಲಪುರ ಮುಮತಾದವರು ಪಾಲ್ಗೊಳ್ಳುವರು ಎಂದು ಅವರು ತಿಳಿಸಿದ್ದಾರೆ.