ನಮ್ಮ ನಡೆ ಮತದಾನದ ಕಡೆ ಅಭಿಯಾನ

ಮಾನ್ವಿ,ಮೇ.೦೫- ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯ ಆವರಣದಲ್ಲಿ ನಮ್ಮ ನಡೆ ಮತದಾನದ ಕಡೆ ಅಭಿಯಾನದ ಅಂಗವಾಗಿ ಮತದಾನ ಜಾಗೃತಿ ಧ್ವಜರೋಹಣವನ್ನು ನೆರವೇರಿಸಿ ತಾ.ಪಂಚಾಯಿತಿ ಇ.ಒ. ಎಂ.ಡಿ.ಸೈಯಾದ್ ಪಟೇಲ ಮತನಾಡಿ ಪ್ರತಿ ಬಾರಿಕೂಡ ಚುನಾವಣೆಯಲ್ಲಿ ಶೇ ೧೦೦ರಷ್ಟು ಮತದಾನವಾಗದೆ ಇರುವುದು ಪ್ರಜಾತಂತ್ರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದರಿಂದ ಚುನಾವಣ ಆಯೋಗವು ೨೦೨೩ರ ಚುನಾವಣೆಯಲ್ಲಿ ಶೇ ೧೦೦ರಷ್ಟು ಮತದಾರರು ಮತದಾನದ ಪ್ರಕ್ರೀಯೆಯಲ್ಲಿ ಭಾಗವಹಿಸುವ ಮೂಲಕ ಶೇ ೧೦೦ರ ಗುರಿಯನ್ನು ತಲುಪಿ ಉತ್ತಮ ಅಭ್ಯರ್ಥಿಯನ್ನು ಜನರು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಮೇ ೧೦ರವರೆಗೆ ನಮ್ಮ ನಡೆ ಮತದಾನದ ಕಡೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ತಾಲೂಕಿನಾಧ್ಯಂತ ಮೇ ೧೦ರವರೆಗೆ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ವಿವಿಧ ಸಂಘ,ಸಂಸ್ಥೆಗಳು,ಸರಕಾರಿ ಇಲಾಖೆಗಳ ಆವರಣದಲ್ಲಿ ಮತದಾನ ಜಾಗೃತಿ ಧ್ವಜವನ್ನು ಹಾರಿಸಬೇಕು ಹಾಗೂ ಪಟ್ಟಣ ಸೇರಿದಂತೆ ಗ್ರಾಮಗಳ ಮುಖ್ಯ ಬೀದಿಗಳಲ್ಲಿ ಜಾಗೃತಿ ಜಾಥವನ್ನು ನಡೆಸುವ ಮೂಲಕ ಮತದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ನಮ್ಮ ನಡೆ ಮತದಾನದ ಕಡೆ ಅಭಿಯಾನದ ಅಂಗವಾಗಿ ತಾ.ಪಂ.ಆವರಣದಲ್ಲಿ ಮತದಾನ ಜಾಗೃತಿ ಮೂಡಿಸುವ ಉದ್ದೇಶದಿಂದ ಮಹಿಳೆಯರಿಂದ ರಂಗೋಲಿಗಳನ್ನು ಬಿಡಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ನರೇಗಾ ತಾ.ಸಹಾಯಕ ನಿರ್ದೇಶಕರಾದ ಅಲ್ಲಂ ಬಾಷ, ವೀರೇಶ, ಸೇರಿದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಇದ್ದರು.
ತಾಲೂಕು ಆಡಳಿತದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥ ನಡೆಸಲಾಯಿತು.
೩೦-ಮಾನ್ವಿ-೩:
ಮಾನ್ವಿ: ಪಟ್ಟಣದ ತಾ.ಪಂಚಾಯಿತಿ ಕಚೇರಿಯ ಆವರಣದಲ್ಲಿ ನಮ್ಮ ನಡೆ ಮತದಾನದ ಕಡೆ ಅಭಿಯಾನದ ಅಂಗವಾಗಿ ಮತದಾನ ಜಾಗೃತಿ ಧ್ವಜರೋಹಣವನ್ನು ತಾ.ಪಂಚಾಯಿತಿ ಇ.ಒ. ಎಂ.ಡಿ. ಸೈಯಾದ್ ಪಟೇಲ ನೆರವೇರಿಸಿದರು.