
ಮುನವಳ್ಳಿ,ಮಾ.1: ಸಮಿಪದ ಶಿಂದೋಗಿ ಗ್ರಾಮ ಪಂಚಾಯತಿಯಿಂದ ಸಾರ್ವತ್ರಿಕ ವಿಧಾನ ಸಭಾ ಚುನಾವಣೆ 2023 ರ ಪ್ರಯುಕ್ತ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮಕ್ಕೆ ಮತಗಟ್ಟೆ ಕೇಂದ್ರದಲ್ಲಿ ಮತದಾನ ಧ್ವಜಾರೋಹಣ ಮಾಡುವ ಮೂಲಕ ಪಿ.ಡಿ.ಒ ರಮೇಶ ಬೆಡಸೂರ ಚಾಲನೆ ನೀಡಿದರು. ಗ್ರಾಮದ ಪ್ರಮೂಕ ಬೀದಿಗಳಲ್ಲಿ ಘೋಷಣೆಗಳು ಹಾಗೂ ಫಲಕಗಳನ್ನು ಪ್ರದರ್ಶಿಸಿದರು.
ಶ್ರೀಕಾಂತ ಬಡಿಗೇರ, ಬಿ.ಎಲ್.ಓ ಗಳಾದ ಜೋಗೆರ, ಬಂಡಿವಡ್ಡರ, ರಾಜೇಶ್ವರಿ ಬೋವಿ, ಕಿರಣ ಶಿಂದೆ, ನಾಗರಾಜ್ ಕೊಡ್ಲಿವಾಡ, ಪುಂಡಲೀಕ ಮಾಗಡೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಒಕ್ಕೂಟದ, ಸ್ವಸಹಾಯ ಗುಂಪುಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.