ನಮ್ಮ ನಡೆ ಮತಗಟ್ಟೆ ಕಡೆ ವಿಶೇಷ ಅಭಿಯಾನಕ್ಕೆ ಧ್ವಜಾರೋಹಣ ಮೂಲಕ ಚಾಲನೆ

ಸೇಡಂ,ಎ,30: ತಾಲೂಕಾ ಸ್ವೀಪ್ ಸಮಿತಿಯಿಂದ ನಮ್ಮ ನಡೆ ಮತಗಟ್ಟೆ ಕಡೆ ವಿಶೇಷ ಅಭಿಯಾನಕ್ಕೆ ಧ್ವಜಾರೋಹಣ ಮೂಲಕ ಸಹಾಯಕ ಆಯುಕ್ತರು ಚುನಾವಣಾಧಿಕಾರಿಗಳಾದ ಕಾರ್ತಿಕ್ ಎಮ್ (41- ಸೇಡಂ) ಅವರು ವಿದ್ಯಾ ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿಂದು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಮ್ಮ ನಡೆ ಮತಗಟ್ಟೆ ಕಡೆ ಅಭಿಯಾನದಲ್ಲಿ ತಾಲೂಕಿನಾದ್ಯಂತ 260 ಮತದಾನ ಕೇಂದ್ರದಲ್ಲಿ ಧ್ವಜಾರೋಹಣಕ್ಕೆ ಚಾಲನೆ ನೀಡಿದರು.ಈ ವೇಳೆಯಲ್ಲಿ (ತಹಸಿಲ್ದಾರ್) ಚುನಾವಣೆ ಸಹಾಯಕರಾದ ಶಿವರಾಜ್,ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಂಕರ್ ರಾಥೋಡ್,ಪುರಸಭೆಯ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿಗಳು, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಶಿಕ್ಷಣ ಇಲಾಖೆ ಇತರ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.