ಮುದಗಲ್,ಏ.೩೦- ವಿಧಾನಸಭೆ ಚುನಾವಣೆಗೆ ಮತದಾನಕ್ಕೆ ದಿನಗಳು ಹತ್ತಿರ ವಾಗುತ್ತಿ ರುವಂತೆ ಮತದಾರ ರನ್ನು ಮತಗಟ್ಟೆಯತ್ತ ಸೆಳೆಯಲು ವಿನೂತನ ಪ್ರಯತ್ನಕ್ಕೆ ಮುಂದಾಗಿರುವ ಚುನಾವಣ ಆಯೋಗ ಎ. ೩೦ರಂದು ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಏ.೩೦ರಂದು ಏಕಕಾಲಕಕ್ಕೆ ರಾಜ್ಯದ ಎಲ್ಲ ೫೮ ಸಾವಿರ ಮತಗಟ್ಟೆಗಳಲ್ಲಿ ರಾಷ್ಟ್ರೀಯ ಹಬ್ಬದ ರೀತಿಯಲ್ಲಿ ಧ್ವಜಾರೋಹಣ ಮಾಡಲಾಗುತ್ತದೆ ಅದರಂತೆ ಇಂದು ಮುದಗಲ್‌ನ ಪುರಸಭೆ
ಮತಗಟ್ಟೆಗ ವತಿಯಿಂದ ರಾಷ್ಟ್ರೀಯ ಹಬ್ಬದ ರೀತಿಯಲ್ಲಿ ಧ್ವಜಾರೋಹಣ ಮಾಡ ಲಾಯಿತು .
ಧ್ವಜಾರೋಹಣ ಚಾಲನೆ ನೀಡಿದ ಪುರಸಭೆ ಮುಖ್ಯಾಧಿಕಾರಿ ಪರುಶುರಾಮ ನಾಯಕ್ ಅವರು ಚಾಲನೆ ನೀಡಿದರು. ನಂತರ ಮುದಗಲ್ಲ ಪ್ರತಿಯೊಂದು ವಾಡ್೯ಗಳಲ್ಲಿ
ನಮ್ಮ ನಡೆ ಮತಗಟ್ಟೆಯ ಕಡೆ ಜಾಗೃತಿ ಕಾಯ೯ಕ್ರಮ ನಡೆಯಿತು
ಮತದಾನದಲ್ಲಿ ಭಾಗವಹಿಸು ವುದು ಎಲ್ಲ ಮತದಾರರ ಸಾಮಾಜಿಕ ಹೊಣೆಗಾರಿಕೆ. ಪ್ರತಿ ಮತದಾರನು ತನ್ನ ಮತದ ಮೌಲ್ಯವನ್ನು ಅರಿತು ಪ್ರಜಾಪ್ರಭುತ್ವದ ಈ ಪವಿತ್ರ ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಸದೃಢ ಹಾಗೂ ಬಲಿಷ್ಠ ದೇಶ ಕಟ್ಟುವಂತಾಗಲಿ ಎಂಬುದೇ ಚುನಾವಣ ಆಯೋಗದ ಆಶಯ.
ಅದಕ್ಕೆ ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮ ವನ್ನು ಮುದಗಲ್ಲ ಪುರಸಭೆ ಇಂದ ಮುದಗಲ್ಲ ಎಲ್ಲ ವಾಡ೯ಗಳಲ್ಲಿ ಮತದಾನ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.
ಈ ಸಂದರ್ಭದಲ್ಲಿ ಮುದಗಲ್ ಪುರಸಭೆಯ ವತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ನಾಯಕ್ ಸೇರಿ ಸಿಬ್ಬಂದಿಗಳು, ಪೌರ ಕಾರ್ಮಿಕರು, ವಿಕಲಚೇತನರು, ಮಹಿಳಾ ಸ್ವ ಸಹಾಯ ಗುಂಪಿನ ಸದಸ್ಯರು ಹಾಗೂ ಶಿಕ್ಷಕರು ಭಾಗವಹಿಸಿದ್ದರು.