ನಮ್ಮ ನಡೆ ಮಕ್ಕಳ ಮನೆ ಕಡೆ

ಅಫಜಲಪುರ:ನ.16:ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಶಾಲಾ ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ಗ್ರಾಪಂ ಕಾರ್ಯಲಯ ಹಾಗೂ ಸರಕಾರಿ ಪ್ರೌಢಶಾಲೆ ಸಹಯೋಗದಲ್ಲಿ ಶಾಲಾ ಮಕ್ಕಳ ಹಾಜರಾತಿ ಆಂದೋಲನವನ್ನು ಮಾಜಿ ಗ್ರಾಪಂ ಅಧ್ಯಕ್ಷ ರಮೇಶ ಬಾಕೆ ಹಾಗೂ ಎ???ಡಿಎಂಸಿ ಅಧ್ಯಕ್ಷ ವಿಠ್ಠಲ್ ಅಲ್ಲಾಪುರ ಅವರು ಆಂದೋಲನ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾಜಿ ಗ್ರಾಪಂ ಅಧ್ಯಕ್ಷ ರಮೇಶ ಬಾಕೆ ಮಾತನಾಡಿ ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲು ಪಾಲಕರು ತಮ್ಮ ಮಕ್ಕಳನ್ನು ದಿನನಿತ್ಯ ಶಾಲೆಗೆ ಕಳುಹಿಸಬೇಕು ಅಂದಾಗ ಮಾತ್ರ ಎಲ್ಲರಿಗೂ ಶಿಕ್ಷಣ ದೊರಕಲು ಸಾಧ್ಯ ಆ ನಿಟ್ಟಿನಲ್ಲಿ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳ ಭವಿಷ್ಯ ರೂಪಿಸಬೇಕು ಎಂದರು.
ಶಾಲಾ ಮಕ್ಕಳೊಂದಿಗೆ ಗ್ರಾಮಸ್ಥರು ಹಾಗೂ ಶಿಕ್ಷಕರು, ಗ್ರಾಪಂ ಸದಸ್ಯರು ಸೇರಿ ಹಾಜರಾತಿ ಹೆಚ್ಚಳಕ್ಕೆ ಗ್ರಾಮದ ಪ್ರಮುಖ ಬೀದಿಗಳ ಮುಖಾಂತರ ಆದೋಲನ ನಡೆಸಿದರು.ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ರೇಷ್ಮಾ ಮಾಂಗ, ಉಪಾಧ್ಯಕ್ಷ ಬಿ ರಾಜು ಬೆನಕನಹಳ್ಳಿ ಸದಸ್ಯರಾದ ಬಸವರಾಜ ವಾಯಿ, ಗುರಪ್ಪ ಬಿಜಾಪುರ, ಹಣಮಂತ ನಾವಾಡಿ, ದೇವಪ್ಪ ಲಾಳಸಂಗಿ, ಲಾಡ್ಲೇಮಶಾಕ ಗೌರ, ರಿಯಾಜ ಮುಖಂಡರಾದ ಅಪ್ಪಾಸಾಬ ಹೊಸೂರಕರ್ ಚಂದು ಹಿರೇಕುರಬರ, ಮಲಕಣ್ಣ ಹೊಸೂರಕರ್, ಬಸವರಾಜ ಜನ್ನಾ, ಸುಭಾಷ ಚಿಕ್ಕಮಣೂರ, ಶರಣಪ್ಪ ನಾವದಗಿ, ಮಹಾದೇವ ಪ್ಯಾಟಿ, ಶಿವಾನಂದ ಕಲಶೆಟ್ಟಿ, ಕಾಶಿನಾಥ ಯಾದವಾಡ, ಪುಂಡಲಿಕ ಕಟ್ಟಿ, ಶಾವರಸಿದ್ದ ಜಮಾದಾರ, ಹುಸೇನಭಾಷಾ ಬಡಘರ, ಸಿದ್ದಾರಾಮ ಬದನಿಕಾಯಿ, ನಂದೇಶ ಪ್ಯಾಟಿ ಮುಖ್ಯಗುರು ಸುರೇಶ ಕೋರಚಗಾಂವ ಶಿಕ್ಷಕರಾದ ಗೈಬುಸಾಬ ಆಳಂದ, ಶ್ರೀಶೈಲ್ ಸನದಿ, ಮಲ್ಲಪ್ಪ ಚಲವಾದಿ, ಚನ್ನಣಗೌಡ ಮಾಲಿಪಾಟೀಲ, ಅಲ್ಲಾಬಕ್ಷ ಚೌಧರಿ, ವಿಜಯಲಕ್ಷ್ಮೀ ಭಾವಿ, ನಾಗಣ್ಣ ಡಾಂಗೆ,ಪಿಡಿಒ ಭೋರಮ್ಮ ಕುಂಬಾರ ಹಾಗೂ ಎ???ಡಿಎಂಸಿ ಸದಸ್ಯರು, ಗ್ರಾಮದ ಮುಖಂಡರು ಮತ್ತು ವಿದ್ಯಾರ್ಥಿಗಳಿದ್ದರು.