ನಮ್ಮ ನಡೆ ಮಕ್ಕಳ ಭಿಕ್ಷಾಟನಾ ನಿರ್ಮೂಲನಾ ಕಡೆ ಆಂದೋಲನಕ್ಕೆ ಚಾಲನೆ

I a s. Nagalambika. Halusur gate a c p. Najma farooki. Ingration at townhall

ಬೆಂಗಳೂರು,ನ.೧೨- ನಗರದ ಜೆಸಿ ರಸ್ತೆ ಪುರಭವನದ ಬಳಿ ’ನಮ್ಮ ನಡೆ ಮಕ್ಕಳ ಭಿಕ್ಷಾಟನಾ ನಿರ್ಮೂಲನಾ ಕಡೆ’ ಎಂಬ ಬೃಹತ್ ಆಂದೋಲನಕ್ಕೆ ಚಾಲನೆ ನೀಡಲಾಯಿತು ಆಂದೋಲನವನ್ನು ಹಿರಿಯ ಐಎಎಸ್ ಅಧಿಕಾರಿ ಡಾ. ನಾಗಲಾಂಬಿಕೆ ದೇವಿ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಭಿಕ್ಷಾಟನೆ ಸಮಾಜಕ್ಕೆ ಅಂಟಿದ ಪಿಡುಗಾಗಿದ್ದು, ಇದರ ನಿರ್ಮೂಲನೆಗೆ ಸರ್ಕಾರದ ಜತೆ ಸಾರ್ವಜನಿಕರು ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಮಕ್ಕಳ ಭಿಕ್ಷಾಟನೆಯನ್ನು ತಡೆದು ಶಾಲೆಗಳತ್ತ ಕಳುಹಿಸಲು ಸರ್ಕಾರ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದ್ದು ಅದರ ಸಮರ್ಪಕ ಜಾರಿಗೆ ಸಾರ್ವಜನಿಕರು ಕೈಜೋಡಿಸುವುದು ಮುಖ್ಯ ಎಂದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಸರ್ಕಾರ ವಿವಿಧ ಇಲಾಖೆಗಳ ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಆಂದೋಲನ ನಡೆಯಿತು. ಎಸಿಪಿ ನಗ್ಮಾ ಫಾರುಕಿ ಅವರಿದ್ದರು.