ನಮ್ಮ ನಡೆ-ಬೂತ್ ಕಡೆಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ ಅವರಿಂದ ಸ್ವೀಪ್ ಧ್ಚಜಾರೋಹಣ

ಕಲಬುರಗಿ,ಏ.30-ನಮ್ಮ ನಡೆ-ಮತಗಟ್ಟೆ ಕಡೆ ಸ್ವೀಪ್ ಜಾಗೃತಿ ವಿಶೇಷ ಅಭಿಯಾನ ಅಂಗವಾಗಿ ನಗರದ ಎನ್.ವಿ. ಶಾಲೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ನತ್ತು ಸ್ವೀಪ್ ನೋಡಲ್ ಅಧಿಕಾರಿ ಡಾ.ಗಿರೀಶ್ ಡಿ. ಬದೋಲೆ ಅವರು ಸ್ವೀಪ್ ಜಾಗೃತಿ ಧ್ವಜಾರೋಹಣ ಮಾಡಿದರು.
ಈ ಸಂದರ್ಭದಲ್ಲಿ ನೆರದ ಅಧಿಕಾರಿ-ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಮತದಾನ ಪಾವಿತ್ರ್ಯತೆ ಮತ್ತು ಮತದಾನದ ಬಗ್ಗೆ ಪ್ರತಿಜ್ಞೆ ವಿಧಿ ಬೋಧಿಸಿದರು.
ಕಲಬುರಗಿ ದಕ್ಷಿಣ ಬಿ.ಇ.ಓ ಶಂಕ್ರೆಮ್ಮ ಡವಳಗಿ ಸೇರಿದಂತೆ ಇನ್ನಿತರ ಅಧಿಕಾರಿ ಸಿಬ್ಬಂದಿಗಳು, ಬಿ.ಎಲ್.ಓ. ಗಳು ಉಪಸ್ಥಿತರಿದ್ದರು.