ನಮ್ಮ ನಡೆ ಪ್ಲಾಸ್ಟಿಕ್ ಮುಕ್ತ ನಗರದೆಡೆಗೆ: ಮಕ್ಕಳಿಂದ ಜನ ಜಾಗೃತಿ ಜಾಥಾ

ಮೈಸೂರು: ಸೆ.18:- ಇಂದು ವಿದ್ಯಾರಣ್ಯಪುರಂ ಹಾಗೂ ಚಾಮುಂಡಿಪುರಂ ಸುತ್ತಮುತ್ತ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಹಾಗು ವಿದ್ಯಾರಣ್ಯ ಕೋಚಿಂಗ್ ಸೆಂಟರ್ ವತಿಯಿಂದ ವಿದ್ಯಾರಣ್ಯಪುರಂ ಚಾಮುಂಡಿಪುರಂ ಸುತ್ತಮುತ್ತ ಪ್ಲಾಸ್ಟಿಕ್ ಮುಕ್ತ ಜಾಗೃತಿ ಜಾಥಾ ಹಮ್ಮಿಕೊಂಡಿದ್ದ.
ಜಾಥಾದಲ್ಲಿ ಮಕ್ಕಳು ಜಾಗೃತಿ ಉಳ್ಳ ಕರಪತ್ರವನ್ನು ಹಿಡಿದು ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಸಂರಕ್ಷಿಸಿ ,ಪ್ಲಾಸ್ಟಿಕ್ ಮುಕ್ತ ಪರಿಸರ ನಮ್ಮ ಹೊಣೆ ಎಂದು ಮಕ್ಕಳು ಘೋಷಣೆ ಕೂಗುತ್ತಾ ಮಕ್ಕಳು ಮನೆ ಮನೆಗೆ ತೆರಳಿ ಅಂಕಲ್ ಮತ್ತು ಆಂಟಿ ದಯಮಾಡಿ ಬಟ್ಟೆ ಬ್ಯಾಗ್ ಬಳಸಿ ಎಂದು ಬಟ್ಟೆ ಬ್ಯಾಗ್ ಹಾಗೂ ಜಾಗೃತಿಯ ಕರ ಪತ್ರ ವಿತರಿಸಿ ವಿಶೇಷವಾಗಿ ಮನವಿ ಮಾಡಿಕೊಂಡರು.
ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಸಿ ನಾರಾಯಣಗೌಡ ಮನೆಯಿಂದಲೇ ಆರಂಭವಾಗಲಿ: ಪ್ರತಿಯೊಬ್ಬರ ಮನೆಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಲು ಪಣತೊಡಬೇಕಾಗಿದೆ. ಅಡುಗೆ ಮನೆಯ ಸಾಮಾಗ್ರಿಗಳು ಪ್ಲಾಸ್ಟಿಕ್‍ಮಯವಾಗುವುದನ್ನು ನಿಲ್ಲಿಸಬೇಕು. ಮಾರುಕಟ್ಟೆಗೆ ತೆರಳಿದಾಗ ಪ್ಲಾಸ್ಟಿಕ್ ಕವರ್‍ಗಳನ್ನು ನೆಚ್ಚಿಕೊಂಡಿರಬಾರದು. ಪ್ಲಾಸ್ಟಿಕ್ ಬದಲಾಗಿ ಪರಿಸರಸ್ನೇಹಿ ಬ್ಯಾಗ್‍ಗಳನ್ನು ಅನುಸರಿಸಿದರೆ ಪರಿಸರ ಸಂರಕ್ಷ ಣೆ ಹಾಗೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ನಂತರ ಮಾತನಾಡಿದ ನಗರ ಪಾಲಿಕಾ ಸದಸ್ಯರಾದ ಮಾ ವಿ ರಾಮಪ್ರಸಾದ್ ಪರಿಸರ ಸಂರಕ್ಷ ಣೆ ಮೂಲ ಕರ್ತವ್ಯವಾಗಬೇಕು. ನಮ್ಮ ಹಿಂದಿನ ಪೀಳಿಗೆ ಕೊಟ್ಟ ಪರಿಸರವನ್ನು ಕಾಪಾಡಿ ಶುದ್ಧವಾಗಿ ಮುಂದಿನ ಪೀಳಿಗೆಗೆ ನೀಡಬೇಕು. ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ಎಲ್ಲರೂ ತಮ್ಮ ಮನೆಗಳ ಮುಂದೆ ಸಸಿ ನೆಡುವ ಮೂಲಕ ಪರಿಸರ ಕಾಳಜಿ ತೋರಬೇಕು. ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ತಡೆಗಟ್ಟಬೇಕು ಎಂದು ತಿಳಿಸಿದರು.
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ರವಿಶಂಕರ್ ಮಾತನಾಡಿ ಪಶುಗಳ ಪ್ರಾಣಕ್ಕೂ ಅಪಾಯ ಎಲ್ಲೆಂದರಲ್ಲಿ ಬಿಸಾಡುವ ಆಹಾರಯುಕ್ತ ಪ್ಲಾಸ್ಟಿಕ್ ವಸ್ತುಗಳನ್ನು ಪಶುಗಳು ಭಕ್ಷಿಸುತ್ತವೆ. ಅವುಗಳ ಹೊಟ್ಟೆ ಸೇರಿದ ಪ್ಲಾಸ್ಟಿಕ್ ಪಶುಗಳ ಪ್ರಾಣವನ್ನು ಬಲಿತೆಗೆದುಕೊಳ್ಳುತ್ತವೆ. ಹೀಗಾಗಿ ಮುನ್ನಚ್ಚೆರಿಕೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ಜಾಗೃತರಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣ ಗೌಡ, ನಗರ ಪಾಲಿಕಾ ಸದಸ್ಯರಾದ ಮಾ.ವಿ ರಾಮಪ್ರಸಾದ್, ಹಿರಿಯ ಪತ್ರಕರ್ತರಾದ ಅನಿಲ್ ಕುಮಾರ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ಅಧ್ಯಕ್ಷರಾದ ರವಿಶಂಕರ್, ಸಂಘಟನಾ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಾಮಾಜಿಕ ಹೋರಾಟಗಾರ ಅಜಯ್ ಶಾಸ್ತ್ರಿ, ಮೈಸೂರು ರಕ್ಷಣಾ ವೇದಿಕೆಯ ಕಾರ್ಯದರ್ಶಿ ರಾಕೇಶ್ ಭಟ್, ಅಪೂರ್ವ ಸುರೇಶ್, ಆನಂದ್, ಶಿಕ್ಷಕರಾದ ಚಂದ್ರಶೇಖರ್, ಮಲ್ಲಿಕಾರ್ಜುನ, ರಾಕೇಶ್, ಮಂಜುನಾಥ್, ಸತೀಶ್, ಮಂಜುನಾಥ ಹಾಗೂ 250ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ಜಾಥಾದಲ್ಲಿ ಪಾಲ್ಗೊಂಡಿದ್ದರು.