ಸಂಜೆವಾಣಿ ವಾರ್ತೆ
ಹೊಸಪೇಟೆ, ಏ.03: ನಮ್ಮ ನಡೆ – ನುಡಿ ನಮ್ಮ ಬದುಕನ್ನು ರೂಪಿಸುತ್ತದೆ. ಈ ಹಿನ್ನೆಲೆಯಲ್ಲಿ ನಾವು ಸದಾ ಎಲ್ಲಾ ರೀತಿಯ ಎಚ್ಚರಿಕೆಯಿಂದ ಹೆಜ್ಜೆ ಇರಿಸಬೇಕು ಎಂದು ಶಾರಾದಾಶ್ರಮದ ಅಧ್ಯಕ್ಷರಾದ ಮಾತಾ ಪ್ರಬೋಧಮಯಿ ಅವರು ಹೇಳಿದರು.
ನಗರದ ಮಹಿಳಾ ಸಮಾಜ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿಕಾಸ ಭಾರತಿ ಸಮಾನ ಮನಸ್ಕರ ವೇದಿಕೆ ಸೋಮವಾರ ಆಯೋಜಿಸಿದ್ದ “ಸಂಸ್ಕಾರ ಶಿಬಿರ” ಉದ್ಟಾಟಿಸಿ ಮಾತನಾಡಿದರು.
ಜೀವನದಲ್ಲಿ ಎಲ್ಲರೂ ಯಶಸ್ಸು ಬಯಸುತ್ತಾರೆ ಆದರೆ, ಅದಕ್ಕೆ ಅಗತ್ಯವಾದ ಸಿದ್ಧತೆ ಹಾಗೂ ಇಚ್ಛಾಶಕ್ತಿಯನ್ನು ಹೊಂದದಿರುವುದು ವಿಫಲಕ್ಕೆ ಕಾರಣವಾಗುತ್ತಿವೆ. ಮನುಷ್ಯರಾದ ನಮಗೆ ಬಹು ದೊಡ್ಡ ಜವಾಬ್ದಾರಿ ಇದನ್ನು ಎಲ್ಲೂ ಲೋಪವಾಗದಂತೆ ನಿಭಾಯಿಸಬೇಕು. ಸಮಾಜದಲ್ಲಿರುವ ಪ್ರತಿಯೊಬ್ಬರೂ ಸಮಾಜಕ್ಕೆ ಒಂದು ಕೊಡುಗೆಯಾಗಬೇಕು ಎಂದರು.
ವಿಕಾಸ ಭಾರತಿ ಸಮಾನ ಮನಸ್ಕರ ವೇದಿಕೆಯ ಪ್ರಧಾನ ಕಾರ್ಯದರ್ಶಿ ರಮೇಶ ದೇಶಪಾಂಡೆ ಮಾತನಾಡಿ, ಸಮಯ ಅತ್ಯಮೂಲ್ಯ. ಇದರ ಸದುಪಯೋಗ ತಿಳಿದವರು ಮಾತ್ರ ಯಶಸ್ವಿ ಜೀವನ ನಡೆಸಲು ಸಾಧ್ಯ ಎಂದರು.
ಮಹಿಳಾ ಸಮಾಜ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮುಖ್ಯಶಿಕ್ಷಕಿ ರಮಾ ಮಾತನಾಡಿ, ಆರು ದಿನಗಳ ಕಾಲ ಆಯೋಜಿಸಿರುವ ಈ ಶಿಬಿರ ವಿದ್ಯಾರ್ಥಿಗಳಿಗೆ ಅತ್ಯುಪಯುಕ್ತವಾಗಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪತಂಜಲಿ ಯೋಗ ಶಿಬಿರದ ರಾಜ್ಯ ಪ್ರಭಾರಿ ಕಿರಣಕುಮಾರ ಮಕ್ಕಳಿಗೆ ಯೋಗಾಭ್ಯಾಸ ಮಾಡಿಸಿದರು,
ಕುಮಾರಿ ಸಂಜನಾ ಹಾಗೂ ಐಶ್ವರ್ಯ ಪಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಬಿಷ್ಟೇಶ್ ಭಟ್ ಸ್ವಾಗತಿಸಿದರು ಅನಂತಜೋಶಿ ನಿರೂಪಿಸಿದರು. ಬದಲಾಗುತ್ತಿರುವ ಭಾರತ ಹಾಗೂ ಕುರಿತು ಮೊದಲ ದಿನದ ತರಬೇತಿ ನೀಡಲಾಯತು.