ನಮ್ಮ ನಡಿಗೆ ಸಮಾಜದೆಡೆಗೆ

ಕಲಬುರಗಿ:ಜು.10:ಸಮಾನ ಮನಸ್ಕರ ವೇದಿಕೆ ಮತ್ತು ಸಾಯಿ ಪ್ರತಾಪ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ಕಡಗಂಚಿ ಇವರ ಸಹಯೋಗದಲ್ಲಿ ವಿ ದಿ ಪೀಪಲ್ ಆಫ್ ಇಂಡಿಯಾ, ತತ್ವದಡಿಯಲ್ಲಿ ಪೇ ಬ್ಯಾಕ್ ಟು ಸೊಸೈಟಿ ಎಂಬ ಉದ್ದೇಶದಿಂದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಗರಿಷ್ಟ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ಮೂಲಕ ವಿದ್ಯಾರ್ಥಿಗಳಿಗೆ ಇದಲು ಮತ್ತು ಬರೆಯುವ ನೋಟ್ ಪುಸ್ತಕ ಮತ್ತು ಪೆನ್ನು ಜೊತೆಗೆ ರಂಜಾನ್ ದರ್ಗಾರವರ ಕೃತಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ.ಶಾಂತಪ್ಪ ಸೂರನ್, ಪ್ರಧಾನ ಕಾರ್ಯದರ್ಶಿಗಳು, ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿ, ಕಲಬುರಗಿರವರು ಬಸವಣ್ಣನ ನಾಡಿನಲ್ಲಿ ಶಿಕ್ಷಣದ ಮಹತ್ವ ಮತ್ತು ಪೋಷಕರ ಪರಿಶ್ರಮ, ಮತ್ತು ಹೊಣೆಗಾರಿಕೆಯನ್ನು ತಿಳಿಸುತ್ತಾ ತಮ್ಮ ವಿದ್ಯಾರ್ಥಿ ಅನುಭವದ ಕಥನವನ್ನು ತೆರೆದಿಟ್ಟರು. ಸಮಾರಾಂಭದಲ್ಲಿ ಎಲ್ಲರನ್ನೂ ಒಳಗೊಳ್ಳುವ ಆಲೋಚನೆಯನ್ನು ಸಹ ವ್ಯಕ್ತಪಡಿಸುತ್ತ ವೇದಿಕೆಯು ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಸುತ್ತಮುತ್ತಲಿನ ಗ್ರಾಮಗಳಲ್ಲಿ ರೂಪಿಸಬೇಕೆಂದು ಆಶಿಸಿದರು.

ಡಾ.ಮಂಜುಳಾಕ್ಷಿ, ಸಹಾಯಕ ಪ್ರಾಧ್ಯಾಪಕರು ಮಾತನಾಡುತ್ತಾ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಸುಶಿಕ್ಷಿತರಾದಷ್ಟು ಕುಟುಂಬ ನಿರ್ವಹಣೆ ಮತ್ತು ಜವಾಬ್ದಾರಿ ನಿರ್ವಹಿಸಲು ಸಹಕಾರಿಯಾಗುತ್ತದೆ. ಇಂದಿನ ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳೇ ಹೆಚ್ಚಿನ ಪ್ರತಿಭೆಯನ್ನು ತೋರುತ್ತಿರುವುದು ಸಂತೋಷ ಮತ್ತು ಸಮಾನಾಧಕರ ವಿಷಯವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಹೆಣ್ಣು ಮಕ್ಕಳು ಸಾಧನೆಗೈಯ್ಯುತ್ತಿರುವುದು ಮಹಿಳಾ ಸಬಲೀಕರಣದ ಮುನ್ನುಡಿಯಾಗಿದೆ ಎಂದರು.

ಮತೊರ್ವ ಭೂಗೋಳಶಾಸ್ತ್ರದ ಸಹಾಯಕ ಪ್ರಾದ್ಯಾಪಕರಾದ ಡಾ.ಸಂಜಿತ್ ಸರ್ಕಾರ್‍ರವರು ಶ್ರದ್ಧೆ ಮತ್ತು ಕಠಿಣ ಪರಿಶ್ರಮದ ಮೂಲಕ ಹೆಚ್ಚು ಜ್ಞಾನ ಸಂಪಾದಿಸಬಹುದೆಂದು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು. ವಿದ್ಯಾರ್ಥಿಯಾಗಿದ್ದಾಗ ಕನಸು, ಮಾನವೀಯತೆ ಅಂಶಗಳನ್ನು ಪರಿಗಣಿಸಬೇಕು ಏಕೆಂದರೆ ದೊಡ್ಡಕನಸ್ಸನ್ನು ಕಾಣುವ ಮೂಲಕ ನಮ್ಮ ಗುರಿಯನ್ನು ಸಾಧಿಸಲು ಸಹಕಾರಿಯಾಗುತ್ತದೆ ಜೊತೆಗೆ ಮಾನವೀಯತೆಯು ನಮ್ಮ ಬದುಕಿಗೆ ಬಹುದೊಡ್ಡ ಬುನಾದಿಯನ್ನು ಹಾಕಿವ ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸುತ್ತದೆ.

ಡಾ.ಕುಮಾರ ಮಂಗಳಂ ಸಹಾಯಕ ಪ್ರಾದ್ಯಾಪಕರು, ಶಿಕ್ಷಕರು ಸಮಾಜದ ಬೆಳವಣಿಗೆಗೆ ಹಾಗೂ ವಿದ್ಯಾಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸುತ್ತದೆ ಎಂದರು. ಇಂದು ಇಲ್ಲಿ ಪ್ರತಿಭಾ ಪುರಸ್ಕಾರ ಸ್ವೀಕರಿಸುತ್ತಿರುವವರೆಲ್ಲರೂ ಮುಂದೊಂದು ದಿನ ನಮ್ಮ ವಿ.ವಿ.ಯಲ್ಲಿ ಉತ್ತಮ ಪದವಿಗಳನ್ನು ಸ್ವೀಕರಿಸಬೇಕೆಂದು ಕಿವಿಮಾತು ಹೇಳಿದರು.

ಡಾ.ಅಪ್ಪಗೆರೆ ಸೋಮಶೇಖರ್‍ರವರು ಮಾತನಾಡಿ ಇಂದು ಸಮಾಜದ ಋಣಸಂಧಾಯ ಮಾಡುವ ಜವಾಬ್ದಾರಿ ವಿದ್ಯಾವಂತ ನೌಕರರ ಮೂಲ ಉದ್ದೇಶವಾಗಬೇಕು ಸಮಾಜದ ಕಟ್ಟಕಡೆಯ ವ್ಯಕ್ತಿಯ ತೆರಿಗೆ ಹಣದಿಂದ ಬದುಕುವ ನಾವು ಸಮುದಾಯಗಳಿಗೆ ಮರಳಿ ಏನನ್ನಾದರು ನಮ್ಮ ಇತಿಮಿತಿಯೊಳಗೆ ಕೊಡಬೇಕು ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಭಾರತದ ಜನತೆಯಾದ ನಾವು ನಮ್ಮೆಲ್ಲರ ಕರ್ತವ್ಯವನ್ನು ಒಂದು ಸಣ್ಣ ಕಥೆಯನ್ನು ವಿವರಿಸುವ ಮೂಲಕ ಪೇ ಬ್ಯಾಕ್ ಟು ಸೊಸೈಟಿಯ ಮಹತ್ವವನ್ನು ಸರಳವಾಗಿ ತಿಳಿಸಿದರು. ಇಂದಿನ ವಿದ್ಯಾರ್ಥಿಗಳು ಮತ್ತು ಯುವಕರಿಗೆ ವಿಫುಲ ಅವಕಾಶಗಳನ್ನು ಸಮುದಾಯದ ಮಕ್ಕಳಿಗೆ ಅನೇಕ ಸಮಾಜ ಸುಧಾರಕರು ಮತ್ತವರ ತ್ಯಾಗ ಬಲಿದಾನಗಳನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ಭರವಸೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಶ್ರೀಮತಿ.ಇಂದೂಬಾಯ್ ದತ್ತಾತ್ರೆಯ ಮಾದಗೊಂಡ ಭಾಗವಹಿಸಿದ್ದರು ಅಧ್ಯಕ್ಷತೆಯನ್ನು ಕಾಲೇಜಿನ ಅದ್ಯಕ್ಷರಾದ ಡಾ.ಸುನೀಲ್‍ಕುಮಾರ್ ಕಾಂಬ್ಳೆ ವಹಿಸಿದ್ದರು. ಡಾ.ಮಣಗಳ್ಳಿ ಡಿ.ಶ್ರೀನಿವಾಸ, ಸಹಾಯಕ ಪ್ರಾಧ್ಯಾಪಕರು ವೇದಿಕೆಯ ಉದ್ದೇಶ, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದರ ಜೊತೆಗೆ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ಕಾರ್ಯಚಟುವಟಿಕೆಗಳನ್ನು ತಿಳಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಸುಮಾರು ಮೂವತ್ತಕ್ಕೂ ಹೆಚ್ಚು ಮಕ್ಕಳು ಪ್ರತಿಭಾ ಪುರಸ್ಕಾರವನ್ನು ಸ್ವೀಕರಿಸಿದರು. ಡಾ.ಶಿವಾನಂದ ಕಡಗಂಚಿ ಅತಿಥಿಗಳನ್ನು ಸ್ವಾಗತಿಸಿದರು. ಡಾ.ರಾಜಶೇಖರನ್, ಡಾ.ಶಿವಮೂರ್ತಿ, ಡಾ.ವಿದ್ಯಾಸಾಗರ್ ಮತ್ತು ಶ್ರೀ.ಶರಣಬಸಪ್ಪ ಉಪಸ್ಥಿತರಿದ್ದರು.