
ಗುಳೇದಗುಡ್ಡ,ಮಾ.14: ಸಮಾಜದಲ್ಲಿ ಜಂಗಮ ಸಮಾಜಕ್ಕೆ ಅತ್ಯನ್ನತ ಸ್ಥಾನ ಇದೆ. ಆ ಸ್ಥಾನಕ್ಕೆ ತಕ್ಕಂತೆ ನಾವು ನಮ್ಮ ಸಂಪ್ರದಾಯ, ಸಂಸ್ಕøತಿಯನ್ನು ಕಾಪಾಡಿಕೊಂಡು, ಬೆಳಸಿಕೊಂಡು ಬರುವುದು ನಮ್ಮ ಜವಾಬ್ದಾರಿಯಾಗಿದೆ. ನಮ್ಮ ಹಿರಿಯರು ಹಾಕಿಕೊಟ್ಟ ಸಂಪ್ರದಾಯವನ್ನು ಉಳಿಸಿಕೊಂಡರೆ ಮಾತ್ರ ನಮ್ಮ ಸಮಾಜ, ನಮ್ಮ ಧರ್ಮವನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಕುಮಾರೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಂ.ಬಿ. ಹಂಗರಗಿ ಹೇಳಿದರು.
ನಗರದ ಮುರುಘಾಮಠದ ಕುಮಾರೇಶ್ವರ ಕಲ್ಯಾಣಮಂಪಟದಲ್ಲಿ ಗುಳೇದಗುಡ್ಡ ತಾಲೂಕು ವೀರಶೈವ ಜಂಗಮ ಕ್ಷೇಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ.ಜ. ರೇಣುಕಾಚಾರ್ಯರು, ಶ್ರೀ ಬಸವೇಶ್ವರರು ಹಾಗೂ ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ತಾಲೂಕು ಮಟ್ಟದ ಜಯಂತ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ವೀರಶೈವ ಹಾಗೂ ಲಿಂಗಾಯತ ಒಟ್ಟುಗೂಡಿದರೆ ರೇಣುಕಾಚಾರ್ಯ ಜಯಂತಿಗೆ ಹೆಚ್ಚಿನ ಮಹತ್ವ ಬರುತ್ತದೆ ಎಂದರು.
ಸಾನಿಧ್ಯವಹಿಸಿದ್ದ ಮರುಘಾಮಠದ ಶ್ರೀ ಕಾಶೀನಾಥ ಸ್ವಾಮಿಗಳು ಮಾತನಾಡಿ, ನಾವು ಎಷ್ಟೇ ಪದವಿ ಪಡೆದರೂ ನಮ್ಮ ಧರ್ಮ, ಆಚಾರ, ವಿಚಾರಗಳನ್ನು ಮರೆಯಬಾರದು. ಮಾನವೀಯ ಮೌಲ್ಯಗಳಿಂದ ನಡೆಯಬೇಕು ಸಮಾಜದೊಂದಿಗೆ ಮನಸ್ಸುಗಳನ್ನು ಕಟ್ಟುವ ಕೆಲಸಮಾಡಬೇಕು. ದಾರ್ಶನಿಕರ ಜಯಂತ್ಯುತ್ಸವದ ಸಂದರ್ಭದಲ್ಲಿ ನಮ್ಮನ್ನು ನಾವು ಆತ್ಮವಾಲೋಕನ ಮಾಡಿಕೊಂಡು ಸಮಾಜದ ಒಳಿತಿಗಾಗಿ ಕೆಲಸಮಾಡಬೇಕು ಎಂದರು.
ಶಿವುಪುತ್ರಪ್ಪ ಹಟ್ಟಿಶಾಸ್ತ್ರಿಗಳು ಹಾಗೂ ಶರಣಯ್ಯ ಹಳ್ಳೂರು ಅವರು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಮರಡಿಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಶಿವಾನಂದ ಮಳಿಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಜಶೇಖರ ಶೀಲವಂತ, ಸಿಪಿಐ ಶರಣಯ್ಯ ವಸ್ತ್ರದ, ವಿಶ್ವನಾಥ ಹಿರೇಮಠ, ಬಸಯ್ಯ ಭಂಡಾರಿ, ಪ್ರಭುಸ್ವಾಮಿ ಸರಗಣಾಚಾರಿ, ಮಹಾಂತಯ್ಯ ಸರಗಣಾಚಾರಿ, ಉಮಾಶಂಕರ ಶಿವನಗೌಡರ, ಸಂಗಯ್ಯ ಗವಿಮಠ, ಶಿವಕುಮಾರ ಸಾವಳಗಿಮಠ, ಸಿದ್ದಯ್ಯ ರೇವಣಸಿದ್ದೇಶ್ವರಮಠ ಮತ್ತಿತರರು ಇದ್ದರು.
.