ನಮ್ಮ ದೃಷ್ಟಿ ವೋಟ್ ಬ್ಯಾಂಕ್ ಅಲ್ಲ;ಅಭಿವೃದ್ಧಿ ಅಭಿವೃದ್ಧಿ…: ಪ್ರಧಾನಮಂತ್ರಿ ನರೇಂದ್ರ ಮೋದಿ

ಕೊಡೆಕಲ್ (ಯಾದಗಿರಿ),ಜ.19:ಈ ಹಿಂದಿನ ಸರಕಾರಗಳ ಅವಧಿಯಲ್ಲಿ ಪ್ರತಿ ಯೋಜನೆ ಹಿಂದೆಯೂ ವೋಟ್ ಬ್ಯಾಂಕ್ ಲೆಕ್ಕಾಚಾರ ಇರುತ್ತಿತ್ತು. ಇದೀಗ ವಿಕಾಸದ ಆಕಾಂಕ್ಷೆಗೆ ಪೆÇ್ರೀತ್ಸಾಹ ನೀಡಲಾಗುತ್ತಿದ್ದು, ವೋಟ್ ಬ್ಯಾಂಕ್ ಸರ್ಕಾರವಾಗದೇ ಅಭಿವೃದ್ಧಿ ಅಭಿವೃದ್ಧಿ… ಸರ್ಕಾರವೆಂದಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದರು.
ಅವರು ಜ.19ರ(ಗುರುವಾರ) ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೊಡೆಕಲ್‍ನಲ್ಲಿ ನಾರಾಯಣಪುರ ಎಡದಂಡೆ ಕಾಲುವೆಯ ವಿಸ್ತರಣೆ, ನವೀಕರಣ ಯೋಜನೆ ಹಾಗೂ ವಿವಿಧ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಈ ಭಾಗದ ಬಗ್ಗೆ ಕಿಂಚಿತ್ತೂ ಯೋಚಿಸದ ಹಿಂದಿನ ಸರಕಾರಗಳಿಂದ ಈ ಪ್ರದೇಶದ ಬಗ್ಗೆ ಯೋಚಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಮೋದಿ ಅವರು ಒಂದು ಜಿಲ್ಲೆ ಅಥವಾ ಪ್ರದೇಶ ಹಿಂದುಳಿದರೇ ವಿಕಸಿತ ಭಾರತವಾಗಲು ಸಾಧ್ಯವಿಲ್ಲ;ಈ ನಿಟ್ಟಿನಲ್ಲಿ ಸಮಗ್ರ ಅಭಿವೃದ್ಧಿಗೆ ನಮ್ಮ ಸರಕಾರ ತೊಡಗಿಸಿಕೊಂಡಿದೆ ಎಂದರು.
ಮುಂದಿನ 25ವರ್ಷಗಳಲ್ಲಿವಿಕಸಿತ ಭಾರತ ನಿರ್ಮಾಣ: ಮುಂದಿನ 25 ವರ್ಷಗಳ ಕಾಲ ನಮಗೆ ಅಮೃತಕಾಲ;ಈ ಅವಧಿಯಲ್ಲಿ ಹೊಸ ಸಂಕಲ್ಪದೊಂದಿಗೆ ಮುನ್ನಡೆಯುವುದರ ಮೂಲಕ ವಿಕಸಿತ ಭಾರತ ನಿರ್ಮಾಣ ಮಾಡಲಾಗುವುದು ಎಂದರು.
ಯಾದಗಿರಿ ಜಿಲ್ಲೆಯಲ್ಲಿ ವಿಕಾಸದ ಆಕಾಂಕ್ಷೆ ಹೊಂದಿದ್ದೇವೆ ಎಂದು ತಮ್ಮ ಮಾತುಗಳಲ್ಲಿ ಸ್ಪಷ್ಟಪಡಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 100 ಮಹತ್ವಾಕಾಂಕ್ಷೆ ಜಿಲ್ಲೆಗಳ ಸುಧಾರಣೆಯ ಪಟ್ಟಿಯಲ್ಲಿ ಯಾದಗಿರಿ ಟಾಪ್ 10ರಲ್ಲಿದೆ; ಈ ಸಾಧನೆಗೆ ಕಾರಣೀಕರ್ತರಾದ ರಾಜ್ಯ ಸರ್ಕಾರ, ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದರು.
ದೇಶದ ನೂರು ಜಿಲ್ಲೆಗಳಲ್ಲಿ ಒಳ್ಳೆಯ ಆಡಳಿತ ಕೊಡಲಾಗುತ್ತಿದ್ದು, ಅಭಿವೃದ್ದಿ ಯೋಜನೆಗಳ ಮೂಲಕ ಜನರನ್ನ ಮುಟ್ಟುತ್ತಿದ್ದೇವೆ. ಸರ್ಕಾರ ಘೋಷಣೆಗಳನ್ನೆಲ್ಲಾ ಈಡೇರಿಸುತ್ತಿದೆ. ಭಾರತದ ಅಭಿವೃದ್ಧಿ ಹೊಂದಲು ಗಡಿ ಭಧ್ರತೆ, ಕರಾವಳಿ ಭದ್ರತೆ ಜತೆಗೆ ನೀರಿನ ಭದ್ರತೆಯೂ ಮುಖ್ಯ ಎಂದರು.
ಡಬಲ್ ಎಂಜಿನ್ ಸರಕಾರದ ಅಗತ್ಯತೆ ಬಗ್ಗೆ ಪದೇ ಪದೇ ತಮ್ಮ ಭಾಷಣಗಳಲ್ಲಿ ಪ್ರಸ್ತಾಪಿಸಿದ ಪಿಎಂ ಮೋದಿ ಅವರು ಡಬಲ್ ಇಂಜಿನ್ ಸರ್ಕಾರ ಜನರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಡಬಲ್ ಎಂಜಿನ್ ಸರಕಾರದಿಂದಾದ ಜಲಜೀವನ್ ಮಿಶನ್,ಪಿಎಂ ಕಿಸಾನ್,ಮುದ್ರಾ,ರೈತ ವಿದ್ಯಾನಿಧಿ ಸೇರಿದಂತೆ ವಿವಿಧ ಯೋಜನೆಗಳ ಪ್ರಯೋಜನಗಳ ಬಗ್ಗೆ ತಿಳಿಸಿದರು.
ಯಾದಗಿರಿಯಲ್ಲಿ ಹೊಸ ಯೋಜನೆಗೆ ಚಾಲನೆ ನೀಡಲಾಗುತ್ತಿದ್ದು, ನೀರು. ರಸ್ತೆಯ ಅತಿದೊಡ್ಡ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ.. ನಾರಾಯಣಪುರ ಎಡದಂಡೆ ಕಾಲುವೆ ಆಧುನೀಕರಣದಿಂದ ಯಾದಗಿರಿ. ಕಲಬುರಗಿ, ವಿಜಯಪುರದ ರೈತರಿಗೆ ನೇರ ಲಾಭ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಜನರಿಗೆ ಉಪಯೋಗವಾಗಲಿದೆ ಎಂದರು.
ಸೂರತ್- ಚೆನ್ನೈ ಎಕ್ಸ್ ಪ್ರೆಸ್ ವೇಗೆ ಅಡಿಗಲ್ಲು ಹಾಕುವ ಮೂಲಕ ರಸ್ತೆ ಅಭಿವೃದ್ದಿಪಡಿಸಲಾಗುತ್ತಿದ್ದು,ಇದರಿಂದ ಯಾದಗಿರಿ, ರಾಯಚೂರು ಜನರಿಗೆ ಉದ್ಯೋಗ ಸಿಗಲಿದೆ. ನೀರಾವರಿ ಆಧುನೀಕರಣದಿಂದ ಯಾದಗಿರಿ, ಕಲಬುರುಗಿ ಜನರಿಗೆ ಲಾಭ. ನೀರಾವರಿ ಯೋಜನೆಯಿಂದ ಲಕ್ಷ ಲಕ್ಷ ಜನರಿಗೆ ಲಾಭವಾಗಲಿದೆ. ಜಲಜೀವನ್ ಮಿಷನ್ ಯೋಜನೆಯಿಂದ ಲಕ್ಷಾಂತರ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಆಗುತ್ತದೆ ಎಂದರು.
ಯಾವುದೇ ಜಿಲ್ಲೆ ಅಭಿವೃದ್ಧಿಯಿಂದ ಹಿಂದೆ ಉಳಿದರೆ ದೇಶದ ವಿಕಾಸ ಸಾಧ್ಯವಿಲ್ಲ. ನಾವು ವಿಕಾಸದ ಆಕಾಂಕ್ಷೆಗೆ ಪೆÇ್ರೀತ್ಸಾಹ ನೀಡಿದ್ದೇವೆ ಯಾದಗಿರಿ ಜಿಲ್ಲೆಯಲ್ಲಿ ವಿಕಾಸದ ಆಕಾಂಕ್ಷೆ ಹೊಂದಿದ್ದೇವೆ. ವಿದ್ಯುತ್, ನೀರಾವರಿ, ರಸ್ತೆ, ಅಭಿವೃದ್ಧಿಗಳಿಗೆ ವೇಗ ಕೊಟ್ಟಿದೆ ಎಂದು ಅವರು ತಿಳಿಸಿದರು.
ಜಲಜೀವನ್ ಮಿಷನ್ ನಮ್ಮ ಕೆಲಸಕ್ಕೆ ಒಂದು ಉದಾಹರಣೆಯಾಗಿದ್ದು. ಈ ಹಿಂದೆ ದೇಶದ 3 ಕೋಟಿ ಕುಟುಂಬಗಳಿಗೆ ಮಾತ್ರ ನೀರು ಸಿಗುತ್ತಿತ್ತು. ಜಲಜೀವನ್ ಮಿಷನ್ ಯೋಜನೆಯಿಂದ 1.25 ಲಕ್ಷ ಮಕ್ಕಳ ಜೀವ ಉಳಿಸುತ್ತಿದ್ದೇವೆ. ಇದೇ ಡಬಲ್ ಎಂಜಿನ್ ಸರ್ಕಾರದ ಡಬಲ್ ಬೆನಿಫಿಟ್ ಆಗಿದೆ ಎಂದರು.
ಡಬಲ್ ಎಂಜಿನ್ ಸರ್ಕಾರದಿಂದ ಕರ್ನಾಟಕಕ್ಕೆ ಎಷ್ಟು ಲಾಭವಾಗಿದೆ ತಿಳಿದಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದ 6 ಸಾವಿರ, ರಾಜ್ಯ ಸರ್ಕಾರ 4 ಸಾವಿರ ಕೊಡ್ತಿದೆ. ಲಕ್ಷಾಂತರ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಂದ ಸಾವಿರಾರು ರೂಪಾಯಿ ಸಿಕ್ಕಿದೆ.
ರಾಜ್ಯ ಸರ್ಕಾರದ ವಿದ್ಯಾನಿಧಿ ಯೋಜನೆಯಿಂದ ಬಡ ಮಕ್ಕಳಿಗೆ ಶಿಕ್ಷಣ ಸಿಕ್ಕಿದೆ. ಕಲುಷಿತ ನೀರಿನಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಈಗ ಇಲ್ಲ. ಡಬಲ್ ಇಂಜಿನ್ ಸರ್ಕಾರದಿಂದ ಡಬಲ್ ಲಾಭಗಳು ಕನ್ನಡಿಗರಿಗೆ ಸಿಗ್ತಿವೆ ಎಂದರು.
ಬಡ ರೈತರಿಗೆ ಕೇಂದ್ರದಿಂದ ರೂ 6 ಸಾವಿರ ರಾಜ್ಯ ಸರ್ಕಾರ ರೂ 4 ಸಾವಿರ ಕೊಡ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ + ವಿದ್ಯಾನಿಧಿ ಯೋಜನೆಯನ್ನು ತಂದಿದೆ. ಮಹಾಮಾರಿ ವಿರುದ್ಧ – ರಾಜ್ಯ ಸರ್ಕಾರವೂ ನಮ್ಮ ಜೊತೆ ಕೈ ಜೋಡಿಸಿದೆ.
ಕೇಂದ್ರದ ಮುದ್ರಾ ಯೋಜನೆಗೆ ರಾಜ್ಯದಿಂದಲೂ ಆರ್ಥಿಕ ನೆರವು ಸಿಗ್ತಿದೆ. ಸ್ವಾತಂತ್ರ‍್ಯ ಬಂದ ಮೇಲೂ ಅನೇಕ ಅವಕಾಶ ವಂಚಿತರಿಗೆ ನೆರವು ನೀಡ್ತಿದ್ದೇವೆ ವಂಚಿತರನ್ನು ಗುರುತಿಸುತ್ತೇವೆ. ವಂಚಿತರನ್ನು ಗುರುತಿಸಿ ನೆರವಾಗುವುದೇ ಡಬಲ್ ಇಂಜಿನ್ ಸರ್ಕಾರದ ಮಂತ್ರ. ಎಂದು ತಿಳಿಸಿದರು.
ಕಣ್ಣು ಹಾಯಿಸಿದೆಡೆಯಲ್ಲೆಲ್ಲ ಜನವೋ ಜನ: ಪ್ರಧಾನಮಂತ್ರಿಗಳು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಕೋಡೆಕಲ್ ಹೊರವಲಯದ ಬಳಿ ಏರ್ಪಡಿಸಲಾಗಿರುವ ಕಾರ್ಯಕ್ರಮದ ಬಳಿ ಕಣ್ಣು ಹಾಯಿಸಿದೆಡೆಯಲ್ಲೆಲ್ಲ ಜನವೋ ಜನ…ಒಂದು ರೀತಿಯಲ್ಲಿ ಜನಸಾಗರ..
ಪ್ರಧಾನಮಂತ್ರಿಗಳು ಹೆಲಿಕಾಪ್ಟರ್ ನಿಂದ ಆಗಮಿಸುವ ವೇಳೆ ಮೇಲಿಂದಲೇ ನಾಲ್ಕು ದಿಕ್ಕುಗಳಿಂದ ಹರಿದುಬಂದು ನಿಂತಿದ್ದ ಜನಸಾಗರವನ್ನು ಕಣ್ತುಂಬಿಕೊಂಡು ದಿಲ್ ಖುμï ಆದ ಪಿಎಂ ಮೋದಿ ಅವರು ಇಳಿದ ನಂತರ ಜನರೆಡೆಗೆ ಕೈಬಿಸಿದರು.
ಇದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿ ನಾಲ್ಕು ದಿಕ್ಕುಗಳಿಂದ ಹರಿದುಬಂದು ನಿಂತಿರುವ ಜನಸಾಗರದ ಪ್ರೀತಿ, ಆಶೀರ್ವಾದವೇ ನಮಗೆ ತಾಕತ್ತು ಎಂದು ಹೇಳಿದರು.
ಆಶೀರ್ವಾದ ಮಾಡಲು ಬಂದ ಜನರಿಗೆ ನನ್ನ ನಮನಗಳು. ಯಾದಗಿರಿ ಸಮೃದ್ಧ ಇತಿಹಾಸವನ್ನು ಹೊಂದಿದೆ. ರಟ್ಟಿಹಳ್ಳಿಯ ಹಳೆಯ ಕೋಟೆ ನಮ್ಮ ಪೂರ್ವಜರ ಪ್ರತೀಕವಾಗಿದೆ. ಯಾದಗಿರಿ ಸಮೃದ್ಧ ಇತಿಹಾಸವನ್ನು ಹೊಂದಿದೆ ಪ್ರತಿ ಕ್ಷೇತ್ರವೂ ನಮ್ಮ ಸಂಸ್ಕøತಿ ಪರಂಪರೆಯೊಂದಿಗೆ ಹೊಂದಿಕೊಂಡಿದೆ. ತಮ್ಮ ಆಡಳಿತದ ಮೂಲಕ ವೆಂಕಟಪ್ಪ ನಾಯಕರು ಯಾದಗಿರಿಯನ್ನು ದೇಶಾದ್ಯಂತ ವಿಖ್ಯಾತಿಗೊಳಿಸಿದರು ಎಂದರು.
ಸುರಪುರ ಶಾಸಕ ರಾಜೂಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಸಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ರ್ಲೇಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಕೇಂದ್ರ ಸಚಿವ ಭಗವಂತ ಖೂಬಾ, ಪ್ರಮುಖ ಮತ್ತು ಮಧ್ಯಮ ನೀರಾವರಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಂಸದ ರಾಜಾ ಅಮರೇಶ್ವರ ನಾಯಕ, ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.