ನಮ್ಮ ಗ್ಯಾರೆಂಟಿ ಸುಳ್ಳಾದರೆ ನ್ಯಾಯಾಲಯಕ್ಕೂ ಹೋಗಬಹುದು: ದಿವಾಕರಬಾಬು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.14: ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಾವು ಈಗಾಗಲೇ ಭರವಸೆ ನೀಡಿರುವಂತೆ 3 ಗ್ಯಾರಂಟಿಗಳ ಕಾರ್ಡ್ ಪ್ರಕಾರ ಭರವಸೆಗಳನ್ನು ಈಡೇರಿಸುತ್ತೇವೆ. ನಾವು ನಮ್ಮ ಮಾತಿಗೆ ತಪ್ಪಿದರೆ ನೀವು ನಮ್ಮ ವಿರುದ್ದ ನ್ಯಾಯಾಲಯಕ್ಕೂ ಹೋಗಬಹುದು ಎಂದು ಮಾಜಿ ಸಚಿವ ಎಂ.ದಿವಾಕರಬಾಬು ಮತದಾರರಿಗೆ ಹೇಳಿದ್ದಾರೆ.
ನಗರದ 10 ಮತ್ತು 14ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಿಸಿ ಮತದಾರರಿಗೆ ಕಾರ್ಡುಗಳ ಗ್ಯಾರೆಂಟಿ ಬಗ್ಗೆ ವಿವರಿಸುತ್ತಿದ್ದರು.
 ಕಾಂಗ್ರೆಸ್‌ ಪಕ್ಷ ಈಗಾಗಲೇ ಘೋಷಣೆ ಮಾಡಿರುವಂತೆ. ಪ್ರತಿ ಬಿಪಿಎಲ್ ಕಾರ್ಡ್‌ಗೆ 10 ಕೆಜಿ ಅಕ್ಕಿ, ಪ್ರತಿ ಮನೆಗೆ 200 ಯುನಿಟ್ ವಿದ್ಯುತ್‌ ಉಚಿತ ಹಾಗೂ ಮನೆಯ ಗೃಹಿಣಿ ಒಬ್ಬರಿಗೆ ಮಾಸಿಕ 2 ಸಾವಿರ ರೂ.ಗಳನ್ನು ನೀಡುವ ಗೃಹಲಕ್ಷ್ಮೀ ಯೋಜನೆ ಇದ್ದು, ಇದು ಕೇವಲ ಭರವಸೆ ಅಲ್ಲ, ನಾವು ಅಧಿಕಾರಕ್ಕೆ ಬಂದರೆ ಮಾಡುವುದು ಖಚಿತ ಎಂದರು.
ಈ ಕಾರ್ಡ್ ಕೇವಲ ಚುನಾವಣೆ ಸಂದರ್ಭ ನೀಡುವ ಭರವಸೆ ಮಾತ್ರವಲ್ಲ, ಈ ಕಾರ್ಡ್ ಯಾರಿಗೆಲ್ಲ ನೀಡಲಾಗಿದೆಯೋ ಅವರೆಲ್ಲ ಈ ಮೂರು ಯೋಜನೆಗಳ ಫಲಾನುಭವಿಗಳು ಎಂದರು.

One attachment • Scanned by Gmail