ನಮ್ಮ ಕಾರ್ಮಿಕರು ದೇಶದ ಬೆನ್ನೆಲುಬು:ನ್ಯಾ. ಎಸ್.ಕೆ.ಕನಕಟ್ಟೆ

ಬೀದರ, ಮೇ 3: ನಮ್ಮ ಕಾರ್ಮಿಕರು ದೇಶದ ಬೆನ್ನೆಲುಬು, ನಮ್ಮ ದೇಶದ ಸಾಧನೆಗೆ ಕಾರ್ಮಿಕರ ಕೊಡುಗೆ ಅಪಾರವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎಸ್.ಕೆ.ಕನಕಟ್ಟೆ ಹೇಳಿದರು.

ಅವರು ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಮಿಕರ ದಿನಾಚರಣೆ 2023ರ ಅಂಗವಾಗಿ ಬೀದರ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಉಪನ್ಯಾಸಕರಾಗಿ ಬೀದರನ ಹಿರಿಯ ವಕೀಲರಾದ ಬಿ.ಎಸ್.ಪಾಟೀಲ ಮಾತನಾಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸವಲತ್ತುಗಳ ಬಗ್ಗೆ ತಿಳಿಸಿದರು ಹಾಗೂ ಇನ್ನೋರ್ವ ವಕೀಲರಾದ ಶಿವರುದ್ರ ಅವರು ಕಾರ್ಮಿಕರ ಬಗ್ಗೆ ಮಾತನಾಡಿದರು.

ಬೀದರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಶಿವಕುಮಾರ ಪಾಟೀಲ್ ಮುಖ್ಯ ಅತಿಥಿಗಳಾಗಿ ಮಾತನಾಡಿ ಕಾನೂನು ಅರಿವು ಮತ್ತು ನೆರವು ಬಗ್ಗೆ ತಿಳಿಸಿದರು. ಇನ್ನೋರ್ವ ಅತಿಥಿಗಳಾದ ರವಿಕಾಂತ ಅವರು ಕಾರ್ಮಿಕರ ದಿನಾಚರಣೆಯ ಮಹತ್ವವನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕಾಧಿಕಾರಿ ಶ್ರೀಹರಿದೇಶಪಾಂಡೆ ಮಾತನಾಡಿದರು. ಅರ್ಜುನ ಅವರು ಸ್ವಾಗತಿಸಿದರು ಹಾಗೂ ಗೌರಿಶಂಕರ ನಿರೂಪಣೆ ಮಾಡಿದರು ಶ್ರೀಧರ ವಂದನಾರ್ಪಣೆ ಮಾಡಿದರು.