ನಮ್ಮ ಕನಸುಗಳು ಮಾರಾಟಕ್ಕಿಲ್ಲ: ಡಾ. ಸುಜಾತಾ ಛಲವಾದಿ

ಇಂಡಿ:ಮಾ.26: ನಗರದ ಗುರುಭವನದಲ್ಲಿ ಹಮ್ಮಿಕೋಂಡಿದ್ದ ಪ್ರಥಮ ಮಹಿಳಾ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿದ ಸಂದರ್ಭದಲ್ಲಿ ಮೋದಲ ಗೊಷ್ಠಿ ವಿಚಾರ ಸಂಕೀರ್ಣದಲ್ಲಿ “ಕನ್ನಡ ಸಾಹಿತ್ಯ ಮತ್ತು ಮಹಿಳೆ” ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾದ ಡಾ|| ಸುಜಾತಾ ಛಲವಾದಿ ಸಹಾಯಕ ಪ್ರಾಧ್ಯಾಪಕರು ಸಾಹಿತಿಗಳು ಎಸ್,ಕೆ ಕಾಲೇಜ ತಾಳಿಕೋಟಿ ಅವರು ಕನ್ನಡ ಸಾಹಿತ್ಯದಲ್ಲಿ 12ನೇ ಶತಮಾನದ ಅಕ್ಕವiಹಾದೇವಿಯಿಂದ ಇಲ್ಲಿಯವರೆಗೆ ಕುರಿತು ಮಾತನಾಡುವಾಗ ಲೋಕದ ಉಸಿರಾಗುವ ಹೆಣ್ಣು ಅನೇಕ ಕಾಲಘಟ್ಟಗಳಲ್ಲಿ ಏರಿಳಿತದ ಮದ್ಯದಲ್ಲಿ ತನ್ನನ್ನು ತಾನೆ ಗುರುತಿಸಿಕೋಳ್ಳುತ್ತ ಮುನ್ನಡೆಯುತ್ತಿದ್ದಾಳೆ. ಸಾಮಾಜಿಕವಾಗಿ, ಆರ್ಥಿಕವಾಗಿ, ತನ್ನನ್ನು ತಾನು ಸದೃಡವಾಗಿ ಬೆಳಸಿಕೊಳ್ಳಲೇಬೇಕಾದ ಅಗತ್ಯತೆ ಮತ್ತು ಅನಿವಾರ್ಯತೆ ಕೂಡಾ ಆಗಿದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿನ ಕರಾಳದ ಬದುಕಿನ ಮುಖವಾಡಗಳು ಇಂದು ಬದಲಾಗಿವೆ. ಹಳ್ಳಿಗಳ ಗದ್ದೆಸಾಲಿನ ಮಡುವಿನಲ್ಲಿ, ಶಹರಗಳ ಐಟಿಬಿಟಿಗಳಲ್ಲಿ ದುಡಿಯುವ ಹೆಣ್ಣಿನ ಬದುಕು ಬೇರೆ ಬೇರೆ ರೀತಿಯಲ್ಲಿ ಛಿದ್ರವಾಗಿದೆ. ಇಂದಿನ ಕಾಲದಲ್ಲಿ ಹೆಣ್ಣಿನ ಮೇಲೆ ಅನ್ಯಾಯ, ಅತ್ಯಾಚಾರಗಲು ನಿರಂತರವಾಗಿ ನಡೆಯುತ್ತಲೇ ಇದೇ. ಹೆಣ್ಣು ತನ್ನ ಮಗ್ಗುಲವನ್ನು ಕೆಡವಿ ಹೊರಬಂದಷ್ಟು ಅವಳು ಗಟ್ಟಿಯಾಗಲು ಸಾಧ್ಯವಾಗುತ್ತದೆ. ನಮ್ಮ ಕನಸುಗಳು ಮಾರಾಟಕ್ಕಿಲ ಸ್ವಾಮಿ. ಕಂಡ ಕನಸನ್ನು ನನಸು ಮಾಡಲು ಜಾಗೃತರಾಗುತ್ತೇವೆ ಎಂದು ಅವರು ಮಾತನಾಡಿದರು. ಶ್ರೀಮತಿ ಸುನಂದಾ ತೋಳಬಂದಿ ಅವರು ಮಹಿಳಾ ದೌರ್ಜನ್ಯವನ್ನು ಕುರಿತು ಹಾಗೂ ಶ್ರೀಮತಿ ಎಸ್,ಎಸ್, ತಲ್ಲೂರ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.