ನಮ್ಮ ಊರು ನಮ್ಮ ಶಾಲೆ ನಮ್ಮ ಸಹಾಯ ಹಸ್ತ

ರಾಯಚೂರು.ಫೆ.೦೯- ರೋಟರಿ ಕ್ಲಬ್ ರಾಯಚೂರು ವತಿಯಿಂದ ಮಾನ್ವಿ ತಾಲೂಕಿನ ದೋಣಮರಡಿ ಉದ್ಬಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಗ್ರೀನ್ ಬೋರ್ಡ್ ಮತ್ತು ಪರೀಕ್ಷಾ ಪ್ಯಾಡ್ ಜಾಮಿಟ್ರಿ ಬಾಕ್ಸ್ ಮಕ್ಕಳಿಗೆ ಉಚಿತವಾಗಿ ವಿತರಿಸಲಾಯಿತು ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಟರಿ ಕ್ಲಬ್ ಅಸಿಸ್ಟೆಂಟ್ ಗೌವರ್ನರ್ ಎನ್ ಶಿವಶಂಕರ್ ವಕೀಲರು “ಇವರು ಪ್ರತಿಯೊಬ್ಬರು ಪ್ರತಿ ಗ್ರಾಮದಿಂದ ಇವತ್ತು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಆದರೆ ಅವರು ತಮ್ಮ ಶಾಲೆ ಮತ್ತು ಗ್ರಾಮಗಳನ್ನು ಮರೆತಿದ್ದಾರೆ ಆದಕಾರಣ ಅವರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ನಿಮ್ಮ ತಂದೆ ತಾಯಿ ಹೆಸರಿನಲ್ಲಿ ಅಥವಾ ನಿಮ್ಮ ಹುಟ್ಟು ಹಬ್ಬದ ಅಂಗವಾಗಿ ನಿಮ್ಮ ಗ್ರಾಮದ ಸರ್ಕಾರಿ ಕನ್ನಡ ಶಾಲೆಗಳಿಗೆ ಸಹಾಯ ಹಸ್ತವನ್ನು ನೀಡಿ ಕನ್ನಡಕ್ಕೆ ಪ್ರೋತ್ಸಾಹ ನೀಡುತ್ತಾ ಶಾಲೆಯ ಅಭಿವೃದ್ಧಿಗಳನ್ನು ಮಾಡುವದರ ಮೂಲಕ ಮಕ್ಕಳಿಗೆ ಸಹಾಯ ಮಾಡಿದಂತಾಗುತ್ತದೆ ಈ ಮೂಲಕ ನಮ್ಮ ಊರು ನಮ್ಮ ಗ್ರಾಮ ನಮ್ಮ ಸಹಾಯ ಹಸ್ತ ಒಂದು ಹೊಸ ಆಂದೋಲನ ನಡೆಯುವ ಅಗತ್ಯ ಇದೆ, ಇದರಿಂದ ಶಿಕ್ಷಣ ಕ್ರಾಂತಿ ಉಂಟು ಮಾಡಬಹುದು ಈ ಕಾರ್ಯ ರೋಟರಿ ಕ್ಲಬ್ ಮಾಡುತ್ತಿದೆ ಎಂದು ಹೇಳಿದರು
ರೋಟರಿ ಕ್ಲಬ್ ನ ಮಾಜಿ ಅಸಿಸ್ಟೆಂಟ್ ಗವರ್ನರ್ ಡಿ.ಜಿ ಯಶವಂತ್ ಮಾತನಾಡಿ ನಾನು ಗಂಡ್ಮರಣಿ ಗ್ರಾಮದಲ್ಲಿ ಹುಟ್ಟಿ ಬೆಳೆದವನು ಈ ಗ್ರಾಮಕ್ಕೆ ನಾನು ಏನಾದರೂ ಹಿಂದಿರುಗಿ ಕೊಡಬೇಕೆಂಬ ಆಸೆಯಿಂದ ನನ್ನ ತಂದೆ ತಾಯಿ ಹೆಸರಿನಲ್ಲಿ ಈ ದಿನ ಈ ಸರ್ಕಾರಿ ಶಾಲೆಗಳಿಗೆ ಒಂದು ಲಕ್ಷದ ಸಾಮಾನುಗಳು ದೇಣಿಗೆಯಾಗಿ ನೀಡುತ್ತಿದ್ದೇನೆ ನನ್ನ ಈ ಅಲ್ಪ ದೇಣಿಗೆ ನಮ್ಮ ಊರಿನ ಶಾಲೆಯ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯಲಿ ಎಂಬ ಉದ್ದೇಶದಿಂದ ನೀಡುತ್ತಿದ್ದೇನೆ ಈ ದಿನ ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು
ರೋಟರಿ ಅಧ್ಯಕ್ಷ ಅನಿಲ್ ಕುಮಾರ್ ಪಾಟೀಲ್ ಅವರು ಮಾತನಾಡಿ ರೋಟರಿ ಕ್ಲಬ್ ನಿಂದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ ಅದರಲ್ಲಿ ಗ್ರಾಮದಲ್ಲಿರುವ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯಬೇಕೆಂಬ ಉದ್ದೆಶದಿಂದ ರೋಟರಿ ಕ್ಲಬ್ ಸಹಾಯ ಹಸ್ತ ನೀಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ರೋಟರಿ ಕಾರ್ಯದರ್ಶಿ ಕುಮಾರ್ ಪಾಟೀಲ್ ಖಜಾಂಚಿ ರಾಜೇಶ್ ಬೆಲಂ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರು ಮುಖ್ಯೋಪಾಧ್ಯರಾದ ನಾಗೇಶ್, ಗಣೇಶ್ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಿಗೆ ೧೨ ಗ್ರೀನ್ ಬೋರ್ಡ್ ೧೦೦೦ ಪರೀಕ್ಷಾ ಪ್ಯಾಡ್ ಗ್ಯಾಮಿಟ್ರಿ ಬಾಕ್ಸ್ ಏಳಿಗೆ ನೀಡಿದ ಮಾಜಿ ಅಸಿಸ್ಟೆಂಟ್ ಗೌರ್ನರಾದ ಡಿ.ಜೆ.ಯಶವಂತ್ ಅವರನ್ನು ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಆತ್ಮೀಯವಾಗಿ ಸನ್ಮಾನಿಸಿದರು.