ನಮ್ಮ ಉಳಿವಿಗಾಗಿ ಪರಿಸರ ಸಂರಕ್ಷಿಸಿ: ಸಿದ್ಧಲಿಂಗ ಶ್ರೀ

ವಾಡಿ: ಆ.6: ಭೂಮಿಯಲ್ಲಿ ನಮ್ಮ ಉಳಿವು ಪರಿಸರದ ಉಳಿವನ್ನು ಅವಲಂಬಿಸಿದೆ. ಭೂಮಿ ಮಾತ್ರ ನಮ್ಮ ಇರುವಿಕೆಯ ಜೀವಂತ ಗ್ರಹವಾಗಿದೆ. ಇಂತಹ ಪರಿಸರದ ರಕ್ಷಣೆ ನಮ್ಮೇಲ್ಲರ ಆದ್ಯ ಕರ್ತವ್ಯವಾಗಲಿ ಎಂದು ರಾವೂರ ಶ್ರೀ ಸಿದ್ಧಲಿಂಗೇಶ್ವರ ವಿಧ್ಯಾಭಿವೃದ್ಧಿ ಸಂಸ್ಥೆಯ ಅದ್ಯಕ್ಷ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು ಹೇಳಿದರು.

ಪಟ್ಟಣ ಸಮೀಪದ ರಾವೂರ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಇಕೋ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ಧ ಕಸದಿಂದ ರಸ ಎನ್ನುವ ವಿನೂತನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಲು ಇಂತಹ ಚಟುವಟಿಕೆಗಳು ಉಪಯುಕ್ತ. ನಾವೇಲ್ಲಾ ನಿತ್ಯವೂ ನಮ್ಮ ಪರಿಸರದಲ್ಲಿ ಅನೇಕ ನಿರುಪಯುಕ್ತ ವಸ್ತುಗಳು ಬಿದ್ದಿರುವುದನ್ನು ನೋಡುತ್ತೇವೆ. ಅಂತಹ ವಸ್ತುಗಳಿಂದ ಅಲಂಕಾರಿಕ ದಿನಬಳಕೆಯ ವಸ್ತುಗಳನ್ನು ತಯ್ಯಾರಿಸಿದರೆ ಪರಿಸರದಲ್ಲಿ ಬೀಳುವ ನಿರುಪಯುಕ್ತ ವಸ್ತುಗಳನ್ನು ಕಡಿಮೆ ಮಾಡುವುದರ ಜೊತೆಗೆ ಶಾಲೆಯನ್ನು ಮನೆಯನ್ನು ಸಿಂಗರಿಸಿ ಮಕ್ಕಳಲ್ಲಿ ಪರಿಸರದ ಪ್ರಜ್ಞೆಯನ್ನು ಬೆಳೆಸಲು ಸಹಾಯಕ ಎಂದು ಹೇಳಿದರು. ಇಂತಹ ಚಟುವಟಿಕೆಗಳು ಸಮಾಜಕ್ಕೆ ಮಾದರಿ. ಪ್ರತಿಯೊಂದು ಶಾಲೆಗಳು ತಮ್ಮ ಮಕ್ಕಳಲ್ಲಿ ಇಂತಹ ಹವ್ಯಾಸವನ್ನು ಬೆಳೆಸಲು ಪ್ರೇರೇಪಿಸಬೇಕೆಂದರು.

 ಕಾರ್ಯಕ್ರವದಲ್ಲಿ ಪ್ರಾಸ್ತಾವಿಕ ಇಕೋ ಕ್ಲಬ್ ಸಂಯೋಜಕಿ ಹಾಗೂ ವಿಜ್ಞಾನ ಶಿಕ್ಷಕಿ ಸುಗುಣಾ ಕೋಳ್ಕೂರ ಮಾತನಾಡಿದರು.

ಶಾಲಾ ಮಕ್ಕಳು ಮನೆಯಲ್ಲಿ ಬೀದಿಯಲ್ಲಿ ನಿರುಪಯುಕ್ತವಾಗಿ ಬಿದ್ದಿದ್ದ ಬಾಟಲ್,ಪ್ಲಾಸ್ಟಿಕ ಸಾಮಾನುಗಳು, ರದ್ದಿ ಪೇಪರ್, ಕಟ್ಟಿಗಳು, ಕ್ಯಾರಿ ಬ್ಯಾಗಗಳನ್ನು ಬಳಸಿಕೊಂಡು ಉತ್ತಮ ರೀತಿಯಲ್ಲಿ ನೋಡುಗರ ಗಮನ ಸೆಳೆಯುವಂತೆ ಫೊಟೋ ಫ್ರೇಮ್ ಗಳು, ಗೋಡೆಯ ಅಲಂಕಾರಿಕ ವಸ್ತುಗಳು, ಹೂದಾನಿಗಳು, ಕುಂಡಗಳು ಹೀಗೆ ವಿವಿದ ವಸ್ತುಗಳನ್ನು ತಯ್ಯಾರಿಸಿ ಗಮನ ಸೆಳೆದರು.

ಪೂಜ್ಯರು ಪ್ರತಿಯೋಂದನ್ನು ಗಮನಿಸಿ ಮಕ್ಕಳಿಂದ ವಿವರಣೆ ಪಡೆದರು ನಂತರ ಉತ್ತಮ ಮಾದರಿಗಳಿಗೆ ಬಹುಮಾನ ವಿತರಿಸಿದರು. ಸಂಜನಾ, ಕಾರ್ತಿಕ,ರಿಷಿಕ್,ಸ್ಪಂದನಾ,ಶಿವಲಿಂಗ ಬಹುಮಾನ ಪಡೆದರು.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಸಿದ್ಧಾರೂಢ ಬಿರಾದಾರ, ಶಿಕ್ಷಕÀ ಸಿದ್ಧಲಿಂಗ ಬಾಳಿ, ಶಿವಕುಮಾರ ಸರಡಗಿ, ದತ್ತಾತ್ರೇಯ ಗುತ್ತೇದಾರ, ಭುವನೇಶ್ವರಿ ಎಂ, ರಾಧಾ ರಾಠೋಡ, ಜ್ಯೋತಿ ತೆಗನೂರ, ಬಾಬು ಕಣ್ಣೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.