ನಮ್ಮ ಅಂತರಂಗ ಶುದ್ಧವಾಗದ ಹೊರತು ಸಮಾಜ ಸುಧಾರಣೆ ಅಸಾಧ್ಯ : ಶೈಲಶ್ರೀ ಯಡ್ರಾಮಿ

ಆಲಮೇಲ:ಮಾ.10:ನಮ್ಮ ಅಂತರಂಗ ಶುದ್ಧವಾಗದ ಹೊರತು ಸಮಾಜ ಸುಧಾರಣೆ ಅಸಾಧ್ಯ ಹೆಣ್ಣು -ಗಂಡು ಎಂಬ ಭೇದ ಮರೆತು ಇಬ್ಬರನ್ನೂ ಸಮಾನವಾಗಿ ನೋಡಿದಾಗ ಮಾತ್ರ ನಮ್ಮ ದೇಶ ರಾಮ ರಾಜ್ಯವಾಗಲು ಸಾಧ್ಯ ಎಂದು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಹೂವಿನಹಳ್ಳಿ ಎಚ್ ಪಿ ಎಸ್ ಶಾಲೆಯ ಗುರು ಮಾತೆ ಶೈಲಶ್ರೀ ಯಡ್ರಾಮಿ ಹೇಳಿದರು.
ಪಟ್ಟಣದ ಓಂ ಶಾಂತಿ ಭವನದಲ್ಲಿ ಮಹಾ ಶಿವರಾತ್ರಿಯ ನಿಮಿತ್ಯ್ ಶುಕ್ರವಾರ ಆಲಮೇಲ ತಾಲೂಕಿನ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ವತಿಯಿಂದ ಮಹಿಳಾ ದಿನಾಚಾರಣೆಯನ್ನು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಾವಿತ್ರಿಬಾಯಿ ಫುಲೆಯವರ ಭಾವಚಿತ್ರಕ್ಕೆ ಪೂಜೇ ಸಲ್ಲಿಸಿ ಮಾತನಾಡಿದ ಅವರು.
ಹೆಣ್ಣು ಅಬಲೆಯಲ್ಲ,ಸಬಲೆ,ಅವಳಿಗೆ ಪ್ರೋತ್ಸಾಹದ ಕೊರತೆ ಇರುವುದರಿಂದ ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಾಗಿದ್ದಾಳೆ, ಸಂವಿಧಾನಿಕವಾಗಿ ಶೇ 33. ಮೀಸಲಾತಿ ನೀಡಿದರೂ ಕೂಡಾ ಪುರುಷ ಪ್ರಧಾನ ಸಮಾಜದಲ್ಲಿ ಅವಳ ಪ್ರತಿಭೆಗೆ ಬೆಲೆ ಇಲ್ಲದಂತಾಗಿದೆ. ಅದಕ್ಕಾಗಿ ಸಾವಿತ್ರಿಬಾಯಿ ಫುಲೆ ತನ ಪತಿ ಜೋತಿಬಾ ಫುಲೆ ಇವರಿಂದ ಪ್ರೇರಣೆ ಪಡೆದು ಅನಾಥ,ದೀನ ದುರ್ಬಲ ಹೆಣ್ಣು ಮಕ್ಕಳಿಗೆ ದಾರಿ ದೀಪವಾಗಿ, ತೊಟ್ಟಿಲು ತೂಗುವ ಕೈ ಜಗತ್ತನೇ ಆಳಬಲ್ಲದು, ಹೆಣ್ಣು ಅನಂತ ಶಕ್ತಿ ಸ್ವರೂಪ ಎಂಬುದನ್ನು ಈ ಸಮಾಜಕ್ಕೆ ತೋರಿಸಿದಾರೆ, ಅದಕ್ಕಾಗಿ ಇಂದಿನ ಸಮಾಜ ಹೆಣ್ಣು -ಗಂಡು ಎಂಬ ಭೇದ ಮರೆತು ಇಬ್ಬರನ್ನೂ ಸಮಾನವಾಗಿ ನೋಡಿದಾಗ ಮಾತ್ರ ನಮ್ಮ ದೇಶ ರಾಮ ರಾಜ್ಯವಾಗಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಸಾನಿಧ್ಯವನ್ನು ಓಂ ಶಾಂತಿಯ ರಾಜಯೋಗಿನಿ ರೇಣುಕಾ ಅಕ್ಕ ವಹಿಸಿದರು, ಡಾ,ಮಂಜುಷಾ ಸಂದೀಪ ಪಾಟೀಲ, ಸಂಘದ ಉಪಾಧ್ಯಕ್ಷೆ ಲಕ್ಷ್ಮೀ ಅತಾಪಿ,,ಸಂಘಟನಾ ಕಾರ್ಯದರ್ಶಿ ಶ್ರೀಮತಿ ಈರಮ್ಮ ಮೇಟಿ,ಸುವರ್ಣ ಶರಣಮಠ,ಹಾಗೂ ಅಪ್ಪು ಶಟ್ಟಿ ಇದ್ದರು.