ನಮ್ಮೊಳಗೆ ನಾವಾಗಿ ಬದುಕೋಣ : ಸಿದ್ದಲಿಂಗ ಮಹಾಸ್ವಾಮಿ

ಜೇವರ್ಗಿ:ಆ.11: ವಿದ್ಯಾರ್ಥಿ ಜೀವನ ಬಹಳ ಮುಖ್ಯ ತಮ್ಮ ಅಮುಲ್ಯವಾದ ಸಮಯ್ಯವನ್ನು ಹಾಳುಮಾಡಿಕೊಳ್ಳಬೇಡಿ. ನಮ್ಮ ಜೀವನದಲ್ಲಿ ಒಮ್ಮೆ ಹೊದ ಕಾಲ ಮತ್ತೆ ಮರಳಿ ಬರುವುದಿಲ್ಲ, ಅದಕ್ಕಾಗಿ ನಮ್ಮೊಳಗೆ ನಾವಾಗಿ ಬದುಕೊಣ ಎಂದು ಯಡ್ರಾಮಿ ವಿರಕ್ತ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿ ವಿದ್ಯಾರ್ಥಿಗಳಿಗೆ ಕೀವಿಮಾತನೆಳಿದರು.

ಪಟ್ಟಣದ ಮಿನಿ ವಿಧಾನ ಸೌಧದ ಎದುರಿಗೆ ಶ್ರೀ ಮಹಾಲಕ್ಷ್ಮಿ ಕಲಾ ಮತ್ತು ವಾಣಿಜ್ಯ ಪದವಿ ಮಾಹವಿದ್ಯಾಲಯ ಹಾಗೂ ಸ್ವಾಮಿ ವಿವೇಕಾನಂದ ಕಲಾ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸ್ವಾಗತ ಮತ್ತು ಸಾಧಕರಿಗೆ ಸೇವಾ ರತ್ನ ಪ್ರಶಸ್ತಿ ಸಮಾರಂಭ ಗುರುವಾರ ಜರುಗಿತು.

ಯಡ್ರಾಮಿ ವಿರಕ್ತ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿ ಮಾತನಾಡಿ ವಿದ್ಯಾರ್ಥಿ ಜೀವನ ಬಹಳ ಮುಖ್ಯ ತಮ್ಮ ಅಮುಲ್ಯವಾದ ಸಮಯ್ಯವನ್ನು ಹಾಳುಮಾಡಿಕೊಳ್ಳಬೇಡಿ. ನಮ್ಮ ಜೀವನದಲ್ಲಿ ಸಿಹಿ ಮತ್ತು ಕಹಿ ಎರಡು ಇರುತ್ತವೆ. ಮೊದಲು ಸಿಹಿ ತಿಂದರೆ ಕಹಿ ಉಳಿಯುತ್ತದೆ. ಕಹಿ ತಿಂದರೆ ಸಿಹಿ ಉಳಿಯುತ್ತದೆ. ಆದ್ದರಿಂದ ನಿಮ್ಮ ಇಂದಿನ ಜೀವನದಲ್ಲಿ ಶ್ರಮಪಟ್ಟರೆ ಮಾತ್ರ ಮುಂದಿನ ಬದುಕು ಸುಖಕರವಾಗಿ ಸಾಗಿಸಬಹುದು. ವಿದ್ಯಾರ್ಥಿ ಜೀವನದಲ್ಲಿ ನಿದ್ದೆಗೆ ಜಾರಬಾರದು. ಒದಿನ ಕಡೆ ಗಮನ ಹರಿಸಬೇಕು. ಸೋಲನ್ನು ಮೆಟ್ಟಿನಿಂತಾಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಬಹುದು, ಸಾಧನೆ ಮಾಡಬಹುದು. ಸೊಲಿನಿಂದ ಪಾಠ ಕಲಿಯದವರು ತಮ್ಮ ಬದುಕಿನಲ್ಲಿ ಸಾಧನೆ ಮಾಡಲು ಸಾದ್ಯವಿಲ್ಲ ಎಂದರು.

ನಂತರ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉಪಮ್ಯಾಸಕರು ಹೆಳಿದ ಮಾರ್ಗದಲ್ಲಿ ನಡೆದಿದ್ದೆ ಆದರೆ ಯಶಸ್ಸು ಬಹಳ ಬೇಗ ಪಡೆದುಕೊಳಬಹುದು. ವಿದ್ಯಾರ್ಥಿ ಜೀವನ ಸರಿಯಾಗಿ ಅನುಭವಿಸಿ, ಬಹಳ ಮೌಲ್ಯಭರಿತವಾಗಿರತ್ತದೆ. ನಿಮ್ಮ ಜೀವನದ ಬಗ್ಗೆ ಉತ್ತಮ ಕನಸುಗಳನ್ನ ನಿಮ್ಮ ತಂದೆ ತಾಯಿ ಕಟ್ಟಿಕೊಂಡಿರುತ್ತಾರೆ. ತಂದೆ ತಾಯಿ ಹಾಗೂ ಶೀಕ್ಷಕರಿಗೆ ಗೌರವ ತರುವಂತ ಜೀವನ ನಿಮ್ಮದಾಘಲಿ ಎಂದರು.

ಈ ಸಂದರ್ಭದಲ್ಲಿ ಶ್ರೀ ಗಂಗಾಧರೇಶ್ವರ ಮಹಾಸ್ವಾಮಿಗಳು ಸಿದ್ದಲಿಂಗೇಶ್ವರ ಬೆಟ್ಟ ಶಾಹಪುರ, ರಮೇಶ ಬಾಬು ವಕೀಲ್, ವಿಜಯಲಕ್ಷ್ಮೀ ಆಂದೊಲಾ, ನಾಗುಬಾಯಿ ದೊಡ್ಡಮನಿ, ಮಂಜುನಾಥ ಗುತ್ತೆದಾರ, ಶಿವಶರಣಪ್ಪ ಹಳಿಮನಿ, ಈಶ್ವರ ಹಿಪ್ಪರಗಿ, ಶ್ರೀಶೈಲ್ ಕಣದಾಳ, ಜಗದೀಶ ಉಕ್ಕಿನಾಳ, ಸಿದ್ದಲಿಂಗಪ್ಪ ಬಡಿಗೇರ, ಮಹಾದೇವಿ ಮಂದೇವಾಲ, ನಿಂಗಮ್ಮ ಹಳಿಮನಿ, ಮಂಜುಳಾ ಬಡಿಗೇರ, ಧರ್ಮಣ್ಣ ಬಡಿಗೇರ, ಮಲ್ಲಿಕಾರ್ಜುನ ನೇದಲಗಿ, ಜೆಟ್ಟೆಪ್ಪ ಪುಜಾರಿ, ಡಾ. ಪ್ರಕಾಶ ಬಡಿಗೇರ್ ಹರನಾಳ, ಶರಣಬಸವ ಕಲ್ಲಾ ಡಾ. ಪಿ ಎಂ ಮಠ, ಡಾ. ಸಿದ್ದು ಪಾಟೀಲ್, ಶಿವಕುಮಾರ್ ಗೌಡ ಪಾಟೀಲ್ ನರಿಬೋಳ, ಅನಿಲ್ ರಾಂಪುರೆ, ಮಾಳಪ್ಪ ಎಸ್ ದೇಸಾಯಿ ಕುಮ್ಮನಸಿರಸಿಗಿ, ಅಮೀನಪ್ಪ ಬಿ ಹೊಸಮನಿ, ಪ್ರಭು ಜಾದವ್, ಮರೇಪ್ಪ ಕಂಡಳ್ಕರ್, ವಿಷ್ಣು ಮಹೇಂದ್ರಕರ್, ರವೀಂದ್ರ. ಎನ್. ವಕೀಲರು, ರಮೇಶ್ ಆಲೂರು, ಮಾಳಪ್ಪ ಪೂಜಾರಿ ಸೆರಿದಂತೆ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.