
ಕಲಬುರಗಿ: ಮಾ.2:ಶಿಕ್ಷಣ ಇವತ್ತಿಗೆ ಅತ್ಯಂತ ಅವಶ್ಯಕವಾಗಿದೆ. ಸರಿಯಾಗಿ ಶಿಕ್ಷಣವನ್ನು ಕಲಿಯುವುದು ಇವತ್ತಿನ ಅನಿವಾರ್ಯವಾಗಿದೆ. ಶಾಲೆಯಲ್ಲಿ ಗುಣಮಟ್ಟದ ಕಲಿಕೆಯನ್ನು ಅಭಿವೃದ್ಧಿಪಡಿಸುವುದು ಬರಿ ಸರಕಾರದ ಕೆಲಸವಷ್ಟೇ ಅಲ್ಲಾ ಸಮುದಾಯದವರ ಜವಾಬ್ದಾರಿಯೂ ಇದೆ. ನಾವೆಲ್ಲರೂ ಒಮ್ಮತದಿಂದ ಕೈಜೋಡಿಸಿ ನಮ್ಮೂರ ಶಾಲೆಯನ್ನು ಅಭಿವೃದ್ಧಗೊಳಿಸಲು ಪಣತೊಡೋಣ ಎಂದು ನಂದೂರ ಗ್ರಾಮದ ಮುಖಂಡರಾದ ನಾಗರಾಜ್ ಕಲ್ಲಾ ಅಭಿಪ್ರಾಯ ಪಟ್ಟರು.
ಇತ್ತೀಚಗೆ ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ಫೈನಾನ್ಸಿಯಲ್ ಇನಕ್ಲೂಜನ್ ಲಿಮಿಟೆಡ್ ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ವತಿಯಿಂದ ನಂದೂರ ಶಾಲೆಯಲ್ಲಿ ಹಮ್ಮಿಕೊಂಡಿದ್ದ “ಕಲಿಕಾ ಸಾಮಥ್ರ್ಯಗಳ ಸಂಗಮ” ಎನ್ನುವ ಮಹತ್ವದ ಕಾರ್ಯಕ್ರಮದಲ್ಲಿ ಮಾತನಾಡಿದರು. ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಕಳೆದ ಹಲವು ವರ್ಷಗಳಿಂದ ನಮ್ಮೂರಿನ ಶಾಲೆಯಲ್ಲಿ ಮಕ್ಕಳ ಕಲಿಕಾ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಮಕ್ಕಳ ಕಲಿಕೆಯ ಗುಣಮಟ್ಟವನ್ನು ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ. ಅವರೊಂದಿಗೆ ನಾವೆಲ್ಲರೂ ಕೈಜೋಡಿಸಿ ಕೆಲಸ ಮಾಡಿದರೆ ನಮ್ಮೂರ ಶಾಲೆಯ ಗುಣಮಟ್ಟ ಸುಧಾರಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದ ಎ.ಪಿ.ಸಿ. ಬಸನಗೌಡ ಪಾಟೀಲ್ ಎಲ್.ಎಲ್.ಎಫ್ ಸಂಸ್ಥೆಯು ಅತ್ಯಂತ ಉತ್ತಮವಾದ ಕೆಲಸ ಮಾಡುತ್ತಿದೆ. ಮಕ್ಕಳಿಗೆ ಸ್ಪಷ್ಟ ಓದು ಶುದ್ಧ ಬರಹ ಕಲಿಸಲು ಕಳೆದ ನಾಲ್ಕು ವರ್ಷಗಳಿಂದ ಪ್ರಯತ್ನಿಸಿದೆ ಅದರ ಫಲಿತಾಂಶವೇ ಈ ಕಲಿಕಾ ಸಾಮಥ್ರ್ಯಗಳ ಸಂಗಮ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿ ಯೋಜನಾ ನಿರ್ದೇಶಕ ಅನಿಲ್ ಕೊಡಂಬಲ್ ಲರ್ನಿಂಗ್ ಲಿಂಕ್ಸ್ ಫೌಂಡೇಷನ್ ಹಾಗೂ ಬಿ.ಎಫ್.ಐ.ಎಲ್. 2019 ರಿಂದ ಇವತ್ತಿನವರೆಗೂ ಮಕ್ಕಳ ಆರಂಭಿಕ ಭಾಷೆ ಮತ್ತು ಗಣತೀಯ ಜ್ಞಾನವನ್ನು ಹೆಚ್ಚಿಸಲು ಶ್ರಮವಹಿಸಿದೆ. ಮಕ್ಕಳನ್ನು ಅವರ ವಯಸ್ಸಿಗೆ ತಕ್ಕಂತೆ ಕಲಿಸುವುದರಿಂದ ಮಕ್ಕಳಲ್ಲಿ ಗುಣಾತ್ಮಕ ಶಿಕ್ಷಣದ ಪರಿಕಲ್ಪನೆ ಮೂಡಲಿದೆ ಎಂದರು.
ಮುಖ್ಯ ಅಥಿತಿಯಾಗಿ ಮಾತನಾಡಿದ ಸಿ.ಎಸ್.ಆರ್. ಮ್ಯಾನೇಜರ್ ಶಿವರಾಜ್ ಶೆಟ್ಟಿ ಅವರು ಭಾರತ ಫೈನಾನ್ಸಿಯಲ್ ಇನಕ್ಲೂಜನ್ ಲಿಮಿಟೆಡ್ ಇವತ್ತು ಮಕ್ಕಳು ಮಾಡಿದ ಕನ್ನಡ ಮತ್ತು ಗಣಿತ ವಿಷಯದ ಮೂಲ ಕೌಶಲಗಳನ್ನು ಒಳಗೊಂಡ ವಿವಿಧ ಚಟುವಟಿಕೆಗಳ ಮಾದರಿಗಳನ್ನು ಗಮನಿಸಿದರೆ ಅತ್ಯಂತ ಸಂತೋಷವಾಗುತ್ತದೆ. ಮಕ್ಕಳು ತಾವು ಕಲಿತ ವಿಷಯ ವಿವರಗಳನ್ನು ವಿವಿಧ ರೀತಿಯಲ್ಲಿ ಕಲಿಯುವ ಬಗೆಗಳನ್ನು ನಾವು ಗಮನಿಸಬಹುದಾಗಿದೆ. ಈ ಕಲಿಕೆಯನ್ನು ಶಿಕ್ಷಕರು ಮುಂದುವರಿಸಿಕೊಂಡು ಹೋಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳು ಕನ್ನಡ, ಗಣಿತ, ಗ್ರಂಥಾಲಯ ಚಟುವಟಿಕೆಗಳು, ಆರ್ಟ್ ಮತ್ತು ಕ್ರಾಫ್ಟ್, ಹಾಡು, ಆಟ, ನೃತ್ಯ, ಪೆÇೀಪೆಟ್ ಮತ್ತು ಪೇಂಟಿಂಗ್ ಹೀಗೆ ವಿವಿಧ ರೀತಿಯ ಚಟುವಟಿಕೆಗಳಿಂದ ಎಲ್ಲರನ್ನು ಸೆಳೆದರು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕನ್ನಡದ 28 ಚಟುವಟಿಕೆಗಳು ಗಣಿತ ವಿಷಯದ 42 ಚಟುವಟಿಕೆಗಳ ವಿವಿಧ ಕಲಿಕಾ ಸಾಮಗ್ರಿಗಳ ಮೂಲಕ ತಮಗಾದ ಕಲಿಕೆಯನ್ನು ಇತರೆ ಮಕ್ಕಳಿಗೆ ಹಂಚಿಕೆ ಮಾಡಿದರು. 600 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು, 150 ಶಿಕ್ಷಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ನಿಂಗಣ್ಣ ದೊಡ್ಡಮನಿ, ಮುಖಂಡರಾದ ಉಮಾಪತಿ, ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರು ಸದಸ್ಯರು, ಶಾಲೆಯ ಸಿಬ್ಬಂದಿ, ಸಿ.ಆರ್.ಪಿ ಈರಮ್ಮ, ಗ್ರಾಮದ ಮುಖಂಡರು, ಸಂಸ್ಥೆಯ ಎಲ್ಲಾ ಸಂಪನ್ಮೂಲ ಶಿಕ್ಷಕರು ಹಾಜರಿದ್ದರು. ಈ ಕಾರ್ಯಕ್ರಮವನ್ನು ಉಷಾದೇವಿ ಸ್ವಾಗತಿಸಿದರು, ಸಂತೋಷ ನಿರೂಪಿಸಿ ವಂದಿಸಿದರು.