ನಮ್ಮೂರ ಜಾತ್ರೆ ಗೋ-ಮಾತೆ ಪೂಜೆಯೊಂದಿಗೆ ಆರಂಭ

ವಿಜಯಪುರ,ಜ.13:ನಗರದ ಶ್ರೀ ಸಿದ್ಧೇಶ್ವರ ಸಂಕ್ರಮಣದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಸಿದ್ಧೇಶ್ವರ ದೇವಾಲಯದಲ್ಲಿ ನಮ್ಮೂರ ಜಾತ್ರೆಯ ಗೋ ಪೂಜೆಯೊಂದಿಗೆ ನಂದಿಕೊಲ ಪೂಜೆಗಳನ್ನು ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ, ವಿಜಯಪುರ ನಗರ ಶಾಸಕÀ ಬಸನಗೌಡ ಪಾಟೀಲ (ಯತ್ನಾಳ) ನೆರವೇರಿಸಿದರು.

ನಂದಿಕೋಲಗಳನ್ನು ಹಿಡಿಯುವ ಪಟುಗಳು ನೀಲುವ ಅಂಗಿ, ಧೋತ್ರ, ಪಟ್ಟವಡಿ ಹಾಕಿಕೊಂಡು ಭಕ್ತಿ, ಶ್ರದ್ದೆಯಿಂದ ನಂದಿಕೋಲಗಳನ್ನು ಹಿಡಿದರು. ಅಟಲ್ ಬಿಹಾರಿ ವಾಚಪೇಯಿ ರಸ್ತೆಯಲ್ಲಿರುವ ಚತುರ್ಮುಖ ಗಣೇಶನಿಗೆ ವಿಶೇಷ ಪೂಜೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಸಂಗು ಸಜ್ಜನ, ಚೇರಮನ್ ಬಸಯ್ಯ ಹಿರೇಮಠ, ಕಾರ್ಯದರ್ಶಿ ಸದಾನಂದ ದೇಸಾಯಿ, ಜಂಟಿ ಕಾರ್ಯದರ್ಶಿ ಎಂ.ಎಂ. ಸಜ್ಜನ, ಕಾರ್ಯದರ್ಶಿ ಬಿ.ಎಸ್. ಸುಗೂರ, ಶಿವಾನಂದ ನೀಲಾ, ಜಾತ್ರಾ ಸಮಿತಿಯ ಗುರು ಗಚ್ಚಿನಮಠ, ಶಿವರುದ್ರ ಬಾಗಲಕೋಟ, ರಾಹುಲ್ ಜಾಧವ, ಎಸ್. ಎಮ್. ಪಾಟೀಲ, ರಾಜಶೇಖರ ಮಗಿಮಠ, ಪ್ರೇಮಾನಂದ ಬಿರಾದಾರ, ಎಸ್.ಸಿ. ಉಪ್ಪಿನ, ಎಸ್.ಎಚ್. ನಾಡಗೌಡ, ಚಂದು ಹುಂಡೇಕಾರ, ಎಮ್.ಎಸ್. ಕರಡಿ, ಬಸವರಾಜ ಗಣಿ, ಸುಧೀರ ಚಿಂಚಲಿ, ಶಿವಾನಂದ ನೀಲಾ, ರಮೇಶ ಹಳ್ಳದ, ಸಾಯಿಬಣ್ಣ ಭೋವಿ, ಶಶಿಕಾಂತ ಮುದಕಾಮಠ, ಬಾಗಪ್ಪ ಕನ್ನೊಳ್ಳಿ, ಶ್ರೀಮಂತ ಜಂಬಗಿ, ಪ್ರವೀಣ ಬಿಜ್ಜರಗಿ, ಈರಣ್ಣ ಪಾಟೀಲ, ಶಿವಾನಂದ ಚಿಮ್ಮಲಗಿ, ಚಂದ್ರು ಚೌಧರಿ, ಸುರೇಶ ಇಟಗಿ, ಮಲ್ಲಿಕಾರ್ಜುನ ಹಿಟ್ನಳಿ, ಬಸವರಾಜ ಬೆಲ್ಲದ, ಬಸವರಾಜ ಕಂದಗಲ್, ಬಸವರಾಜ ಬಿರಾದಾರ, ಮಲಕಪ್ಪ ಗಾಣಿಗೇರ, ಲಕ್ಷ್ಮಣ ಜಾಧವ ಮುಂತಾದ ಪ್ರಮುಖರು ಹಾಗೂ ಭಕ್ತಾದಿಗಳು ಹಾಜರಿದ್ದರು.

ಗೋ ಮಾತೆ ಪೂಜೆಯನ್ನು ಮುರಗಯ್ಯಾ ಗಚ್ಚಿನಮಠ, ನಂದಿಕೋಲ ಪೂಜೆಯನ್ನು ಅರ್ಚಕರಾದ ಸಿದ್ದಯ್ಯ ಹಿರೇಮಠ, ಶಿವಾನಂದಯ್ಯ ಹಿರೇಮಠ, ನೀಲಕಂಠಯ್ಯಾ ಪೂಜಾರಿ ನೆರವೇರಿಸಿದರು. ಗಣಪತಿ ಚೌಕದಲ್ಲಿ ಪೂಜೆ ನಂತರ ಮಹಾ ಪ್ರಸಾದದ ಸೇವೆಯನ್ನು ಅಮೃತ ತೋಸ್ನಿವಾಲ ನಡೆಸಿಕೊಟ್ಟರು.