“ನಮ್ಮೂರು ನಮ್ಮ ಕೆರೆ” ಸಮಿತಿಯ ಪ್ರೇರಣಾ ಸಭೆ

ಕೋಲಾರ, ಆ.೩೧: ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮದಡಿಯಲ್ಲಿ ರಾಜ್ಯಾದ್ಯಂತ ಕೆರೆಗಳನ್ನು ಹೂಳೆತ್ತುವುದು ಹಾಗೂ ಅಂತರ್ಜಲ ಸಂರಕ್ಷಣೆ, ಪ್ರಾಣಿಪಕ್ಷಿಗಳಿಗೆ ಕುಡಿಯಲು ನೀರು, ವಾಸಿಸಲು ಸ್ಥಳಾವಕಾಶ ಮಾಡುವುದರ ಜೊತೆಗೆ ಕೆರೆಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಿ ಎನ್ನುವ ನುಡಿಯಂತೆ ಸಂಸ್ಥೆಯು ಕೆಲಸವನ್ನು ಮಾಡುತ್ತಿದೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಸೀನಪ್ಪ ಎಂ. ತಿಳಿಸಿದರು.
ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಭವನದಲ್ಲಿ ಆಯೋಜಿಸಿದ್ದ ಕೋಲಾರ ಜಿಲ್ಲಾ ಕೆರೆ ಸಮಿತಿಯ ಪ್ರೇರಣಾ ಸಭೆಯಲ್ಲಿ ಅವರು ಮಾತನಾಡಿ ಸಮಿತಿಯ ಜವಾಬ್ದಾರಿ ಹಾಗೂ ನಿರ್ವಹಣೆ ಬಗ್ಗೆ ಮಾಹಿತಿಯನ್ನು ನೀಡುತ್ತಾ ಧರ್ಮಸ್ಥಳ ಸಂಸ್ಥೆಯು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ ಎಂದು ಹೇಳಿದರು,
ಪ್ರತಿ ಕೆರೆಯ ಸಮಿತಿಗಳು ರಚನೆಯಾಗಿದ್ದು ಕೆರೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು, ಕೆರೆಗಳಿಗೆ ನೀರು ಬರುವಂತೆ ಮಾಡಿಕೊಳ್ಳುವುದು, ಕೆರೆಯ ಅಂಚಿನಲ್ಲಿ ಗಿಡ ನಾಟಿ ಮಾಡುವುದು, ಸಮಿತಿಯವರು ಶ್ರಮದಾನ ಮಾಡಿ ಕೆರೆಯನ್ನು ಸ್ವಚ್ಛಗೊಳಿಸುವುದು, ಕೆರೆಗಳನ್ನು ದೇವಾಲಯದಂತೆ ನೋಡಿಕೊಳ್ಳುವುದು, ಕೆರೆಗೆ ಕೊಳಚೆ ನೀರು ಬಾ ನೋಡಿಕೊಳ್ಳುವುದು, ಸರಕಾರದ ಅನುದಾನ ಬಳಕೆ ಮಾಡಿ ಕೆರೆಯ ಇತರೆ ಕೆಲಸವಾದ ಕೋಡಿ ಮತ್ತು ತೂಬು ರಿಪೇರಿ ಮಾಡಿಕೊಳ್ಳುವುದು, ವರ್ಷಕ್ಕೊಮ್ಮೆ ಕೆರೆಯಲ್ಲಿ ಸಂಜೆಯ ಸಮಯದಲ್ಲಿ ಮಕ್ಕಳಿಗೆ ಆಟವಾಡಿಸುವ ಮೂಲಕ ಕೆರೆಯ ಬಗ್ಗೆ ಅರಿವು ಮೂಡಿಸುವುದಾಗಿದೆ ಎಂದು ವಿವರಿಸಿದರು.
ಕೋಲಾರ ಜಿಲ್ಲೆಯ ಎಲ್ಲಾ ತಾಲೂಕಿನ ಒಟ್ಟು ೨೦ ಕೆರೆ ಸಮಿತಿಯವರು ೮೦ ಜನ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕೆರೆ ಅಭಿವೃದ್ಧಿ ಮತ್ತು ಸಂರಕ್ಷಣೆ ಕುರಿತು ಮಾಹಿತಿ ನೀಡಲಾಯಿತು.
ಕೋಲಾರ ಜಿಲ್ಲಾ ನಿರ್ದೇಶಕ ಪದ್ಮಯ ಸಿ.ಎಚ್, ಆರ್‌ಸೆಟ್ ಕೆನರಾಬ್ಯಾಂಕ್ ನಿರ್ದೇಶಕ ಯಲ್ಲೇಶ್, ಪ್ರಾದೇಶಿಕ ಕೆರೆ ಇಂಜಿನಿಯರ್ ಅರುಣ್ ಕುಮಾರ್, ಕೋಲಾರ ಯೋಜನಾಧಿಕಾರಿ ಸಿದ್ದಗಂಗಯ್ಯ ಹಾಗೂ ಸಿಬ್ಬಂದಿಗಳು ಮತ್ತು ಕೆರೆಯ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.