ನಮ್ಮೂರು ನಕ್ಷತ್ರ ರಾಜ್ಯಮಟ್ಟದ ಪ್ರಶಸ್ತಿಗೆ ಯಲ್ಲಪ್ಪ ಜೆಇ ಆಯ್ಕೆ

ಮಾನ್ವಿ.ಆ.೦೧-ನಮ್ಮೂರ ಕಾಯಕ ರತ್ನ”ಹಾಗೂ ನಮ್ಮೂರು ನಕ್ಷತ್ರ” ಪ್ರಶಸ್ತಿಗೆ ಯಲ್ಲಪ್ಪ ತಂದೆ ಭೀಮಪ್ಪ ಅಲಿಯಾಸ್ ಜೆಇ ಉಮಳಿಹೊಸುರು ಆಯ್ಕೆಯಾಗಿದ್ದಾರೆ.
ನಮ್ಮೂರ ಸುದ್ದಿ ಹಾಗೂ ನಮ್ಮೂರ ಅಭಿವೃದ್ಧಿ ವಿವಿದ್ದೇಶಗಳ ಸೇವಾ ಸಂಸ್ಥೆ ವಿಜಯಪುರ್ ಯುವರ ಸೇವಾ ಸಯೋಗದಲ್ಲಿ ನಮ್ಮೂರ ಕಾಯಕ ರತ್ನಹಾಗೂ ನಮ್ಮೂರು ನಕ್ಷತ್ರ ಪ್ರಶಸ್ತಿ ಸಮಾರಂಭ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಮಾನ್ವಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಹಾಗೂ ಚಿಕ್ಕ ಕೊಟ್ನೆಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಉಮಳಿ ಹೊಸೂರು ಗ್ರಾಮದ ಯಲ್ಲಪ್ಪ ತಂದೆ ಭೀಮಪ್ಪ ಅಲಿಯಾಸ್ ಜೆಇ
ಇವರ ಸಾಮಾಜಿಕ ಸೇವೆ ಗುರುತಿಸಿ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿರುವುದು ತಿಳಿದು ನಮ್ಮೂರ ಸುದ್ದಿ ವಾಹಿನಿಯು ಕೊಡ ಮಾಡುವ ನಮ್ಮೂರು ನಕ್ಷತ್ರ ರಾಜ್ಯಮಟ್ಟದ ಪ್ರಶಸ್ತಿ ಪತ್ರಕ್ಕೆ ಪುರಸ್ಕೃತರಾಗಿರುವುದಕ್ಕೆ ರಾಯಚೂರು ಜಿಲ್ಲೆಯ ಸಮಸ್ತ ನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ.