ನಮ್ಮೂರು ಜಾತ್ರೆ ಕವಿಗೋಷ್ಠಿಗೆ ಆಯ್ಕೆ

ಕಲಬುರಗಿ.ಏ.19:ವಸಂತ ಕಾಲ ಬಂದರೆ ಜಾತ್ರಾ ಉತ್ಸವಗಳೇ ಜಾಸ್ತಿ. ಯುಗಾದಿ ಆಚರಿಸುವ ಮೂಲಕ ಹೊಸ ಕಳೆ ತರುವ ಜಾತ್ರೆಗಳು ನಮ್ಮ ಗ್ರಾಮೀಣ ಸಂಸ್ಕøತಿಯ ಜೀವಾಳಗಳು. ಈ ದಿಸೆಯಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಬಳಗ ಜಿಲ್ಲಾ ಘಟಕದ ಆಶ್ರಯದಲ್ಲಿ ಭಾನುವಾರ ಜರುಗಿದ ಆನ್‍ಲೈನ್ ಕವಿಗೋಷ್ಠಿ ಸ್ಪರ್ಧೆ ಏರ್ಪಡಿಸಲಾಗಿತ್ತು.
ಘಟಕದ ಜಿಲ್ಲಾದ್ಯಕ್ಷ ಮಹಾಂತೇಶ್ ಎನ್. ಪಾಟೀಲ್ ಯಾತನೂರ್ ಅವರ ನೇತೃತ್ವದಲ್ಲಿ ‘ನಮ್ಮೂರು ಜಾತ್ರೆ’ ಎಂಬ ಶೀರ್ಷಿಕೆಯಡಿ ಆಯೋಜಿಸಿದ ಕವಿಗೋಷ್ಠಿಯಲ್ಲಿ ಜಿಲ್ಲೆಯ ಅನೇಕ ಯುವ ಕವಿಗಳು, ಹಿರಿಯರು ಭಾಗವಹಿಸಿದ್ದರು. ಅವರಲ್ಲಿ ಅತ್ಯುತ್ತಮ ಮೂರು ಕವನಗಳನ್ನು ಆಯ್ಕೆ ಮಾಡಲಾಗಿದೆ. ಹಾಗೂ ಮೂರು ಮೆಚ್ಚುಗೆ ಕವನಗಳೆಂದು ಆಯ್ಕೆ ಮಾಡಲಾಗಿದೆ.
ಶಿಕ್ಷಕಿ ಅನುಸೂಯಾ ನಾಗನಳ್ಳಿ (ಪ್ರಥಮ), ಶರಣರೆಡ್ಡಿ ಕೋಡ್ಲಾ (ದ್ವಿತೀಯ) ಹಾಗೂ ಅಶ್ವಿನಿ ಎಂ. ಪಾಟೀಲ್ (ತೃತೀಯ) ಸ್ಥಾನ ಪಡೆದರು. ಹಾಗೂ ಉಮಾ ಆರ್. ಪ್ರದಾನ್, ಸರೋಜಾದೇವಿ ಆರ್.ಎನ್., ರತ್ನಾ ಎಂ. ಅಂಗಡಿ ಅವರ ಕವನಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ. ಶಿಕ್ಷಕಿ ವಿಜಯಲಕ್ಷ್ಮೀ ಗುತ್ತೇದಾರ್ ಅವರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. 25 ಜನ ಕವಿಗಳು ಭಾಗವಹಿಸಿದ್ದರು. ಭಾಗವಹಿಸಿದ್ದ ಎಲ್ಲರ ಕವನಗಳು ಅರ್ಥಪೂರ್ಣವಾಗಿದ್ದವು.