ನಮ್ಮವರ ಕುತಂತ್ರದಿಂದಲೇ ಜನಾರ್ಧನರೆಡ್ಡಿ ಜಿಲ್ಲೆಯಿಂದ ಹೊರಗೆ: ಲಕ್ಷ್ಮೀ ಅರುಣ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮೇ,8- ಕೆಲವರ ಕುತಂತ್ರದಿಂದ  ನನ್ನ ಪತಿ ಅಕ್ರಮ ಗಣಿಗಾರಿಕೆ ಆರೋಪದಿಂದ ಜೈಲು ಪಾಲಾಗಿದ್ದರು. ನಮ್ಮವರ ಷಡ್ಯಂತ್ರದಿಂದಲೇ ಈಗ  ಬಳ್ಳಾರಿಯಿಂದ ದೂರ ಇರುವಂತಾಗಿದೆಂದು ಕೆಆರ್ ಪಿ ಹಅಭ್ಯರ್ಥಿ ಲಕ್ಷ್ಮೀ ಅರುಣ ಆರೋಪ ಮಾಡಿದ್ದಾರೆ.
ಅವರು ನಿನ್ನೆ ಸಂಜೆ ಹಾವಂಬಾವಿಯ ತಮ್ಮ ಹೆಲಿಪ್ಯಾಡ್ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಬಹುರಂಗ ಚುನಾವಣಾ ಸಮಾವೇಶದಲ್ಲಿ ಮತದಾರರನ್ನು ಉದ್ದೇಶಿಸಿ  ಮಾತನಾಡುತ್ತಿದ್ದರು.
ಜನಾರ್ಧನರೆಡ್ಡಿ ಅವರು ವಜ್ರ ಇದ್ದಂತೆ. ಅವರ ಏಳಿಗೆಯನ್ನು ಸಹಿಸದ  ನಮ್ಮ‌ಜೊತೆಗಿದ್ದವರೇ  ಮೋಸ ಮಾಡಿದ್ದರಿಂದ ಐದು ವರ್ಷಗಳ‌ಕಾಲ‌ ಜಾಲ ನಲ್ಲಿರಬೇಕಾಯ್ತು. ಆ ಸಮಯದಲ್ಲಿ ನಾನು ನನ್ನ ಮಕ್ಕಳು ಒಂದೇ ಒಂದು ಹಬ್ಬವನ್ನು ಮಾಡದೆ ಸಂಕಷ್ಟದ ದಿನಗಳನ್ನು ಕಳೆದಿದ್ದೇವೆ. ನಮ್ಮ‌ಸಂಕಷ್ಟಕ್ಕೆ ಸ್ಪಂದಿಸಲು ಯಾರು ಬರಲಿಲ್ಲ‌ ಎಂದು ಭಾವನಾತ್ಕವಾಗಿ ಮಾತನಾಡಿದರು.
ಜನಾರ್ಧನರೆಡ್ಡಿ ಅವರಿಗೆ  ಜಾಮೀನು ಸಿಕ್ಕರೂ ಬಳ್ಳಾರಿಗೆ ಬರದಂತೆ ಮಾಡಿ. ಇಲ್ಲಿ ತಮ್ಮದೇ ರಾಜಕೀಯ ಗುಂಪು ತಯಾರು ಮಾಡಿದರು.  ಆ ಗುಂಪಿನಲ್ಲಿ ನಮ್ಮವರು ಸೇರಿಕೊಂಡಿದ್ದಾರೆಂದರು.
ಬಳ್ಳಾರಿ‌ ನಗರದ  ಅಭಿವೃದ್ದಿಯ ಕನಸುಗಾರ ಜನಾರ್ಧನರೆಡ್ಡಿ. ಅವರು ಇಲ್ಲಿಗೆ  ಬಾರಲು ಆಗದ ಕಾರಣ ಬಳ್ಳಾರಿ ನಗರ ಅಭ್ಯರ್ಥಿ ಆಗಿ ನನ್ನನ್ನು ಮಾಡಿದ್ದಾರೆಂದರು.
ಮಾಯ, ನಗರ ಶಾಸಕ  ಸೋಮಶೇಖರ್ ರೆಡ್ಡಿ ಆಪ್ತರೊಬ್ಬರು ನನಗೆ ಬಳ್ಳಾರಿ ನಗರದಿಂದ ಸ್ಪರ್ಧೆ ಬೇಡ. ದೇವರಹಿಪ್ಪರಗಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ  ಎಂದರು. ಆದರೆ ನಾನು ಅವರಿಗೆ  ಜನಾರ್ದನರೆಡ್ಡಿ ಅವರನ್ನು ಬಳ್ಳಾರಿಯಿಂದ ದೂರ ಮಾಡಿದಂತೆ ನನ್ನನ್ನು ದೂರ ಮಾಡಬಹುದು, ಹೀಗಾಗಿ ನಾನು ಬಳ್ಳಾರಿ ನಗರದಿಂದಲೇ ಸ್ಪರ್ಧೆ ಮಾಡೋದಾಗಿ ಕಣದಲ್ಲಿರುವೆಂದು ಪರೋಕ್ಷವಾಗಿ ಸೋಮಶೇಖ‌ರೆಡ್ಡಿ ವಿರುದ್ಧ  ವಾಗ್ದಾಳಿ ನಡೆಸಿದರು.
ನಮ್ಮವರು ನಮ್ಮ ಬಗ್ಗೆ ಊರಿನಲ್ಲಿ ಇರುವುದಿಲ್ಲ. ಅಂತಾ ಅಪಪ್ರಚಾರ ಮಾಡುತ್ತಿದ್ದಾರೆ.  ತಮ್ಮ ನೈತಿಕತೆ ಬಗ್ಗೆ  ಅವರು ಪ್ರಶ್ನೆ ಮಾಡಿಕೊಳ್ಳಲಿ ಎಂದ ಅವರು, ಬಹಿರಂಗ ಸಮಾವೇಶದಲ್ಲಿ ಸೆರಗೊಡ್ಡಿ ಮತ ಭಿಕ್ಷೆ ಕೇಳಿದರು ಲಕ್ಷ್ಮೀ ಆರುಣ.
ಸಮಾವೇಶದಲ್ಲಿ ಪಕ್ಷದ ಮುಖಂಡರುಗಳಾದ ಗೋನಾಳರಾಜಶೇಖರಗೌಡ, ಮಾಜಿ ಮೇಯರ್ ವೆಂಕಟರಮಣ, ಕೋನಂಕಿ ರಾಮಪ್ಪ, ಕೋನಂಕಿ ತಿಲಕ್, ಮುನ್ನಾಭಾಯ್ ಸೇರಿದಂತೆ ಹಲವು ಮುಖಂಡರು ಇದ್ದರು.