ನಮ್ಮವರನ್ನು ನಾವು ಗುರುತಿಸಿ ಗೌರವಿಸಬೇಕು

ಸಿರವಾರ.ಜೂ.೩-ಶ್ರೀಮಂತರಿಗೆ, ಅಧಿಕಾರಿಗಳಿಗೆ ಗೌರವಿಸುವ ಮೊದಲು ನಮ್ಮ ನೇರೆ-ಹೊರೆಯವರನ್ನು ಮೊದಲು ಗುರಿತಿಸಿ ಗೌರವಿಸಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಅಂಜುಮಾನ್ ಕಮಿಟಿ ಸದಸ್ಯ ಹಾಜಿ ಚೌದ್ರಿ ಹೇಳಿದರು.
ಸಿರವಾರ ಅಂಜುಮಾನ್ ಕಮಿಟಿಯ ಸದಸ್ಯರಾದ ಸತ್ತರಸಾಬ್ ಗುತ್ತೆದಾರ, ಇಬ್ರಾಹಿಂ ಎಲ್.ಐ.ಸಿ, ಅಜ್ಮೀರ್, ರಾಜಮಹ್ಮದ್, ಎಂ.ಡಿ.ವಾಹಿದ್, ಹಾಜಿ, ಮದೀನ ಜಂಗಿ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಶಾದಿಮಹಲ್ ನಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಮಂತರಿಗೆ, ವಿವಿಧ ಪಕ್ಷದ ನಾಯಕರಿಗೆ,ಅಧಿಕಾರಿಗಳಿಗೆ, ಮುಖಂಡರಿಗೆ ನಾವು ಪರಿಚಯ ಇಲ್ಲದೆ ಇದ್ದರೂ ಅವರ ಹುಟ್ಟುಹಬ್ಬಕ್ಕೆ ಶುಭಾಷಯ ಕೊರುತ್ತೆವೆ.
ಅದರೆ ನಮ್ಮ ಸುತ್ತಮುತ್ತ ಇರುವವರ ಹುಟ್ಟುಹಬ್ಬ ಮರೆತು ಬಿಡುತೆವೆ. ಆದರೆ ನಮ್ಮ ಕಮಿಟಿಯ ಸದಸ್ಯರ ಹುಟ್ಟುಹಬ್ಬವನ್ನು ಆಚರಣೆ ಮಾಡುವ ಮೂಲಕ ಅವರನ್ನೂ ಗೌರವಿಸುವ ಕೆಲಸ ಮಾಡುತ್ತಿದೆವೆ. ಇದೂ ಅಲ್ಲದೆ ಅನೇಕ ಜನಪರ ಕಾರ್ಯಗಳನ್ನು ನಮ್ಮ ಕಮಿಟಿ ಮಾಡುತ್ತಿದೆ. ಈ ಕಾರ್ಯ ಹೀಗೆ ಸಾಗಲಿ ಎಂದರು.
ಅಂಜುಮಾನ್ ಕಮಿಟಿ ಅಧ್ಯಕ್ಷ ವಲಿಗುತ್ತೆದಾರ ಮಾತನಾಡಿ ಎರಡು ವರ್ಷದಿಂದ ಅಂಜುಮನ್ ಕಮಿಟಿ ಬಹಳ ಕೆಲಸ ಮಾಡುತ್ತಿದೆ ಬಡವರಿಗೆರಗ್ ದಾನ, ಲಾಕ್‌ಡೌನ್‌ನಲ್ಲಿ ಅಹಾರ ಕೀಟ್, ಕ್ರಿಸ್ಮಸ್ ಹಬ್ಬದಲ್ಲಿ ಬಡವರಿಗೆ ಕೀಟ್. ಬಡವರಿಗೆ ಐಡಿ ಕಾರ್ಡ್ ಮತ್ತೆ ಆಧಾರ್ ಕಾರ್ಡ್ ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅನುಕೂಲವಾಗಲೆಂದು ಕಿಟ್ ಮತ್ತು ತಾಲೂಕಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದವರಿಗೆ ಬಹುಮಾನ ಇಂತಹ ಅನೇಕ ಕೆಲಸ ಮಾಡುವ ಮೂಲಕ ನೇರವಾಗಿದ್ದೆವೆ. ಸದಸ್ಯರಿಗೆ ಮುಂದಿನ ದಿನಗಳಲ್ಲಿ ರಾಜಕೀಯ ಶಕ್ತಿ ಕೂಡಿದರೆ(ಪ.ಪಂಚಾಯತಿ ಚುನಾವಣೆ) ಇನ್ನೂ ಹೆಚ್ಚಿನ ಸಹಾಯ ಮಾಡಬಹುದು ಎಂದರು. ಈ ಸಂದರ್ಭದಲ್ಲಿ ಹಸೇನ್ ಅಲಿ, ಮಹಿಬೂಬ್ ಸಾಬ್ ದೊಡ್ಮನೆ, ಮೌಲಸಾಬ್ ವರ್ಚಸ್, ಮೊಹಿನ್ ಗುತ್ತೆದಾರ, ಪ.ಪಂ ಸದಸ್ಯ ಇರ್ಪಾನ್ ಬಢಾಘರ್ ಸೇರಿದಂತೆ ಇನ್ಮಿತರರು ಇದ್ದರು.