ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಒಗ್ಗಟ್ಟಾಗಿದ್ದೆವೇ:ಗುರು ಪಾಟೀಲ ಶಿರವಾಳ

ಕೆಂಭಾವಿ: ಡಿ.3: ಮುಂಬರುವ ಪುರಸಭೆಯಲ್ಲಿ ಚುನಾವಣೆಯಲ್ಲಿ ಎಲ್ಲ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಬಿಜೆಪಿ ಪಕ್ಷಕ್ಕೆ ಪೂರಕವಾದ ವಾತಾವರಣವಿದೆ ಎಂದು ಮಾಜಿ ಶಾಸಕ ಗುರು ಪಾಟೀಲ ಶಿರವಾಳ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು, ಮತದಾರರು ಯಾವದೆ ಊಹಾಪೆÇೀಹಗಳಿಗೆ ಕಿವಿಗೊಡಬಾರದು. ನಮ್ಮ ನಾಯಕರಲ್ಲಿ ಯಾವದೆ ತೆರನಾದ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೆವೆ, ಮುಂದೆಯೂ ಮಾಡುತ್ತೆವೆ. ನಾವಿಬ್ಬರೂ ಒಗ್ಗಟ್ಟಾಗಿರುವದರಿಂದ ವಿರೋಧ ಪಕ್ಷದಲ್ಲಿ ನಡುಕ ಹುಟ್ಟಿದೆ. ಕೆಂಭಾವಿ ಪುರಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯನ್ನು ಪಕ್ಷ ಒಗ್ಗಟ್ಟಿನಿಂದ ಮಾಡಲಿದೆ. ಅಭ್ಯರ್ಥಿಗಳನ್ನು ಪಕ್ಷವು ನಿರ್ಧರಿಸುತ್ತದೆ. ಪಕ್ಷದ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿದ್ದೆವೆ. ಏನೆ ನಿರ್ಧಾರ ತೆಗೆದುಕೊಂಡರೂ ಅದು ಪಕ್ಷದ ನಿರ್ಧಾರವಾಗಲಿದೆ ಎಂದು ತಿಳಿಸಿದರು.
ಯುವ ಮುಖಂಡ ಅಮೀನರೆಡ್ಡಿ ಪಾಟೀಲ ಯಾಳಗಿ ಮಾತನಾಡಿ, ಪಕ್ಷದಲ್ಲಿ ಎಲ್ಲರಿಗೂ ಸಮನಾದ ಜವಾಬ್ಧಾರಿ ನೀಡಲಾಗುತ್ತದೆ. ಶೀಘ್ರದಲ್ಲೆ ಸಭೆ ಕರೆದು ಆಕಾಂಕ್ಷಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಈ ಬಾರಿಯ ಪುರಸಭೆ ಚುನಾವಣೆ ಜಿದ್ದಾಜಿದ್ದಿನದು ಆಗಿರುತ್ತದೆ. ಕಾರ್ಯಕರ್ತರು ಗೊಂದಲಕ್ಕಿಡಾಗದೆ ಪಕ್ಷದ ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು. ಈ ಚುನಾವಣೆಯನ್ನು ಪಕ್ಷ ಸವಾಲಾಗಿ ಸ್ವೀಕರಿಸಿದೆ. 100 ಪ್ರತಿಶತ ನಾವು ಗೆದ್ದೆ ಗೆಲ್ಲುತ್ತೆವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಸವರಾಜ ವಿಭೂತಿಹಳ್ಳಿ, ಸಂಗಣ್ಣ ತುಂಬಗಿ, ಶಂಕರ ಕರಣಗಿ, ಡಾ.ರವಿ ಅಂಗಡಿ ತಾಹೇರಪಾಶಾ ಖಾಜಿ, ಶಂಕ್ರೆಪ್ಪ ದೇವೂರ, ವಿಕಾಸ ಸೊನ್ನದ, ಉಮೇಶರೆಡ್ಡಿ, ಗೌಡಪ್ಪಗೌಡ, ಗಿರಿರಾಜ, ದೇವು ಯಾಳಗಿ, ಹಳ್ಳೆಪ್ಪ, ಭೀಮನಗೌಡ, ರಾಜು ಬಾಣತಿಹಾಳ, ಮುದಕಣ್ಣ ಸೇರಿದಂತೆ ಇತರರಿದ್ದರು.

ಕೆಂಭಾವಿ ಪುರಸಭೆ ಚುನಾವಣೆಯ ಪೂರ್ವಭಾವಿ ಸಭೆಯನ್ನು ಡಿ.4, ಶನಿವಾರದಂದು ಕರೆಯಲಾಗಿದೆ. ಎಲ್ಲ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಟಿಕೆಟ್ ಆಕಾಂಕ್ಷಿಗಳು ಸಭೆಗೆ ಹಾಜರಾಗಬೇಕು ಎಂದು ಶಹಾಪುರ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜುಗೌಡ ಉಕ್ಕನಾಳ ತಿಳಿಸಿದ್ದಾರೆ.