ನಮ್ಮಲ್ಲಿರುವುದು ಬಿಎಸವೈ ಹವಾ

ದಾವಣಗೆರೆ ಮೇ 28; ಕಾಡಿನಲ್ಲಿದ್ದ ದೆವ್ವವನ್ನು ಕರೆತಂದು ಮನೆಯಲ್ಲಿ ಕೂರಿಸಿ ದೇವರ ಸ್ಥಾನ ನೀಡಿದ ಯಡಿಯೂರಪ್ಪರವರ ಬಗ್ಗೆ ಹಗುರವಾಗಿ ಮಾತನಾಡಿದ ಸಿ.ಪಿ.ಯೋಗೆಶ್ವರವರು ಒಮ್ಮೆ ಆತ್ಮಹವಲೋಕನ ಮಾಡಿಕೊಳ್ಳಲಿ. ಇಡೀ ದೇಶದ ಸಂಸದರು ಮೋದಿ ಹೆಸರಿನಲ್ಲಿ ಗೆದ್ದಿದ್ದರೆ ನಮ್ಮ ಕರ್ನಾಟಕದಲ್ಲಿ ಮಾತ್ರ ಮೋದಿ ಜೊತೆಗೆ ಬಿಎಸ್ ವೈ ಹೆಸರಿನಲ್ಲಿ ಗೆದ್ದಿದ್ದಾರೆ. ದೆಹಲಿ ನಾಯಕರು ನಾಟಕವಾಡದೇ ಸುಮ್ಮನಿರಬೇಕು. ಬಿಎಸವೈ ಒಬ್ಬ ಲಿಂಗಾಯತ ಸಮೂದಾಯದ ಜೊತೆಗೆ ಇತರೆ ಶೋಷಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ನೀಡಿದ ಮಹಾನ್ ನಾಯಕ ಎಂದು ದಾವಣಗೆರೆ ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ರವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಕೋರೋನಾ ಎಂಬ ಹೆಮ್ಮಾರಿಯಿಂದ ಜನತೆ ತತ್ತರಿಸಿ ಹೋಗಿದ್ದಾರೆ.ವಯಸ್ಸಾಗಿದ್ದರೂ ಯುವಕರಂತೆ ಜನರ ನಾಡಿಮಿಡಿತಕ್ಕೆ ಸ್ಪಂದಿಸುವ ಬಿಎಸ್ ವೈ ರವರನ್ನ ಇಂತಹ ಸಂದರ್ಭದಲ್ಲಿ ಬದಲಾಯಿಸುವ ಚಿಂತನೆ ಎಷ್ಟು ಸರಿ…?ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ ಹೆಚ್ಚಿನ ಅನುದಾನ ನೀಡದಿದ್ದರೂ ತಮ್ಮ ರಾಜ್ಯ ಸರ್ಕಾರಕ್ಕೆ ಗೌರವ ಘನತೆ ಹೆಚ್ಚಿಸಿಕೊಂಡಿರುವ ಮತ್ತು ನಾಡಿನ ಪ್ರತಿ ಹಳ್ಳಿಗಳಲ್ಲಿ ಸುತ್ತಾಡಿದ ಮತ್ತು ಪ್ರತಿಯೊಂದು ಸಮೂದಾಯಗಳ ನೋವು ನಲಿವುಗಳ ಬಗ್ಗೆ ಅರಿವಿರುವ ರಾಜ್ಯದ ಏಕೈಕ ನಾಯಕ ನಮ್ಮ ಬಿಎಸವೈ. ಇಲ್ಲಿ  ಇಪ್ಪತೈದು ಸಂಸದರನ್ನ ದೆಹಲಿಗೆ ಕಳಿಸಿದ್ದರೂ ಹೆಚ್ಚಿನ ಅನುದಾನ ಕೊಡದೇ ತಾರತಮ್ಯ ಮಾಡಿದರೂ ಸುಮ್ಮನೆ ಕೂತಿದ್ದೇವೆ ಎಂದರೆ ಅದಕ್ಕೆ ಕಾರಣ ರಾಜ್ಯದಲ್ಲಿರೋದು ಬಿಎಸ್ ವೈ ಸರ್ಕಾರ ಎಂಬ ಕಾರಣಕ್ಕಾಗಿ ಎಂಬುದನ್ನ ದೆಹಲಿ ನಾಯಕರು ಮರೆಯಬಾರದು.ನೀವುಗಳು ಬಿಎಸವೈ ರವರನ್ನ ಬದಲಾಯಿಸಿದರೆ ನಾವುಗಳು ಬಿಜೆಪಿಯನ್ನ ಬದಲಾಯಿಸಬೇಕಾದಿತು ಎಂದಿದ್ದಾರೆ.