ನಮ್ಮಲ್ಲಾ ಪ್ರಗತಿಗೆ ಶಿಕ್ಷಣ ಕಾರಣ: ಪಿ ಎಸ್ ಐ ಸಂಗೀತ ಸಿಂಧೆ

ಬೀದರ :ಎ.1:ನಗರದ ಬಳವಂತರಾವ ವರಾಳೆ ಶಿಕ್ಷಣ ಸಂಸ್ಥೆಯ ಡಾ. ಬಿ.ಆರ್. ಅಂಬೇಡ್ಕರ ಹಿರಿಯ ಪ್ರಾಥಮಿಕ ಶಾಲೆ, ಲಾಡಗೇರಿ-ಬೀದರನಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ 7ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೋಡುಗೆ ಸಮಾರಂಭವನ್ನು ಮಾರ್ಕೆಟ್ ಪಿ.ಎಸ್.ಐ. ಕುಮಾರಿ ಸಂಗೀತಾ ಸಿಂಧೆ ರವರು ಉದ್ಘಾಟನೆ ಮಾಡಿ, ಪ್ರಗತಿಗೆ ಶಿಕ್ಷಣವೇ ಮೂಲ. ನಮ್ಮ ಎಲ್ಲಾ ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸಲು ಶಿಕ್ಷಣವೇ ಔಷಧವಾಗಿದೆ ಎಂದರು.
ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಹೆತ್ತ ತಂದೆ-ತಾಯಿ, ಕಲಿತ ಶಾಲೆ, ಶಾಲಾ-ಕಾಲೇಜುಗಳಿಗೆ ಮತ್ತು ಸಮಾಜಕ್ಕೆ ಒಳ್ಳೆಯ ಹೆಸರು ತರಬೇಕೆಂದು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ಮುಖ್ಯಗುರುಗಳಾದ ಗೋವಿಂದರಾವ ಪೂಜಾರಿ ವಹಿಸಿದ್ದರು.
ಸ್ವಾಗತವನ್ನು ಕು. ಸೌಮ್ಯ ಮಾಡಿದರು. ಮುಖ್ಯ ಅತಿಥಿಗಳಾಗಿ ಅಧ್ಯಕ್ಷರು, ಪ್ರಾ.ಕೃ.ಪ.ಸ.ಸಂಘ, ನಿಯಮಿತ, ಮೈಲೂರು, ವೈಜಿನಾಥ ಆನಂದೆ, ಎ.ಪಿ.ಎಂ.ಸಿ. ಅಧ್ಯಕ್ಷರಾದ ವಿಜಯಕುಮಾರ ಆನಂದೆ ಹಾಗೂ ವಿಶ್ವ ಕನ್ನಡಿಗರ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಸುಬ್ಬಣ್ಣ ಕರಕನಳ್ಳಿ, ಪ್ರಾಚಾರ್ಯರಾದ ಗಂಗಶೆಟ್ಟಿ ಖಾನಾಪೂರೆ ವಹಿಸಿದ್ದರು. ಶಾಲೆಯಲ್ಲಿ ನಡೆದ ಸಂಸ್ಕøತಿಕ ಕಾರ್ಯಕ್ರಮ ಶಾಲಾ ವಿದ್ಯಾರ್ಥಿಗಳಾದ ವಿಶಾಖಾ, ಅರ್ಚನಾ, ನಾಗಲಕ್ಷ್ಮಿ, ವಿಜಯಲಕ್ಷ್ಮಿ ಸೋಹೇಬ್, ಅನುಷ್ಕಾ, ಸುಪ್ರಿಯಾ, ಶ್ರವಣ, ಮಮತಾ, ಶಿವಾನಿ, ಅಸ್ಲಂ, ಸಾಧನಾ ತಂಡದವರಿಂದ ಸಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದ ನಿರೂಪಣೆ ಶ್ರೀಮತಿ ಶಶಿಕಲಾ ಮಾಳಗೆ ಮಾಡಿದರು. ತರಬೇತಿ ಶಿಕ್ಷಕರಾದ ಸೌಮ್ಯ, ಲಿಲ್ಲಿರೋಜ ಹಾಗೂ ಸುಧಾರಾಣಿ ರವರು ಹಾಡುಗಳನ್ನು ಹಾಡಿ ರಂಜಿಸಿದರು. ಸಹ ಶಿಕ್ಷಕರಾದ ಅನುರಾಧ, ಅನ್ನಪೂರ್ಣ ಜಾಧವ ಹಾಗೂ ಶಶಿಕಲಾ ಗುರು ಮುಂತಾದವರಿಗೆ ಸನ್ಮಾನಿಸಲಾಯಿತು.