ನಮ್ಮನ್ನು ಪದಚ್ಯುತಿಗೊಳಿಸುವ ಅಧಿಕಾರ ಎಂ.ವಸಂತವರಿಗಿಲ್ಲ

ರಾಯಚೂರು,ಮಾ.೩೧- ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಸ್ಥಾನದಿಂದ ನನ್ನನ್ನು ಪದಚ್ಯುತಿಗೊಳಿಸುವ ಅಧಿಕಾರ ಎಂ.ವಸಂತ ಅವರಿಗೆ ಇಲ್ಲ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಕೆ.ನಾಗಲಿಂಗಸ್ವಾಮಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಕಳೆದ ನಾಲ್ಕು ತಿಂಗಳಿಂದ ಜಿಲ್ಲಾಧ್ಯಂತ ಸಮಾಜವನ್ನು ಕಟ್ಟುವ ಕೆಲಸ ಜಿಲ್ಲಾ ಸಮಿತಿ ಮಾಡುತ್ತಿದೆ.ಇದನ್ನು ಸಹಿಸದ ಎಂ. ವಸಂತ ಅವರು ಬೈಲಾದ ಯಾವುದೇ ನಿಯಮ ಉಲ್ಲಂಘಸದಿದ್ದರೂ ಕೂಡ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಹೇಳಿರುವುದು ಖಂಡನೀಯ.ಎಂ.ವಸಂತ ಅವರಿಗೆ ಸಂಘಟನೆ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲ.
ಸಂಘಟನೆ ಬಗ್ಗೆ ತಿಳುವಳಿಕೆ ಇದ್ದರೆ ಅವರು ಬೈಲಾದ ಪ್ರಕಾರ ನಿಯಮಗಳನ್ನು ಅನುಸರಿಸುತ್ತಿದ್ದರು.ನನ್ನ ಹಾಗೂ ಪ್ರದಾನ ಕಾರ್ಯದರ್ಶಿ ಮೇಲೆ ಮಾಡಿದ ಆರೋಪದಲ್ಲಿ ಹುರುಳಿಲ್ಲ.ಎಂ.ವಸಂತ ಅವರು ರಾಯಚೂರು ಬಿಟ್ಟು ಅಸ್ಕಿಹಾಳದಲ್ಲಿ ಇವರ ಹೆಸರು ಗೊತ್ತಿಲ್ಲ. ಇಂಥವರನ್ನು ರಾಜ್ಯ ನಿರ್ದೇಶಕರನ್ನಾಗಿ ಮಾಡಿದ ಕೀರ್ತಿ ರಾಜ್ಯ ಅಧ್ಯಕ್ಷ ಕೆ. ಶಿವರಾಮ್ ಅವರಿಗೆ ಸಲ್ಲುತ್ತದೆ.
ಅವರ ಆಶೀರ್ವಾದದಿಂದ ಗೆದ್ದ ಅವರು ರಾಜ್ಯಾದ್ಯಂತ ಆದೇಶಗಳನ್ನು ಹಾಗೂ ನಿರ್ದೇಶನಗಳನ್ನು ಪ್ರಶ್ನಿಸುವ ಮೂಲಕ ಸಂಘ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಇವರನ್ನು ರಾಜ್ಯ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಎಂ.ವಸಂತ ಅವರು ರಾಜ್ಯ ನಿರ್ದೇಶಕರು ಎನ್ನುವುದನ್ನು ಮರೆತು ಕಾಂಗ್ರೆಸ್ ಎಸ್.ಸಿ.ಸೆಲ್ ಕಾರ್ಯದರ್ಶಿಯಾಗಿದ್ದಾರೆ.ನಮ್ಮನ್ನು ಉಚ್ಚಾಟಿಸುವ ಅಧಿಕಾರ ಆದೇಶ ಮಾಡಿದವರಿಗೆ ಇರುತ್ತದೆ ಹೊರತು ಇವರಿಗೆ ಇರುವುದಿಲ್ಲ ಎಂದರು.
ಜಿಲ್ಲಾ ಸಮಿತಿ ವಿರುದ್ದ ಹೇಳಿಕೆ ಕೊಡುವುದು ಸರಿಯಾದ ಕ್ರಮವಲ್ಲ. ರಾಜ್ಯ ನಿರ್ದೇಶಕ ಎಂ.ವಸಂತ ಅವರು ಕೊಪ್ಪಳ ಹಾಗೂ ರಾಯಚೂರು ಉಸ್ತುವಾರಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಕೊಪ್ಪಳದಲ್ಲಿ ಎಷ್ಟು ಸಮಿತಿಗಳನ್ನು ಕಟ್ಟಿದ್ದಾರೆ ಪ್ರಶ್ನಿಸಿದರು.
ಸಮಾಜದ ಮತ್ತು ಸಂಘಟನೆಯ ವಿರುದ್ದ ಕೆಲಸ ಮಾಡುತ್ತಿರುವ ಗೌರವಾಧ್ಯಕ್ಷ ಬಿ. ಎ. ದೊಡ್ಡಮನಿ ಉಪಾಧ್ಯಕ್ಷ ಗಾರ್ಲೆ ದಿಗಂಬರ, ರಾಯಚೂರು ನಗರ ಅಧ್ಯಕ್ಷ ವಿಜಯ ಪ್ರಸಾದ್ ಇವರನ್ನು ಕೂಡಲೇ ವಜಾಗೊಳಿಸಬೇಕು ಎಂದು ರಾಜ್ಯಾಧ್ಯಕ್ಷರಿಗೆ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಭೀಮಣ್ಣ ಮಂಚಾಲ ಸೇರಿದಂತೆ ಇತರರು ಉಪಸ್ಥಿತರಿದ್ದರು.